ಕೇಂದ್ರ BJP ಯಿಂದ ರಾಜ್ಯ ಸರಕಾರಕ್ಕೆ “ತೆರಿಗೆ ಏಟು”

Team Udayavani, Feb 7, 2024, 11:01 PM IST

tax

ಬೆಂಗಳೂರು: ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಅನುದಾನಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ಹೊರಾಟ ನಡೆಸಿದ ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಕೇಂದ್ರ ಬಿಜೆಪಿ ತೆರಿಗೆ ಏಟು ನೀಡಿದೆ.
ಕರ್ನಾಟಕ ರಾಜ್ಯವು ವಾಸ್ತವವಾಗಿ ಸಂಗ್ರಹಿಸುವುದಕ್ಕಿಂತ ಕಡಿಮೆ ತೆರಿಗೆ ಆದಾಯವನ್ನು ಪಡೆಯುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯರ ಆರೋಪ ಸುಳ್ಳು ಎಂದಿರುವ ಬಿಜೆಪಿ, ತೆರಿಗೆ ಸಂಗ್ರಹಣೆಯ ಕಾರ್ಯವಿಧಾನಗಳ ತಪ್ಪು ತಿಳಿವಳಿಕೆಯಿಂದಲೂ ಈ ರೀತಿ ಆರೋಪಿಸಿರಬಹುದು ಅಥವಾ ಚುನಾವಣ ಭರವಸೆಗಳನ್ನು ಈಡೇರಿಸಲಾರದ ಅಸಮರ್ಥತೆಯನ್ನು ಸಮರ್ಥಿಸಿಕೊಳ್ಳಲು ಹೀಗೆ ಆರೋಪಿಸುತ್ತಿರಬಹುದು ಎಂದಿದೆ.

ಇದೇ ತರ್ಕವನ್ನು ಕರ್ನಾಟಕಕ್ಕೆ ಅನ್ವಯಿಸುವುದಾದರೆ ಬೆಂಗಳೂರಿನಲ್ಲಿ ಅತೀ ಹೆಚ್ಚು ತೆರಿಗೆ ಸಂಗ್ರಹಣೆ ಆಗುತ್ತದೆ. ಹಾಗೆಂದು ಉಳಿದ ಜಿಲ್ಲೆಗಳನ್ನು ನಿರ್ಲಕ್ಷಿಸಲಾಗುತ್ತದೆ ಎಂದರ್ಥವೇ? ಎಂದು ಪ್ರಶ್ನಿಸಿದೆ. ವಿಭಜನೆಯನ್ನು ಉತ್ತೇಜಿಸುವ, ತಮ್ಮ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಜನರಲ್ಲಿ ಪ್ರತ್ಯೇಕತಾ ಭಾವ ಹುಟ್ಟುಹಾಕಲು ಇಂತಹ ವಾದಗಳನ್ನು ಮಾಡಲಾಗುತ್ತಿದೆ. ತುಕೆx ಗ್ಯಾಂಗ್‌ ಜತೆಗಿನ ಇಂತಹ ತಂತ್ರಗಳು ಏಕತೆಯನ್ನು ಹಾಳು ಮಾಡುವುದಲ್ಲದೆ, ಸಾಮಾಜಿಕ ಸಾಮರಸ್ಯಕ್ಕೆ ಅಪಾಯ ಉಂಟು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.

ಯಾವ ರಾಜ್ಯಕ್ಕೂ ವಿಶೇಷ ಅನುದಾನ ಶಿಫಾರಸು ಮಾಡಿಲ್ಲ
15ನೇ ಹಣಕಾಸು ಆಯೋಗವು 2021-22ರಿಂದ 2025-26ರ ವರೆಗಿನ ತನ್ನ ಅಂತಿಮ ವರದಿಯಲ್ಲಿ ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ. 2020-21ನೇ ಸಾಲಿನಿಂದ ಕರ್ನಾಟಕಕ್ಕೆ ಬಂಡವಾಳ ವೆಚ್ಚದ ಯೋಜನೆಗಳಿಗೆ ಸಹಾಯ ಮಾಡಲು 6,279.94 ಕೋಟಿ ರೂ. ಸಾಲವನ್ನು 50 ವರ್ಷಗಳಿಗೆ ಬಡ್ಡಿ ರಹಿತವಾಗಿ ನೀಡಿದೆ ಎಂದು ಹೇಳಿದೆ.

18,005 ಕೋಟಿ ರೂ. ಹೆಚ್ಚುವರಿ ಅನುದಾನ
2014-24 ರವರೆಗೆ ಕರ್ನಾಟಕಕ್ಕೆ 2,85,452 ಕೋಟಿ ರೂ.ಗಳ ತೆರಿಗೆ ಹಂಚಿಕೆಯನ್ನು ಕೇಂದ್ರ ಸರಕಾರ ಮಾಡಿದ್ದು, ಇದು 2004-14ರ ಅವಧಿಯಲ್ಲಿದ್ದ ಯುಪಿಎ ಸರ್ಕಾರಕ್ಕಿಂತ ಶೇ. 3.5ರಷ್ಟು ಹೆಚ್ಚು. 2014-23ರ ವರೆಗೆ 2,08,832 ಕೋಟಿ ರೂ.ಗಳನ್ನು ಎನ್‌ಡಿಎ ಸರಕಾರ ಬಿಡುಗಡೆ ಮಾಡಿದ್ದರೆ, 2004-14ರ ವರೆಗೆ ಇದ್ದ ಯುಪಿಎ ಸರಕಾರ 60,779 ಕೋಟಿ ರೂ. ಬಿಡುಗಡೆ ಮಾಡಿತ್ತು. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ 18,005 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವ ಪ್ರಸ್ತಾವ ಮಾಡಿದೆ. ಇದಲ್ಲದೆ 10 ವರ್ಷದಲ್ಲಿ ಎನ್‌ಡಿಎ ಸರಕಾರ ಕೊಟ್ಟ ಸಹಾಯಾನುದಾನದ ಮೊತ್ತವೇ 2,26,837 ಕೋಟಿ ರೂ. ಆಗಿದೆ ಎಂದು ಬಿಜೆಪಿ ಹೇಳಿದೆ.

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.