ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

Team Udayavani, Jan 26, 2022, 8:45 PM IST

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಬೆಂಗಳೂರು : ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ ಆಸ್ತಿ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತ ಗೌರವ್‌ ಗುಪ್ತ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಸಂಬಂಧ ಬುಧವಾರ ಅಧಿಕಾರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿ,ತಂತ್ರಜ್ಞಾನದ ಸಹಾಯ ಪಡೆದು ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಸೂಕ್ತ ಕ್ರಮ ವಹಿಸುವಂತೆ ತಾಕೀತು ಮಾಡಿದರು.ತೆರಿಗೆ ಹೆಚ್ಚಳದ ಸಂಬಂಧ ಕಂದಾಯ , ಸಹಾಯ ಕಂದಾಯ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.

ಪಾಲಿಕೆಗೆ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವ ಟಾಪ್‌ ಪಟ್ಟಿಯ ಅನುಸಾರ ಕಾನೂನು ರೀತಿಯ ಕ್ರಮ ಕೈಗೊಂಡು ತೆರಿಗೆ ವಸೂಲಿ ಮಾಡಬೇಕು. ಆಸ್ತಿ ತೆರಿಗೆ ಸಂಗ್ರಹವನ್ನು ಒಂದು ಗುರಿಯಾಗಿಟ್ಟುಕೊಂಡು ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು. ಪ್ರಸಕ್ತ ಸಾಲಿನಲ್ಲಿ 4,000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಇದುವರೆಗೆ 2,667.77 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಉಳಿದ ತೆರಿಗೆ ಸಂಗ್ರಹಕ್ಕಾಗಿ ಎಲ್ಲಾ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ವಿಶೇಷ ಆಯುಕ್ತರು(ಕಂದಾಯ) ಡಾ.ದೀಪಕ್‌.ಆರ್‌.ಎಲ್‌ ಹಾಗೂ ಎಲ್ಲಾ ವಲಯ ಆಯುಕ್ತರುಗಳು, ಎಲ್ಲಾ ವಲಯಗಳ ಜಂಟಿ ಆಯುಕ್ತರುಗಳು, ಕಂದಾಯ ವಿಭಾಗದ ಉಪ ಆಯುಕ್ತರು, ಕಂದಾಯ ವಿಭಾಗದ ಜಂಟಿ ಆಯುಕರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಲಯವಾರು ಆಸ್ತಿ ತೆರಿಗೆ ಸಂಗ್ರಹದ ವಿವರ ( ಕೋಟಿ ರೂ.ಗಳಲ್ಲಿ )
ಯಲಹಂಕ – 265.98
ಮಹದೇವಪುರ – 683.07
ದಾಸರಹಳ್ಳಿ – 73.78
ಆರ್‌.ಆರ್‌.ನಗರ – 182.00
ಬೊಮ್ಮನಹಳ್ಳಿ – 285.04
ಪಶ್ವಿ‌ಮ – 272.11
ದಕ್ಷಿಣ – 398.54
ಪೂರ್ವ – 507.26
ಒಟ್ಟು : 2667.77 ಕೋಟಿ ರೂ.

ಟಾಪ್ ನ್ಯೂಸ್

Mahua Moitra expelled as MP in cash-for-query row

Cash-for-query case; ಲೋಕಸಭೆಯಿಂದ ಟಿಎಂಸಿ ಮಹುವಾ ಮೊಹಿತ್ರಾ ಉಚ್ಛಾಟನೆ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್

ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

Belagavi; ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

TDY-11

Fighter Teaser ಔಟ್: ಇಂಟರ್‌ನೆಟ್‌ ನಲ್ಲಿ ಬೆಂಕಿ ಹಚ್ಚಿದ ಹೃತಿಕ್‌ – ದೀಪಿಕಾ ಕೆಮೆಸ್ಟ್ರಿ

Vijayapura; ಮಾನಸಿಕ ಹಿಂಸೆಯಿಂದ ವ್ಯಕ್ತಿ ಆತ್ಮಹತ್ಯೆ; ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು

Vijayapura; ಮಾನಸಿಕ ಹಿಂಸೆಯಿಂದ ವ್ಯಕ್ತಿ ಆತ್ಮಹತ್ಯೆ; ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

Belagavi; ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

ಸಿಎಂ ತವರಲ್ಲಿ ಜೀತಪದ್ದತಿ ಜೀವಂತ; ನೇಪಾಳ ಮೂಲದ ತಾಯಿ-ಮಕ್ಕಳ ರಕ್ಷಣೆ

Mysore: ಸಿಎಂ ತವರಲ್ಲಿ ಜೀತಪದ್ದತಿ ಜೀವಂತ; ನೇಪಾಳ ಮೂಲದ ತಾಯಿ-ಮಕ್ಕಳ ರಕ್ಷಣೆ

Mysore: ಬೋನಿಗೆ ಬಿದ್ದ ತಾಯಿ ಚಿರತೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mysore: ಬೋನಿಗೆ ಬಿದ್ದ ತಾಯಿ ಚಿರತೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

vijayendra R Ashok

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್‌, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

kempanna

ಕೆಂಪಣ್ಣ ಹೊಸ ಕಮಿಷನ್‌ ಬಾಂಬ್‌ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

Narega Plan: ಬರಪೀಡಿತ ಜಿಲ್ಲೆ ಜನತೆಗೆ ನರೇಗಾ ಆಸರೆ

Narega Plan: ಬರಪೀಡಿತ ಜಿಲ್ಲೆ ಜನತೆಗೆ ನರೇಗಾ ಆಸರೆ

tdy-17

Street Dogs: ಬೀದಿನಾಯಿಗಳ ನಿಯಂತ್ರಣಕ್ಕೆಆಪರೇಷನ್‌ ತಂತ್ರ

Mahua Moitra expelled as MP in cash-for-query row

Cash-for-query case; ಲೋಕಸಭೆಯಿಂದ ಟಿಎಂಸಿ ಮಹುವಾ ಮೊಹಿತ್ರಾ ಉಚ್ಛಾಟನೆ

tdy-15

Chamarajanagar: ಜನವರಿಯಲ್ಲಿ 67 ಹೊಸ ಕಂದಾಯ ಗ್ರಾಮ ಅಸ್ತಿತ್ವಕ್ಕೆ

tdy-14

KSRTC Bus: ನಿಲ್ಲದ ಕೆಎಸ್‌ಆರ್‌ಟಿಸಿ ಬಸ್‌: ತಪ್ಪದ ನಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.