ಹಲವು ಮನೆಗಳ ದೀಪ ಆರಿಸಿದ ವಿದ್ಯುತ್‌ ಶಾಕ್‌


Team Udayavani, Jul 9, 2020, 6:14 AM IST

ಹಲವು ಮನೆಗಳ ದೀಪ ಆರಿಸಿದ ವಿದ್ಯುತ್‌ ಶಾಕ್‌

ಮಣಿಪಾಲ: ಪ್ರಕೃತಿ ವಿಕೋಪ ಮತ್ತು ಮಾನವನ ತಪ್ಪಿನಿಂದಾಗಿ ಆಗಾಗ ವಿದ್ಯುತ್‌ ಅವಘಡಗಳು ಸಂಭವಿಸುತ್ತಿರುತ್ತವೆ. ಮಳೆಗಾಲ ದಲ್ಲಂತೂ ಈ ಪ್ರಮಾಣ ಹೆಚ್ಚೇ ಆಗಿರುತ್ತದೆ. ಗಾಳಿ- ಮಳೆಗೆ ಧರೆಗುರುಳುವ ವಿದ್ಯುತ್‌ ಕಂಬಗಳು ಹಲವರ ಪ್ರಾಣಕ್ಕೂ ಕುತ್ತು ತಂದಿರುತ್ತವೆ.

ಅಂಕಿ-ಅಂಶದ ಪ್ರಕಾರ ದೇಶದಲ್ಲಿ ಮುಂಜಾಗ್ರತೆಯ ಕೊರತೆ ಅಥವಾ ವಿದ್ಯುತ್‌ ಸರಬರಾಜು ನಿಗಮಗಳ ನಿರ್ಲಕ್ಷ್ಯದಿಂದಲೋ ಪ್ರತಿದಿನ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಸರಾಸರಿ 30 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. 2015ರಿಂದ ಇಲ್ಲಿಯ ತನಕ ರಾಜ್ಯ ರಾಜಧಾನಿಯೊಂದರಲ್ಲೇ 450ಕ್ಕೂ ಹೆಚ್ಚು ಸಾವು ಸಂಭವಿಸಿದೆ.

ಭಾರತದಂತಹ ದೇಶಗಳಲ್ಲಿ ವಿದ್ಯುತ್‌ ಸುರಕ್ಷೆಯ ಕುರಿತು ಜಾಗೃತಿ ಕಡಿಮೆ ಇದೆ ಮತ್ತು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ವಿದ್ಯುತ್‌ ಉಪಕರಣಗಳನ್ನು ಬಳಸಲಾಗುವುದಿಲ್ಲ. ಎರಡು ವಿದ್ಯುತ್‌ ಧ್ರುವಗಳ ನಡುವಿನ ಸಾಮಾನ್ಯ ಅಂತರವು 50 ಅಡಿ ಮತ್ತು ಕಂಬದ ಎತ್ತರವು ಕನಿಷ್ಠ 18 ಅಡಿಗಳಾಗಿರಬೇಕು. ಆದರೆ ಈ ಮಾರ್ಗಸೂಚಿಗಳು ಹೆಚ್ಚಾಗಿ ಪಾಲನೆಯಾಗುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ವಿದ್ಯುತ್‌ ಕಂಬಗಳು ಮನೆ ಟೆರೇಸಿಗೆ ತಾಗಿಕೊಂಡಂತಿದ್ದು ಅಪಾಯವನ್ನು ಯಾವಾಗ ಬೇಕಿದ್ದರೂ ತಂದೊಡ್ಡುವ ಸ್ಥಿತಿಯಲ್ಲಿರುತ್ತವೆೆ. ವಿದ್ಯುತ್‌ ಇಲಾಖೆಗಳ ನಿರ್ಲಕ್ಷ್ಯಕ್ಕಿಂತಲೂ ಮುಂಜಾಗ್ರತೆಯ ಕೊರತೆಯಿಂದ ಹಾನಿ ಸಂಭವಿಸುವುದೇ ಹೆಚ್ಚು.

ವೋಲ್ಟೇಜ್ ಗೂ ಸಾವಿಗೂ ಸಂಬಂಧ ಇಲ್ಲ
40ಕ್ಕಿಂತಲೂ ಕಡಿಮೆ ವೋಲ್ಟೇಜ್ ನಲ್ಲೂ ಸಾವು ಸಂಭವಿಸಿದ ಉದಾಹರಣೆಗಳು ಸಾಕಷ್ಟಿವೆ. ವಿದ್ಯುತ್‌ ವ್ಯಕ್ತಿಯ ದೇಹ ಪ್ರಕೃತಿಗನುಗುಣವಾಗಿ ಬದಲಾಗುತ್ತಾ ಇರುತ್ತದೆ. ಶುಷ್ಕ ದೇಹಕ್ಕೆ ಅಂತಹ ಅಪಾಯ ಮಾಡದಿದ್ದ ವಿದ್ಯುತ್‌ ವೋಲ್ಟೇಜ್ ಪ್ರಮಾಣ, ದೇಹ ಒದ್ದೆಯಾಗಿ ದ್ದರೆ ಅದರ 5-6 ಪಟ್ಟು ಹೆಚ್ಚಿನ ಆಘಾತ ಉಂಟುಮಾಡುತ್ತದೆ. ವಿದ್ಯುತ್‌ ಪ್ರವಹಿಸುವ‌ ಹರಿವನ್ನು ಮಿಲಿ ಎಂಪಿರಿಯರ್ ಲೆಕ್ಕಾಚಾರದಲ್ಲಿ ಹೇಳಬಹುದು. 50ಕ್ಕಿಂತ ಹೆಚ್ಚಿನ ಎಂಎಗಳು ಯಾವತ್ತೂ ಮಾರಣಾಂತಿಕ. ವಿದ್ಯುತ್‌ ಹರಿವಿನಲ್ಲೂ ಎಸಿ (ಆಲ್ಟರ್‌ನೆಟಿವ್‌ ಕರೆಂಟ್‌), ಡಿಸಿ (ಡೈರೆಕ್ಟ್ ಕರೆಂಟ್‌) ಎಂದು ವಿಭಜಿಸಿದ್ದು, ಡಿಸಿ ಯಾವತ್ತಿದ್ದರೂ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಎಸಿಯಲ್ಲಾದರೆ ವಿದ್ಯುತ್‌ ಶಾಕ್‌ನ ಅನುಭವವಾಗುತ್ತದೆ. ಡಿಸಿಯಲ್ಲಿ ಹಾಗಲ್ಲ ಒಮ್ಮೆ ಹಿಡಿದರೆ ಬಿಡುವುದೇ ಇಲ್ಲ. ಎಸಿಯಲ್ಲಿ ವಿದ್ಯುತ್‌ ತರಂಗಗಳು ಅಲೆಗಳ ರೀತಿ ವರ್ತಿಸಿದರೆ ಡಿಸಿಯಲ್ಲಿ ನೇರ ಹರಿವು ಇರುತ್ತದೆ. ಇದರಿಂದ ಬಚಾವಾಗಲು ಸಾಧ್ಯವೇ ಇಲ್ಲ.

2020ರಲ್ಲಿ ಉಡುಪಿ-ದ.ಕ. ಜಿಲ್ಲೆಯಲ್ಲಿ ನಡೆದ ವಿದ್ಯುತ್‌ ಅವಘಡಗಳ ವಿವರ

ಬದುಕೇ ಬರಡಾಯಿತು
ಫೆ. 8ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಪೈಂಟಿಂಗ್‌ ನಡೆಸಲೆಂದು ಹೋಗಿದ್ದ 27ರ ಹರೆಯದ ಯುವಕ ನಗರದ ಬಪ್ಪಳಿಗೆ ದರ್ಖಾಸ್‌ ನಿವಾಸಿ ದೀಕ್ಷಿತ್‌ ವಿದ್ಯುತ್‌ ಆಘಾತದಿಂದ ನೆಲಕ್ಕುರುಳಿದ್ದ. ಈತನಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೆ ಫೆ. 10ರಂದು ಮೃತಪಟ್ಟಿದ್ದ. ಆತನಿಗೆ ಒಂದನೇ ಮಹಡಿಯ ಗೋಡೆಯ ಸನಿಹದಲ್ಲಿದ್ದ ಅಪಾಯಕಾರಿ ಸ್ಥಿತಿಯಲ್ಲಿದ್ದ ಟ್ರಾನ್ಸ್‌ ಫಾರ್ಮರ್‌ ಮೃತ್ಯು ಸ್ವರೂಪಿಯಾಗಿತ್ತು.
ಈ ಘಟನೆ ನಡೆದದ್ದು ಎಪ್ರಿಲ್‌ 25ರಂದು ಸುರತ್ಕಲ್‌

ಬಲ್ಬ್ ಬದಲಿಸಲು ಹೋಗಿ ಸಂಕಷ್ಟ
ಸಮೀಪದ ಸೂರಿಂಜೆ ಶಿಬರೂರಿನಲ್ಲಿ. ಮನೆಯ ಬಲ್ಬ್ವೋಲ್ಟೇಜ್‌ ಸಮಸ್ಯೆಯಿಂದ ತನ್ನ ಕಾರ್ಯವನ್ನು ನಿಲ್ಲಿಸಿತ್ತು. ಅದನ್ನು ಬದಲಾಯಿಸಲೆಂದು ಹೊರಟ ದಿನೇಶ್‌ಗೆ ಶಾಕ್‌ ಹೊಡೆದು ನೆಲಕ್ಕುರುಳಿದ್ದರು. ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಕೊಕ್ಕೆ ಜೀವ ತೆಗೆದಿತ್ತು
ಕೊಡಿಯಾಲ ಗ್ರಾಮದ ರಾಮಕುಮೇರಿನ ನಿವಾಸಿ ಕೊಡಿಯಾಲ ಗ್ರಾಮದ ರಾಮಕುಮೇರಿನ ನಿವಾಸಿಯಾಗಿದ್ದ ಪಂಜ ಸರಕಾರಿ ಜೂನಿಯರ್‌ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ನಿಶಾಂತ್‌ ಮನೆ ಸನಿಹ ಮಾವಿನ ಮರವಿತ್ತು. ಮೇ 19ರಂದು ಮಾವನ್ನು ಕೊಯ್ಯ ಲೆಂದು ದೋಟಿಗೆ ಅಲ್ಯುಮಿನಿಯಂ ಕೊಕ್ಕೆಯನ್ನು ಕಟ್ಟಿ ಹೊರಟಿದ್ದ. ಹಣ್ಣನ್ನು ಕೊಯ್ಯುತ್ತಿರುವಾಗ ವಿದ್ಯುತ್‌ ಲೈನ್‌ಗೆ ಕೊಕ್ಕೆ ತಾಗಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದ.

ಫ್ರಿಡ್ಜ್ ದೇಹವನ್ನೇ ತಣ್ಣಗಾಗಿಸಿತ್ತು
ಮದ್ಲ ಪಟ್ಟುಮೂಲೆ ನಿವಾಸಿ ಹರಿಯಪ್ಪ ಮೂಲ್ಯ ಅವರ ಪುತ್ರ 22ರ ಹರೆಯದ ಸುರೇಶ್‌ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದರು. ಮೇ 22ರಂದು ರೆಫ್ರಿಜರೇಟರ್‌ ತೆರೆದು ಏನಕ್ಕೊ ಕೈ ಹಾಕಿದ್ದರು. ಅದರ ವಯರಿಂಗ್‌ ದೋಷಯುಕ್ತವಾಗಿದ್ದರಿಂದ ಅವರಿಗೆ ವಿದ್ಯುತ್‌ ಆಘಾತವಾಗಿ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಉಳಿಸಿಕೊಳ್ಳುವಲ್ಲಿ ಮನೆ ಯವರು ಯಶಸ್ವಿಯಾಗಲಿಲ್ಲ.

ಕಬ್ಬಿಣದ ಏಣಿಯಲ್ಲಿ ವಿದ್ಯುತ್‌
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್‌ ನಿವಾಸಿ ಮುಬಾರಕ್‌ ಫರಂಗಿಪೇಟೆ ಸಮೀಪದ ಪೇರಿಮಾರ್‌ನ ಮಸೀದಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಮೇ 30ರಂದು ಮಧ್ಯಾಹ್ನ ವೇಳೆಗೆ ನೆಲದಲ್ಲಿ ಬಿದ್ದುಕೊಂಡಿದ್ದ ವಿದ್ಯುತ್‌ ವಯರ್‌ಗಳು ಕಬ್ಬಿಣದ ಏಣಿಗೆ ತಗಲಿ ಮುಬಾರಕ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಇನ್ನೋರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದರು.

ವಾಶಿಂಗ್‌ ಮೆಶಿನ್‌ ಶಾಕ್‌
ಉಜಿರೆ ಅತ್ತಾಜೆಯ ಎ.ಸಿ. ಮೆಕ್ಯಾನಿಕ್‌ ಮುಹಮ್ಮದ್‌ ಸಿರಾಜುದ್ದೀನ್‌ ಬೆಳ್ತಂಗಡಿ ತಾ|ನ ಕಕ್ಕಿಂಜೆ ಸಮೀಪ ಸಂಬಂಧಿಕರ ಮನೆಯಲ್ಲಿ ಜೂ. 1ರಂದು ಸಂಜೆ ವಾಶಿಂಗ್‌ ಮೆಶಿನ್‌ ದುರಸ್ತಿಗೆಂದು ತೆರಳಿದ್ದ. ಇದ್ದಕ್ಕಿದ್ದಂತೆ ವಿದ್ಯುತ್‌ ಪ್ರವಹಿಸಿದ ಕಾರಣ ಸ್ಥಳದಲ್ಲೆ ತೀವ್ರ ಆಘಾತಕ್ಕೊಳಗಾಗಿದ್ದರು. ತತ್‌ಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆ ಮತ್ತು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದ.

ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ ಕೂಡ. ಆದರೂ ಅದರಿಂದ ಪಾಠ ಕಲಿತವರೆಷ್ಟು ಜನ?. ಪ್ರತಿ ಸಲವೂ ನಾವು ತಪ್ಪು ಮಾಡಿಯೇ ಪಾಠ ಕಲಿಯ ಬೇಕೆಂದಿಲ್ಲ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳಿಂದ ಪಾಠ ಕಲಿಯುವ ಅಗತ್ಯವಿದೆ. ವಿದ್ಯುತ್‌ ವಿಷಯದಲ್ಲೂ ಅಷ್ಟೇ ಜಾಗ್ರತೆ ವಹಿಸಿದರೆ ಜೀವನ.

ವಿದ್ಯುತ್‌ ಮಿಲಿ ಎಂಪಿರಿಯರ್   ದೇಹದ ಮೇಲಿನ ಪರಿಣಾಮ

0.2 2 ವಿದ್ಯುತ್‌ ಸ್ಪರ್ಶದ ಅನುಭವ (ಲಘು)
1 2 + ನೋವಿನ ಆಘಾತ
3 5 ಮಕ್ಕಳಿಗೆ ಅಪಾಯ
6 10 ವಯಸ್ಕರಿಗೂ ಅಪಾಯ ಮಟ್ಟ
10 20 ಸಂಪರ್ಕದ ಹಂತದಲ್ಲಿ ಸೆಳವು ಸಂಭವ
22 ಪಾರಾಗಲು ಸಾಧ್ಯವೇ ಇಲ್ಲ.
20 50 ಅಂಗಾಂಗ ವೈಫ‌ಲ್ಯ, ಅಸ್ವಸ್ಥತೆ, ಪ್ರಜ್ಞಾ ಹೀನತೆ
50 100 ಮಾರಣಾಂತಿಕ ಹೃದಯಸ್ತಂಭನ ಸಂಭವ.

ತಪ್ಪಿಸುವುದು ಹೇಗೆ?
1 ಬಲ್ಬ್ ಬದಲಿಸುವಾಗಲೂ ಕೈಯನ್ನು ಒದ್ದೆ ಇರದಂತೆ ನೋಡಿಕೊಳ್ಳಿ, ಪ್ಲಾಸ್ಟಿಕ್‌ ಕೈಗವಸನ್ನು ಹಾಕಿಕೊಳ್ಳಿ.
2.ಮಳೆಗಾಲದಲ್ಲಿ ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ಗಳ ಬಳಿ ಹೋಗದಿರಿ.
3. ವಿದ್ಯುತ್‌ ಶಾಕ್‌ ಹೊಡೆದ ವ್ಯಕ್ತಿಯನ್ನು ಮುಟ್ಟುವ ಮುನ್ನ ಮೈನ್‌ ಸ್ವಿಚ್‌
ಆಫ್ ಮಾಡಿ.
4.ಉತ್ತಮ ಗುಣಮಟ್ಟದ ವಯರಿಂಗ್‌ ಹಾಕಿಸಿ.
5.ವಿದ್ಯುತ್‌ ಕೆಲಸಕ್ಕೆ ಮೆಸ್ಕಾಂ ನಿಯೋಜಿತ ಸಿಬಂದಿಯ ನೆರವು ತೆಗೆದುಕೊಳ್ಳಿ.
6.ವಿದ್ಯುತ್‌ ಬಳಸಿ ಮಾಡುವ ಕೆಲಸದಲ್ಲಿ ವಯರ್‌ಗಳು ನೀರಿಗೆ ತಾಗದಂತೆ, ಅದರಲ್ಲಿ ಲೂಸ್‌ ಕನೆಕÏನ್‌ ಇರದಂತೆ ನೋಡಿಕೊಳ್ಳಿ.
7.ವಿದ್ಯುತ್‌ ತಂತಿ ತುಂಡಾಗಿ ರುವುದು ಕಂಡರೆ ತುರ್ತು ಮೆಸ್ಕಾಂ ಗಮನಕ್ಕೆ ತನ್ನಿ.

ವಿದ್ಯುತ್‌ ಸಮಸ್ಯೆಗಳಿದ್ದರೆ ಕರೆಮಾಡಿ ಮೆಸ್ಕಾಂ ಟೋಲ್‌ ಫ್ರೀ ನಂಬರ್‌
1912

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.