Adi Shankara: ಆದಿ ಶಂಕರರ ಪ್ರತಿಮೆ ನಾಳೆ ಲೋಕಾರ್ಪಣೆ


Team Udayavani, Sep 16, 2023, 9:14 PM IST

shankar omkareshwar

ಮಧ್ಯಪ್ರದೇಶದ ದೇಗುಲ ನಗರಿ ಓಂಕಾರೇಶ್ವರದಲ್ಲಿ ತಲೆಎತ್ತಿರುವ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಸೋಮವಾರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಲೋಕಾರ್ಪಣೆಗೊಳಿಸಲಿದ್ದಾರೆ. ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನದಲ್ಲಿ ಪ್ರತಿಮೆಯು ಅನಾವರಣಗೊಳ್ಳಲಿದೆ.

ಪ್ರತಿಮೆಯ ಎತ್ತರ- 108 ಅಡಿ

ಏಕಾತ್ಮತೆಯ ಪ್ರತಿಮೆ
ಇಂದೋರ್‌ನಿಂದ 80 ಕಿ.ಮೀ. ದೂರದಲ್ಲಿರುವ ಓಂಕಾರೇಶ್ವರವನ್ನು ಅದ್ವೆ„ತ ವೇದಾಂತ ಸಿದ್ಧಾಂತದ ತವರಾಗಿ ಮಾರ್ಪಾಟು ಮಾಡಿ, ಸುಂದರ ಅಧ್ಯಾತ್ಮ ಕೇಂದ್ರವಾಗಿ ರೂಪುಗೊಳಿಸುವುದೇ ಸರ್ಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಮಂಧಾತ ಪರ್ವತದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಲಾಗಿದೆ. ಈ ಪ್ರತಿಮೆಯಲ್ಲಿ 12 ವರ್ಷದ ಬಾಲಕನ ರೂಪದಲ್ಲಿ ಶಂಕರಾಚಾರ್ಯರು ಕಂಗೊಳಿಸಲಿದ್ದಾರೆ. ಇದನ್ನು “ಏಕಾತ್ಮತಾ ಕೀ ಪ್ರತಿಮಾ’ (ಏಕತ್ವದ ಪ್ರತಿಮೆ) ಎಂದು ಹೆಸರಿಸಲಾಗಿದೆ.

ಓಂಕಾರೇಶ್ವರದ ವೈಶಿಷ್ಟ್ಯವೇನು?
12 ಜ್ಯೋತಿರ್ಲಿಂಗಗಳಲ್ಲಿ ಓಂಕಾರೇಶ್ವರ ಕೂಡ ಒಂದು. ಇಲ್ಲಿಗೆ ಪ್ರತಿವರ್ಷ ಕೋಟ್ಯಂತರ ಯಾತ್ರಿಗಳು ಭೇಟಿ ನೀಡುತ್ತಾರೆ. ಇಲ್ಲಿನ ನರ್ಮದಾ ನದಿಗೆ ಕಟ್ಟಲಾದ 270 ಅಡಿಯ ತೇಲುವ ಸೇತುವೆಯು ಓಂಕಾರೇಶ್ವರದ ಆಕರ್ಷಣೆಯನ್ನು ಇಮ್ಮಡಿಗೊಳಿಸಿದೆ. ಹೆಣ್ಣು ನವಿಲಿನ ಆಕಾರದಲ್ಲಿ ನಿರ್ಮಿಸಲಾದ ಮೂರು ಮಹಡಿಯ ಗೌರಿ ಸೋಮನಾಥ ದೇಗುಲವೂ ಓಂಕಾರೇಶ್ವರಕ್ಕೆ ಮೆರುಗು ತಂದುಕೊಟ್ಟಿದೆ.

ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನ
ಆದಿಗುರು ಶಂಕರಾಚಾರ್ಯರ ಸಾಧನ ಸ್ಥಳವಾದ ಓಂಕಾರೇಶ್ವರದ ಮಂಧಾತ ಪರ್ವತದಲ್ಲಿ ದಕ್ಷಿಣಾಮ್ನಯ ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನದಲ್ಲಿ ಮಹರ್ಷಿ ಸಾಂದೀಪಾನಿ ರಾಷ್ಟ್ರೀಯ ವೇದ ಪ್ರತಿಷ್ಠಾನದ ಮೂಲಕ ದೇಶದ 300 ಖ್ಯಾತ ವೈದಿಕ ಅರ್ಚಕರು ವೈದಿಕ ರೀತಿಯಲ್ಲಿ ಪೂಜೆ ಮತ್ತು 21 ಕುಂಡೀಯ ಹವನವನ್ನು ನಡೆಸಿದ್ದಾರೆ. ಸೋಮವಾರ ನಡೆಯುವ ಮೂರ್ತಿಯ ಅನಾವರಣ ಹಾಗೂ ಅದ್ವೆ„ತ ಲೋಕದ ಭೂಮಿ ಪೂಜೆ ಕೂಡ ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನದಲ್ಲೇ ನಡೆಯಲಿದೆ.

ಏನೇನಿರುತ್ತದೆ?
– ಆದಿ ಶಂಕರಾಚಾರ್ಯರ ಪ್ರತಿಮೆ
– ಅದ್ವೆ„ತ ಲೋಕ ಮ್ಯೂಸಿಯಂ
– ಅಂತಾರಾಷ್ಟ್ರೀಯ ವೇದಾಂತ ಸಂಸ್ತೆ
– 36 ಎಕರೆ ಪ್ರದೇಶದಲ್ಲಿ ಅದ್ವೆ„ತ ಅರಣ್ಯ

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.