ಅಣುಬಾಂಬ್ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ
ಹುಂಗಾ ಟೋಂಗಾ ಅಗ್ನಿಪರ್ವತದ ವಿನಾಶಕಾರಿ ಶಕ್ತಿ ಅಳೆದ ನಾಸಾ ವಿಜ್ಞಾನಿಗಳು
Team Udayavani, Jan 25, 2022, 7:25 AM IST
ಹೊಸದಿಲ್ಲಿ: ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಟೋಂಗಾದಲ್ಲಿ ಜ. 15ರಂದು ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದ ತೀವ್ರತೆಯು 2ನೇ ಮಹಾಯುದ್ಧದಲ್ಲಿ ಹಿರೋಶಿಮಾ- ನಾಗಸಾಕಿಯಲ್ಲಿ ಸಂಭವಿಸಿದ ಅಣುಬಾಂಬ್ ಸ್ಫೋಟಗಳಿಗಿಂತ ದ್ವಿಗುಣವಾಗಿತ್ತು ಎಂದು ತಜ್ಞರು ತಿಳಿಸಿದ್ದಾರೆ.
ದ್ವೀಪ ರಾಷ್ಟ್ರದ ಒಂದು ಪಾರ್ಶ್ವವನ್ನು ಬೂದಿಯಾಗಿಸಿದ ಹುಂಗಾ ಟೋಂಗಾ- ಹುಂಗಾ ಹಪಾಯ್ ಅಗ್ನಿ ಪರ್ವತವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ವತಿಯಿಂದ (ನಾಸಾ) ಗಗನಕ್ಕೆ ಹಾರಿಬಿಡಲಾಗಿರುವ ಅರ್ತ್ ಅಬ್ಸರ್ವೇಟರಿಯಿಂದ ಅಧ್ಯಯನ ಮಾಡಲಾಗಿದೆ.
1945ರ ಆಗಸ್ಟ್‌ನಲ್ಲಿ ನಡೆಸಲಾಗಿದ್ದ ಹಿರೋಶಿಮಾ- ನಾಗಸಾಕಿಯಲ್ಲಿ ಅಣುಬಾಂಬ್ ದಾಳಿಯಲ್ಲಿ 15 ಸಾವಿರ ಟನ್‌ನಷ್ಟು (ಟಿಎನ್‌ಟಿ) ಶಕ್ತಿಶಾಲಿಯಾದ ಸ್ಫೋಟ ಉಂಟಾಗಿತ್ತು. ಟೋಂಗಾ ಅಗ್ನಿಪರ್ವತ ಸ್ಫೋಟಗೊಂಡಾಗ 3 ಕೋಟಿ ಟನ್ (ಟಿಎನ್‌ಟಿ)ನಷ್ಟು ಶಕ್ತಿಶಾಲಿ ಸ್ಫೋಟ ಆಗಿತ್ತು ಎಂದು ತಜ್ಞರು ವಿವರಿಸಿದ್ದಾರೆ.
ಇದನ್ನೂ ಓದಿ:ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್ ; “ರೀಬಾಕ್ ಆ್ಯಕ್ಟಿವ್ ಫಿಟ್ 1.0′ ಬಿಡುಗಡೆ
ಜ್ವಾಲಾಮುಖಿ ಸ್ಫೋಟ ಸಂಭವಿಸಿದಾಗ ಅದರ ಲಾವಾ ಹಾಗೂ ಬೆಟ್ಟದ ತುದಿಯಿಂದ 40 ಕಿ.ಮೀ. ಮೇಲಕ್ಕೆ ಚಿಮ್ಮಿದ್ದವು. ಈ ಅಗ್ನಿಪರ್ವತವು ಸಾಗರದಾಳದಲ್ಲಿ ಇದ್ದಿದ್ದರಿಂದ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಲೇ ಸಮುದ್ರದಲ್ಲಿ ಸುನಾಮಿ ಮಾದರಿಯ ದೈತ್ಯ ಅಲೆಗಳು ಎದ್ದಿದ್ದವು ಎಂದು ನಾಸಾದ ತಜ್ಞರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ನೆಲ್ಯಾಡಿ: ಕಾರು – ಟಿಪ್ಪರ್ ಢಿಕ್ಕಿ; ಓರ್ವ ಸಾವು
ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು
ತರಗತಿ, ಲೈಬ್ರೆರಿಗೆ ಹಿಜಾಬ್ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ