World Cup : ಯು-19 ವಿಶ್ವಕಪ್ ಭಾರತ ಅಜೇಯ
Team Udayavani, Jan 28, 2024, 10:49 PM IST
ಬ್ಲೋಮ್ಫಾಂಟೀನ್: ಅಮೆರಿಕವನ್ನು 201ರನ್ನುಗಳ ಭಾರೀ ಅಂತರದಿಂದ ಮಣಿಸಿದ ಭಾರತ ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಲೀಗ್ ಅಭಿಯಾನವನ್ನು ಅಜೇಯವಾಗಿ ಮುಗಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಕಿರಿಯರ ತಂಡ 5 ವಿಕೆಟಿಗೆ 326 ರನ್ ಪೇರಿಸಿದರೆ, ಜವಾಬಿತ್ತ ಅಮೆರಿಕದ ಕಿರಿಯರ ತಂಡ 8 ವಿಕೆಟಿಗೆ ಕೇವಲ 125 ರನ್ ಮಾಡಿತು.ಆರಂಭಕಾರ ಅರ್ಶಿನ್ ಕುಲಕರ್ಣಿ ಅವರ ಶತಕ (108) ಭಾರತದ ಸರದಿಯ ಆಕರ್ಷಣೆ ಆಗಿತ್ತು. ಮುಶೀರ್ ಖಾನ್ 73 ರನ್ ಹೊಡೆದರು.
ಭಾರತೀಯ ಆಟಗಾರರನ್ನೇ ಒಳಗೊಂಡ ಅಮೆರಿಕ ಯಾವ ಹಂತದಲ್ಲೂ ಪ್ರತಿರೋಧ ತೋರಲಿಲ್ಲ. ಒಂದೇ ಸಮನೆ ವಿಕೆಟ್ಗಳನ್ನು ಕಳೆದುಕೊಳ್ಳತೊಡಗಿತು. ಉತ್ಕರ್ಷ್ ಶ್ರೀವಾಸ್ತವ ಸರ್ವಾಧಿಕ 40 ರನ್ ಹೊಡೆದರು. ನಮನ್ ತಿವಾರಿ 20ಕ್ಕೆ 4 ವಿಕೆಟ್ ಹಾರಿಸಿ ಹೆಚ್ಚಿನ ಯಶಸ್ಸು ಸಂಪಾದಿಸಿದರು.
ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಐರ್ಲೆಂಡ್ಗೆ ಸೋಲುಣಿಸುವ ಮೂಲಕ ಭಾರತ ಸೂಪರ್ ಸಿಕ್ಸ್ ಪ್ರವೇಶಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್