ಏಸು ಕ್ರಿಸ್ತನ ಪಂಚಭಾಷಾ ಚಿತ್ರ ನಿರ್ಮಿಸಿದ್ದ ವಾಸುದೇವ ಭಟ್ ನಿಧನ
Team Udayavani, Jan 13, 2022, 5:58 PM IST
ಉಡುಪಿ : ಖ್ಯಾತ ಸಂಗೀತ ನಿರ್ದೇಶಕ , ಉಡುಪಿಯಲ್ಲಿ ನಾದ ವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿ, ಸಂಗೀತ ನತ್ಯ ರೂಪಕ ಹಾಗೂ ಚಲನಚಿತ್ರಗಳನ್ನು, ರಚಿಸಿ ನಿರ್ದೇಶಿಸಿ, ಪಾತ್ರವನ್ನು ಮಾಡಿದ್ದ ವಾಸುದೇವ ಭಟ್ ಅವರು ಗುರುವಾರ ನಿಧನ ಹೊಂದಿದ್ದಾರೆ.
ಪಿಟೀಲು ಮಂಜುನಾಥಯ್ಯ ಅವರ ಶಿಷ್ಯರಾಗಿ ಅನೇಕ ಖ್ಯಾತ ಗಾಯಕರಿಗೆ ಗುರುಗಳಾಗಿ, ಸಂಗೀತ ಕ್ಷೇತ್ರಕ್ಕೆ ಅಪಾರ ಶಿಷ್ಯ ವೃಂದನ್ನು ನೀಡಿದ್ದರು.
1994 ರಲ್ಲಿ ಏಸು ಕ್ರಿಸ್ತನ ಕುರಿತಾಗಿನ ಭುವನ ಜ್ಯೋತಿ ಎಂಬ ಪಂಚಭಾಷಾ ಚಿತ್ರವನ್ನು ನಿರ್ಮಿಸಿದ್ದ ಇವರು ಪತ್ರಿಕೆಗೂ ಉಡುಪಿಯಿಂದ ವರದಿ ಮಾಡುತ್ತಿದ್ದರು, ಅಪಾರ ಸಾಹಿತ್ಯ ಸೇವೆ ಮಾಡಿದ್ದ ಭಟ್ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.