ವಿವಾಹ ಪರಿಷ್ಕರಣೆ ಮಸೂದೆ ಹೆಚ್ಚಿತು ಮದುವೆಗಳ ಸಂಖ್ಯೆ
Team Udayavani, Jan 7, 2022, 6:55 AM IST
ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್ ಸೇರಿ ಕೆಲವು ನಗರಗಳಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಈಚೆಗೆ ಮುಸ್ಲಿಂ ಸಮುದಾಯದ ಮದುವೆಗಳಲ್ಲಿ ಭಾರೀ ಏರಿಕೆಯಾಗಿದೆ.
ಇತ್ತೀಚೆಗೆ ಮುಕ್ತಾಯವಾದ ಸಂಸತ್ ಅಧಿವೇಶನದಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸು 18-21ಕ್ಕೆ ಏರಿಸುವ ಬಗ್ಗೆ ಮಸೂದೆ ಮಂಡಿಸಲಾಗಿದೆ. ಶೀಘ್ರದಲ್ಲಿಯೇ ಅದು ಕಾನೂನಾಗಿ ಪರಿವರ್ತನೆಯಾಗಿ ಜಾರಿ ಯಾಗಲಿದೆ ಎಂಬ ಅಂಜಿಕೆಯಿಂದ ತೆಲಂಗಾಣದ ಪೋಷಕರಂತೂ ಗಾಬರಿ ಯಾಗಿದ್ದಾರಂತೆ. ಈಗಷ್ಟೇ 18 ತುಂಬಿರುವ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕೆಂದು ಕೊಂಡಿ ರುವ ಮುಸ್ಲಿಂ ಕುಟುಂಬಗಳು ತುರ್ತಾಗಿ ಮದುವೆ ಮಾಡಲು ಆರಂಭಿಸಿದ್ದಾರೆ. ಕಾಯ್ದೆ ಜಾರಿಯಾ ದರೆ ಇನ್ನು ಮೂರು ವರ್ಷಗಳ ಕಾಲ ಮದುವೆ ಬಗ್ಗೆ ಮಾತಾಡಲು ಸಾಧ್ಯವಿಲ್ಲ ಎಂದು ಅವರ ಯೋಚನೆ.
ಮದುವೆಗಳನ್ನು ಮಾಡಿಸುವ ಖಾಜಿಗಳು ಈ ಹಿಂದಿನ ಮದುವೆ ಸೀಸನ್ಗಳಲ್ಲಿ ದಿನಕ್ಕೆ ಹೆಚ್ಚೆಂದರೆ 3-4 ಮದುವೆ ಮಾಡಿಸುತ್ತಿದ್ದರಂತೆ. ಆದರೆ ಈಗ ದಿನಕ್ಕೆ 12-13 ಮದುವೆ ಮಾಡಿಸುತ್ತಿದ್ದಾರೆ. ಸಂಜೆ ಹೊತ್ತು ಮಾತ್ರ ನಡೆಯುತ್ತಿದ್ದ ಮದುವೆಗಳು ಈಗ ಸಮಯವನ್ನೂ ನೋಡುತ್ತಿಲ್ಲವಂತೆ. ಮದುವೆ ಮಾಡಿ ವಕ್ಫ್ ಬೋರ್ಡ್ನಿಂದ ಮದುವೆ ಪ್ರಮಾಣ ಪತ್ರ ಪಡೆದ ಅನಂತರವೇ ಕುಟುಂಬಗಳು ಸಮಾಧಾನಗೊಳ್ಳುತ್ತಿವೆ ಎಂದು ವರದಿಯಾಗಿದೆ.