ವಾರಾಂತ್ಯ ಕರ್ಫ್ಯೂ ರದ್ದು : ಉಡುಪಿಯಲ್ಲಿ ಸಂಜೆ ಬಳಿಕ ಬೀಚ್ ಬಂದ್: ಡಿಸಿ
Team Udayavani, Jan 22, 2022, 6:10 AM IST
ಉಡುಪಿ: ಸರಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ರದ್ದು ಮಾಡಲಾಗಿದೆ. ಆದರೆ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ ಮತ್ತು ಬೀಚ್‌ಗಳಿಗೆ ಸಂಜೆ 7ರ ಅನಂತರ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದ್ದಾರೆ.
“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಕೊರೊನಾ ಹಾಗೂ ಒಮಿಕ್ರಾನ್ ನಿಯಂತ್ರಣ, ಪ್ರಸರಣೆ ತಡೆಯುವ ಸಂಬಂಧ ರಾಜ್ಯ ಸರಕಾರ ಜಾರಿಗೊಳಿಸುವ ಎಲ್ಲ ನಿಯಮಗಳು ಮುಂದುವರಿಯಲಿವೆ. ವಾರಾಂತ್ಯ ಕರ್ಫ್ಯೂ ರದ್ದತಿ ಕುರಿತು ನಿರ್ದೇಶನ ಬಂದಿದ್ದು, ಅದನ್ನು ಪಾಲನೆ ಮಾಡಲಾಗುತ್ತದೆ. ರಾತ್ರಿ ಕರ್ಫ್ಯೂ ಇರಲಿದೆ. ಮಲ್ಪೆ ಬೀಚ್ ಸೇರಿದಂತೆ ಹೆಚ್ಚು ಜನಸಂದಣಿ ಇರುವ ಬೀಚ್‌ಗಳಲ್ಲಿ ಸಂಜೆ 7ರ ಅನಂತರ ಸಾರ್ವಜನಿಕರ ಪ್ರವೇಶ ನಿರ್ಬಂಧ ಮುಂದುವರಿಯಲಿದೆ ಎಂದರು.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ
ಮದುವೆ, ಬಹಿರಂಗ ಸಭೆ, ಸಮಾರಂಭ, ರಾಜಕೀಯ ಪಕ್ಷಗಳ ಸಮಾವೇಶ ಇತ್ಯಾದಿಗಳಿಗೆ ಸರಕಾರ ವಿಧಿಸಿರುವ ನಿಯಮವೇ ಮುಂದುವರಿಯಲಿದೆ. ಜಿಲ್ಲೆಯಿಂದ ಪ್ರತ್ಯೇಕ ಯಾವುದೇ ನಿಯಮ ಇರುವುದಿಲ್ಲ. ಶಾಲಾ ಕಾಲೇಜು ಮಕ್ಕಳಿಗೆ ಶನಿವಾರ ರಜೆ ನೀಡಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಈವರೆಗೂ ಯಾವುದೇ ತೀರ್ಮಾನ ತೆಗೆದು ಕೊಂಡಿಲ್ಲ. ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿಗೆ ಪಾಸಿಟಿವ್ ಬಂದಲ್ಲಿ, ಆ ತರಗತಿಯನ್ನು ಐದು ದಿನದ ಮಟ್ಟಿಗೆ ಬಂದ್ ಮಾಡಿ, ಸ್ಯಾನಿಟೈಜೇಶನ್ ಮಾಡುವ ಕಾರ್ಯವೂ ಆಗುತ್ತಿದೆ. ವಿದ್ಯಾರ್ಥಿಗಳ ಪಾಸಿಟಿವಿಟಿ ದರ ಹೆಚ್ಚಾಗಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆ
ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!
ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿ: ಶೋಭಾ ಕರಂದ್ಲಾಜೆ
ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T