ನದಿಯ ಹರಿವಿನಿಂದ ಕಲಿಯುವುದೇನು?

Team Udayavani, Feb 11, 2021, 8:00 AM IST

ನದಿಯ ಹರಿವಿನಿಂದ ಕಲಿಯುವುದೇನು?

ಬದುಕು ನಿಜಕ್ಕೂ ಸಂಕೀರ್ಣವಲ್ಲ. ಆದರೆ ಅದರ ಬಗೆಗಿನ ಅರಿವು ಹಾಗೂ ಒಲವಿನ ಕೊರತೆ ನಮ್ಮನ್ನು ಹೈರಾಣಾ ಗಿಸುತ್ತದೆ. ಬದುಕು ಸಾಕಪ್ಪಾ ಎನಿಸುವಂತೆ ಮಾಡುತ್ತದೆ. ಒಂದು ಉದ್ಯಾನದಲ್ಲಿ ಹೂವು ಹೇಗೆ ಅತ್ಯಂತ ಸಹಜವಾಗಿ ಅರಳುತ್ತದೆಯೋ ಹಾಗೆಯೇ ಅಷ್ಟೇ ಸಹಜವಾಗಿ ನಮ್ಮ ಬದುಕೂ ಸಹ ಅರಳುತ್ತದೆ. ಆ ಇಡೀ ಪ್ರಕ್ರಿಯೆಯೇ ಸುಂದರವೂ ಸಹ.

ಮಹಾನ್‌ ಗುರುವಿನಲ್ಲಿ ಬದುಕುವುದನ್ನು ಕಲಿಯಲು ಒಬ್ಬ ಶಿಷ್ಯ ಸೇರಿಕೊಂಡ. ಗುರುವಿನ ಆಶ್ರಮ ಎಂದಿನಂತೆ ಪ್ರಶಾಂತ ವಾದ ವಾತಾವ ರಣದಲ್ಲಿತ್ತು. ಹತ್ತಿರದಲ್ಲಿ ಬೆಟ್ಟ, ಗುಡ್ಡ, ನದಿ, ಮರ-ಗಿಡಗಳೆಲ್ಲ ಇತ್ತು. ಹಕ್ಕಿಗಳ ಕಲರವ ದಿನವೂ ಕೇಳುತ್ತಿತ್ತು. ಆಶ್ರಮದ ಗೋಶಾ ಲೆಯಲ್ಲಿ ನೂರಾದು ದನಗಳಿದ್ದವು. ಅದಲ್ಲದೇ ಆಶ್ರಮದ ಆವರಣದಲ್ಲಿದ್ದ ಆಹಾರ ಕೇಂದ್ರಕ್ಕೆ ಪಕ್ಕದ ಊರಿನ ಬಡವರೆಲ್ಲ ದಿನವೂ ಊಟಕ್ಕೆ ಬರುತ್ತಿದ್ದರು. ಹೀಗೆ ಸದಾ ಚಟು ವಟಿಕೆಯ ಕೇಂದ್ರವಾಗಿತ್ತು.

ಗುರುವಿನ ಬೋಧನೆ ಆರಂಭವಾ ಯಿತು. ತಮ್ಮ ಹೊಸ ಶಿಷ್ಯನಿಗೆ, ನಾಳೆ ಬೆಳಗ್ಗೆ 4 ರ ವೇಳೆಗೆ ಉದ್ಯಾನಕ್ಕೆ ಬಾ ಎಂದರು. ಇವನಿಗೋ ಕುತೂಹಲ. ಗುರು ಹೇಳಿದಂತೆ ಚುಮುಚುಮು ಚಳಿಯಲ್ಲಿ ಉದ್ಯಾನದ ಬಳಿ ಸರಿಯಾದ ಸಮಯಕ್ಕೆ ಬಂದ ಶಿಷ್ಯ. ಗುರುಗಳು, ಸಣ್ಣದೊಂದು ಕಂದೀಲು ಹಿಡಿದು ಬಂದಿದ್ದರು, ಅದರಲ್ಲಿ ಬೆಳಕು ಪ್ರಕಾಶಮಾನವಾಗಿತ್ತು.

ಗುರುಗಳು ಒಂದು ಹೂವಿನ ಗಿಡದ ಬಳಿ ಕರೆದು, ನೋಡು, ಇದೀಗ ಅರಳ ತೊಡಗಿದೆ. ಇನ್ನೂ ಮೊಗ್ಗು ಎನಿಸುತ್ತಿದೆ. ಆದರೆ ಇದು ನಿನ್ನೆಯ ಮೊಗ್ಗಲ್ಲ, ಅರಳುತ್ತಿರುವ ಮೊಗ್ಗು. ಇನ್ನು ಒಂದು ಗಂಟೆಯಷ್ಟರಲ್ಲಿ ಸೂರ್ಯನ ಕಿರಣಗಳು ಬರತೊಡಗುತ್ತದೆ. ಅಷ್ಟರವರೆಗೂ ಈ ಮೊಗ್ಗನ್ನೇ ನೋಡುತ್ತಿರು ಎಂದರು. ಶಿಷ್ಯನಿಗೆ ತೀರಾ ವಿಚಿತ್ರವೆನಿಸಿತಾದರೂ ಮೊದಲ ಬಾರಿಗೇ ಹೇಳುವಂತಿರಲಿಲ್ಲ. ಆಯಿತೆಂದು ಕೊಂಡು ಪಾಲಿಸಿದ. ಸೂರ್ಯ ಕಿರಣ ಬರುವಷ್ಟರಲ್ಲಿ ಹೂವು ಅರಳಿತು. ಗುರುಗಳೇ, ಹೂವು ಅರಳಿತು ಎಂದು ಹೇಳಲು ಹಿಂತಿರು ಗುವಾಗ ಗುರುಗಳೇ ಇರಲಿಲ್ಲ.

ಸಂಜೆ ಮತ್ತೆ ಧ್ಯಾನದ ಸಮಯ. ನಾಳೆ ಸಂಜೆ ಇದೇ ಹೊತ್ತಿಗೆ ಆ ನದಿಯ ಬಳಿ ಬಾ ಎಂದರು. ಅದನ್ನೂ ಪಾಲಿಸಿದ. ಗುರುಗಳು, ನದಿಯ ಬದಿಯಲ್ಲಿ ಕುಳಿತು, ನೀರು ಹರಿಯುವಾಗಿನ ನಾದ ಕೇಳಿದ್ದೀಯಾ? ಎಂದು ಕೇಳಿದರು. ಶಿಷ್ಯ ಇಲ್ಲ ಎಂದ. ಹಾಗಾದರೆ ಕೇಳಿಕೊಂಡು ಬಾ ಎಂದು ಹೊರಟರು. ಮತ್ತೂಂದು ದಿನ ಬೆಟ್ಟಕ್ಕೆ ಕರೆದೊಯ್ದು, ತುದಿಗೆ ಹೋದ ಮೇಲೆ ಏನನ್ನಿಸುತ್ತಿದೆ ಎಂದು ಕೇಳಿದರು.

ಒಂದು ತಿಂಗಳ ಕಾಲ ಎಲ್ಲ ಬಗೆಯ ಪಾಠವೂ ಆಯಿತು. ಮೂವತ್ತೂಂದನೇ ದಿನ ಗುರುಗಳು, ನೀನಿನ್ನು ಹೊರಡು ಎಂದರು. ಶಿಷ್ಯನಿಗೆ ತಲೆ ಬುಡ ಅರ್ಥವಾಗಲಿಲ್ಲ. ಗುರುಗಳೇ, ನಾನು ಏನನ್ನೂ ಕಲಿಯಲಿಲ್ಲ ಎಂದ. ಅದಕ್ಕೆ ಗುರುಗಳು, ಹೂವಿನಿಂದ ಏನು ಕಲಿತೆ? ನದಿಯ ಹರಿವಿನಿಂದ ಏನು ಅರಿತೆ? ಉಳಿದ ಅನುಭವಗಳು ಏನು ಕಲಿಸಿದವು? ಎಂದು ಕೇಳಿದರು. ಶಿಷ್ಯ ತಲೆತಗ್ಗಿಸಿ ನಿಂತ. ಗುರುಗಳು, ಬದುಕು ಎಂದರೆ ಅದೇ, ಬದುಕುವುದೂ ಅದೇ ರೀತಿಯಲ್ಲಿ ಎಂದು ಹೇಳಿದರು.

ಸಹಜತೆ ನೈಸರ್ಗಿಕವಾದುದು. ಬದು ಕೂ ಸಹ. ನಮ್ಮ ಬದುಕುವ ಕ್ರಮವೂ ಅದೇ. ಆದರೆ ನಾವೇ ಅದನ್ನು ಗೊಂದ ಲ ಮಾಡಿಕೊಳ್ಳುತ್ತೇವೆ, ಅದು ಸಂಕೀರ್ಣಗೊಳ್ಳುತ್ತದೆ. ಗಂಟನ್ನು ಬಿಡಿ ಸುವಾಗ ತಾಳ್ಮೆ ಬೇಕು. ಬದುಕನ್ನು ಅನುಭವಿಸುವಲ್ಲೂ ಸಹ. ಅದನ್ನು ಅರಿತು ಸಾಗಿದರೆ ಪ್ರತೀ ಕ್ಷಣವನ್ನೂ ನಮ್ಮದಾಗಿಸಿಕೊಳ್ಳುತ್ತೇವೆ, ಇಲ್ಲವಾದರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. ಸಂಕೀರ್ಣಗೊಳಿಸಿಕೊಳ್ಳುವುದೆಂದರೂ ಸಹಜತೆಯ ಸೌಂದರ್ಯವನ್ನು ಅನುಭವಿಸದಿರುವುದೆಂದೇ ಅರ್ಥ.

(ಸಾರ ಸಂಗ್ರಹ)

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.