ಮುಂಡಾಜೆ: ಕೃಷಿ ತೋಟಗಳಿಗೆ ಕಾಡಾನೆ ದಾಳಿ
Team Udayavani, Feb 25, 2021, 10:43 PM IST
ಬೆಳ್ತಂಗಡಿ: ಮುಂಡಾಜೆ ಗ್ರಾಮದ ದೂಂಬೆಟ್ಟು ಕಜೆ ಪ್ರದೇಶದಲ್ಲಿ ಗುರುವಾರ ಮುಂಜಾನೆ ಕೃಷಿ ತೋಟಗಳಿಗೆ ಕಾಡಾನೆ ದಾಳಿ ನಡೆಸಿದೆ.
ಒಂಟಿ ಸಲಗವೊಂದು ದಾಳಿ ನಡೆಸಿ ಬಾಳೆ, ಅಡಿಕೆ ಸಸಿ ಸಹಿತ ಇತರ ಕೃಷಿಯನ್ನು ಹಾಳು ಮಾಡಿದೆ. ರತ್ನಾ, ಬಾಬು ಗೌಡ, ಜಿನ್ನಮ್ಮ ಮೊದಲಾದವರ ಅಡಿಕೆ, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿಯಾಗಿದೆ.
ಆನೆ ದಾಳಿ ನಡೆಸಿರುವುದು ಗಮನಕ್ಕೆ ಬಂದಂತೆ ಅಕ್ಕಪಕ್ಕದ ಮನೆಗಳಿಗೆ ಮಾಹಿತಿ ನೀಡಿದ್ದಾರೆ. ತತ್‌ಕ್ಷಣ ಸ್ಥಳೀಯರು ದೊಂದಿ ಹಿಡಿದು, ಪಟಾಕಿ ಸಿಡಿಸಿ ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ. ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.