ವಿಶ್ವ ಆರ್ಚರಿ ಚಾಂಪಿಯನ್ಶಿಪ್: ಅದಿತಿ, ಓಜಸ್ ಸ್ವರ್ಣ ತೇಜಸ್ಸು
Team Udayavani, Aug 5, 2023, 11:41 PM IST
ಬರ್ಲಿನ್: ವಿಶ್ವ ಆರ್ಚರಿ ಚಾಂಪಿಯನ್ಶಿಪ್ನಲ್ಲಿ ಭಾರತದ 17 ವರ್ಷದ ಅದಿತಿ ಸ್ವಾಮಿ ಸೀನಿಯರ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಬರ್ಲಿನ್ ಕೂಟದಲ್ಲಿ ಅವರು ವನಿತಾ ಕಂಪೌಂಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ನೂತನ ಎತ್ತರ ತಲುಪಿದರು. ಇದು ವಿಶ್ವ ಆರ್ಚರಿಯಲ್ಲಿ ಭಾರತಕ್ಕೆ ಒಲಿದ ಮೊದಲ ವೈಯಕ್ತಿಕ ಸ್ವರ್ಣ ಪದಕವೂ ಆಗಿದೆ.
ಅನಂತರ ಪುರುಷರ ವಿಭಾಗದ ಕಂಪೌಂಡ್ ಸ್ಪರ್ಧೆಯಲ್ಲಿ ಓಜಸ್ ದೇವತಾಲೆ ಕೂಡ ಸ್ವರ್ಣ ಸಾಧನೆಗೈದರು. ಇದು ಪುರುಷರ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಸ್ವರ್ಣ ಪದಕವೂ ಹೌದು. ಇವರಿಬ್ಬರೂ ಸತಾರಾ ಅಕಾಡೆಮಿಯಲ್ಲಿ ಪ್ರವೀಣ್ ಸಾವಂತ್ ಅವರಿಂದ ತರಬೇತಿ ಪಡೆದಿದ್ದರು.
ಇದರೊಂದಿಗೆ ಈ ಕೂಟದಲ್ಲಿ ಭಾರತ ಒಟ್ಟು 3 ಚಿನ್ನ ಹಾಗೂ ಒಂದು ಕಂಚಿನ ಪದಕದ ಸಾಧನೆಗೈದಿತು. ಇದು ಕೂಡ ಒಂದು ದಾಖಲೆಯಾಗಿದೆ. ಆದರೆ ರಿಕರ್ವ್ ಸ್ಪರ್ಧಿಗಳಿಗೆ ಯಾವುದೇ ಪದಕ ಒಲಿಯಲಿಲ್ಲ.
ಅದಿತಿ ಸ್ವಾಮಿ 150ರಲ್ಲಿ 149 ಅಂಕ ಗಳಿಸಿದರು. ಮೆಕ್ಸಿಕೋದ ಆ್ಯಂಡ್ರಿಯಾ ಬೆಸೆರಾ (147) ಬೆಳ್ಳಿ ಗೆದ್ದರು. ಅದಿತಿ ಕಳೆದ ತಿಂಗಳಷ್ಟೇ ಜೂನಿಯರ್ ವಿಭಾಗದಲ್ಲೂ (ಅಂಡರ್-18) ಚಾಂಪಿಯನ್ ಆಗಿದ್ದರು. ದೇವತಾಲೆ ಪಫೆìಕ್ಟ್ 150 ಅಂಕ ಸಂಪಾದಿಸಿದರು. ಪೋಲೆಂಡ್ನ ಪ್ರೈಬಿಸ್ಕಿ ಬೆಳ್ಳಿ ಗೆದ್ದರು (149).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ