ಕರ ವಸೂಲಿಗಾರ್ತಿಗೆ ಸೀಮಂತ ಕಾರ್ಯ ನಡೆಸುವ ಮೂಲಕ ವಿಶ್ವ ಹೆಣ್ಣು ಮಕ್ಕಳ ದಿನ ಆಚರಣೆ
Team Udayavani, Jan 24, 2022, 4:40 PM IST
ಸಾಗರ: ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯನ್ನು ತಾಲೂಕಿನ ಆವಿನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸೋಮವಾರ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ಗ್ರಾಮ ಪಂಚಾಯ್ತಿಯ ಕರವಸೂಲಿಗಾರರಾದ ನಾಗರತ್ನ ಅವರಿಗೆ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ವಿವಿಧ ಹಣ್ಣು, ಸಿಹಿತಿನಿಸುಗಳನ್ನು ನೀಡಿ, ಆರತಿ ಬೆಳಗಿ ಸೀಮಂತ ಕಾರ್ಯಕ್ರಮವನ್ನೇ ನಡೆಸಿ ಹರಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಕಾಂತರಾಜ್, ಉಪಾಧ್ಯಕ್ಷರಾದ ಸಫಿಯಾ, ಸದಸ್ಯರಾದ ಶಶಿಕಲಾ, ಸುಜಾತ, ಸವಿತಾ, ಇಂದಿರಾ, ಅಶೋಕ್, ಎಂ. ರಾಜು ಪಟೇಲ್, ಸತೀಶ್ ಕೆ.ಟಿ., ಕುಮಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಜಯಮಾಲಾ, ಕಾರ್ಯದರ್ಶಿ ಶೇಖರಪ್ಪ, ಸಿಬ್ಬಂದಿಯಾದ ರಾಜೇಶ್, ಶಶಿಕುಮಾರ್, ಉಮೇಶ್ ಹಾಜರಿದ್ದು ಶುಭ ಹಾರೈಸಿದರು.
ಇದನ್ನೂ ಓದಿ : ಜಿಲ್ಲಾ ಉಸ್ತುವಾರಿ ಬದಲಾವಣೆ: ತವರು ಜಿಲ್ಲೆ ಬಹುತೇಕ ಸಚಿವರಿಗೆ ಇಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ
ಜಿ.ಟಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿದ್ದರಾಮಯ್ಯ
ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್
ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿ
ವಿಜಯೇಂದ್ರಗೆ ಭವಿಷ್ಯದಲ್ಲಿ ದೊಡ್ಡ ಅವಕಾಶ ಇದೆ: ಬಿಎಸ್ ವೈ ವಿಶ್ವಾಸ