ಬೆಲೆಯೇರಿಕೆಯಿಂದ ಹಣದುಬ್ಬರವೂ ಏರಿಕೆ
Team Udayavani, Nov 15, 2021, 9:00 PM IST
ನವದೆಹಲಿ: ಸಗಟು ಹಣದುಬ್ಬರ ಪ್ರಮಾಣ ಅಕ್ಟೋಬರ್‌ನಲ್ಲಿ ಶೇ.12.54ಕ್ಕೇರಿದೆ. ಇದಕ್ಕೆ ಮುಖ್ಯ ಸಿದ್ಧ ಉತ್ಪನ್ನಗಳು ಮತ್ತು ಕಚ್ಚಾ ಪೆಟ್ರೋಲಿಯಂಗಳ ಮೇಲಿನ ಬೆಲೆಯೇರಿಕೆಯಾಗಿದ್ದು.
ಈ ವರ್ಷ ಏಪ್ರಿಲ್‌ನಲ್ಲಿ ಎರಡಂಕೆಗೆ ತಲುಪಿದ್ದ ಸಗಟು ಹಣದುಬ್ಬರ ಸತತ 7 ತಿಂಗಳು ಕಳೆದರೂ ಎರಡಂಕೆಯಲ್ಲೇ ಇದೆ. ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.10.66ರಷ್ಟಿತ್ತು.
ಆದರೆ ಕಳೆದ ವರ್ಷ 2020 ಅಕ್ಟೋಬರ್‌ನಲ್ಲಿ ಈ ಪ್ರಮಾಣ ಕೇವಲ ಶೇ.1.31ರಷ್ಟಿತ್ತು. ಅದೇ ಪ್ರಮಾಣ ಈ ವರ್ಷ ಅಕ್ಟೋಬರ್‌ನಲ್ಲಿ ಬಹಳ ಹೆಚ್ಚಾಗಿದೆ.
ಇದನ್ನೂ ಓದಿ:ಬುಸ್ ನಾಗಪ್ಪ ದೆಹಲಿಗೂ ಹೋಯಿತು: ಕೇಂದ್ರ ಸಚಿವ ನಾರಾಯಣಸ್ವಾಮಿ ಲೇವಡಿ
ಖನಿಜ ತೈಲಗಳು, ಲೋಹಗಳು, ಆಹಾರೋತ್ಪನ್ನ, ಕಚ್ಚಾ ಪೆಟ್ರೋಲಿಯಂ ತೈಲ, ಜೈವಿಕ ಅನಿಲ, ರಾಸಾಯನಿಕಗಳು ಮತ್ತದರ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದೇ ಇದಕ್ಕೆ ಕಾರಣ.