Independence Day: ಸ್ವಾತಂತ್ರ್ಯ ದಿನಕ್ಕೆ ನೀವು ನೋಡಲೇಬೇಕಾದ 8 ಸಿನಿಮಾಗಳಿವು..


Team Udayavani, Aug 15, 2023, 10:00 AM IST

tdy-18

ಮುಂಬಯಿ: ದೇಶಕ್ಕಿಂದು 77ನೇ ಸ್ವಾತಂತ್ರ್ಯದ ಸಂಭ್ರಮ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರು, ಮಹನೀಯರು ಹಾಗೂ ವೀರ ಯೋಧರನ್ನು ಸ್ಮರಿಸುವ ಕುರಿತಾದ ನೈಜ ಕಥೆಗಳು, ಬರವಣಿಗೆ ಹಾಗೂ ದೃಶ್ಯರೂಪಗಳಾಗಿ ಬಂದಿವೆ. ದೇಶದ ಕಥೆ ಹಾಗೂ ವೀರ ಯೋಧರ ಕುರಿತಾದ ಕಥೆಯನ್ನು ಹೇಳುವ  8 ಸಿನಿಮಾಗಳ ಪಟ್ಟಿ ಇಲ್ಲಿದೆ.

ಶೇರ್‌ಷಾ:

ನಿರ್ದೇಶಕರು: ವಿಷ್ಣುವರ್ಧನ್

ಶೇರ್ಷಾ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಭಾರತೀಯ ಸೈನಿಕ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಕಥೆಯನ್ನು ಒಳಗೊಂಡಿರುವ ಸಿನಿಮವಾಗಿದೆ. ಭಾರತದ ಗಡಿಯಿಂದ ಶೌರ್ಯ ಮತ್ತು ಧೈರ್ಯದಿಂದ ಪಾಕ್‌ ಸೈನಿಕರನ್ನು ಅಟ್ಟಾಡಿಸಿದ ವಿಕ್ರಮ್‌ ಬಾತ್ರ ಅವರ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇವರ ಹೋರಾಟ 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯಕ್ಕೆ ಕಾರಣವಾಯಿತು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ  ಪಾತ್ರವನ್ನು ಸಿದ್ದಾರ್ಥ್‌ ಮಲ್ಹೋತ್ರ ಅವರು ನಿಭಾಯಿಸಿದ್ದಾರೆ. ವಿಕ್ರಮ್‌ ಅವರ ಕೆಚ್ಚೆದೆಯ ಹೋರಾಟದೊಂದಿಗೆ ಅವರ ವೈಯಕ್ತಿಕ ಜೀವನದ ಪ್ರೇಮಕಥೆಯನ್ನೂ ಸಿನಿಮಾದಲ್ಲಿ ತೋರಿಸಲಾಗಿದೆ. ಡಿಂಪಲ್ ಚೀಮಾ ಪಾತ್ರವನ್ನು ಕಿಯಾರಾ ಅಡ್ವಾಣಿ ನಿಭಾಯಿಸಿದ್ದಾರೆ.

ಪಾತ್ರವರ್ಗ: ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಶಿವ ಪಂಡಿತ್, ನಿಕಿತಿನ್ ಧೀರ್, ಮನ್ಮೀತ್ ಕೌರ್, ಶತಾಫ್ ಫಿಗರ್, ಇತರರು

ಸ್ಟ್ರೀಮ್‌ : ಅಮೇಜಾನ್‌ ಪ್ರೈಮ್

 ಉರಿ: ದಿ ಸರ್ಜಿಕಲ್ ಸ್ಟ್ರೈಕ್:‌  

ನಿರ್ದೇಶಕರು: ಆದಿತ್ಯ ಧರ್

ದೇಶ ಪ್ರೇಮವನ್ನು ಸಾರುವ ಮತ್ತೊಂದು ಚಿತ್ರವೆಂದರೆ ಅದು ʼಉರಿ: ದಿ ಸರ್ಜಿಕಲ್ ಸ್ಟ್ರೈಕ್ʼ 2016 ರಲ್ಲಿ ನಡೆದ ಉರಿ ದಾಳಿಯ ಕುರಿತಾದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಭಾರತೀಯ ಸೇನೆ ಪಾಕ್ ಮೇಲೆ ಮಾಡಿದ ‘ಸರ್ಜಿಕಲ್ ಸ್ಟ್ರೈಕ್’ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್‌ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಬರುವ “How’s the josh? High sirʼ ಎನ್ನುವ ಡೈಲಾಗ್‌ ಥಿಯೇಟರ್‌ ನಲ್ಲಿ ದೇಶ ಭಕ್ತಿಯನ್ನು ಉಕ್ಕುವಂತೆ ಮಾಡಿತ್ತು.

ವಿಕ್ಕಿ ಕೌಶಲ್‌ ಅವರಿಗೆ ವೃತ್ತಿ ಬದುಕಿನಲ್ಲಿ ʼಉರಿʼ ದೊಡ್ಡ ಬ್ರೇಕ್‌ ತಂದುಕೊಟ್ಟಿತು. ಈ ಸಿನಿಮಾ 340 ಕೋಟಿಗೂ ಅಧಿಕ ಕಲೆಕ್ಷನ್‌ ಬಾಕ್ಸ್‌ ಆಫೀಸ್‌ ನಲ್ಲಿ ಮಾಡಿತ್ತು.

ಸ್ಟ್ರೀಮ್‌ : ಜೀ5

ಪಾತ್ರವರ್ಗ: ವಿಕ್ಕಿ ಕೌಶಲ್, ಪರೇಶ್ ರಾವಲ್, ಯಾಮಿ ಗೌತಮ್, ಮೋಹಿತ್ ರೈನಾ, ಕೀರ್ತಿ ಕುಲ್ಹಾರಿ, ರಜಿತ್ ಕಪೂರ್, ಶಿಶಿರ್ ಶರ್ಮಾ, ರುಖ್ಸರ್ ರೆಹಮಾನ್, ಇತರರು

ರಂಗ್ ದೇ ಬಸಂತಿ:

ನಿರ್ದೇಶಕರು: ರಾಕೇಶ್ ಓಂಪ್ರಕಾಶ್ ಮೆಹ್ರಾ

ಭಾರತೀಯ ಕ್ರಾಂತಿಕಾರಿ ಚಳವಳಿಯ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನು ದಾಖಲಿಸಲು ಬ್ರಿಟಿಷ್ ಮೂಲದ ಸಿನಿಮಾ ಆಸಕ್ತಿ ವಿದ್ಯಾರ್ಥಿನಿಯೊಬ್ಬಳು ಭಾರತಕ್ಕೆ ಬರುತ್ತಾಳೆ. ಈ ವೇಳೆ ಅವಳು ದಿಲ್ಲಿ ಯೂನಿವರ್ಸಿಟಿಯಲ್ಲಿ ಕೆಲವರೊಂದಿಗೆ ಸಹಾಯದ ನಿರೀಕ್ಷೆಯನ್ನು ಮಾಡಿ ಸ್ನೇಹ ಬೆಳೆಸುತ್ತಾಳೆ. ಮುಂದೆ ಸಿನಿಮಾದಲ್ಲೊಂದು ಅನಿರೀಕ್ಷಿತ ತಿರುವು ಉಂಟಾಗುತ್ತದೆ. ಈ ತಿರುವು ಕ್ರಾಂತಿಕಾರಿ ಹೋರಾಟಕ್ಕೆ ಕಾರಣವಾಗುತ್ತದೆ.

ಸ್ಟ್ರೀಮ್:‌ ನೆಟ್‌ ಫ್ಲಿಕ್ಸ್

ಪಾತ್ರವರ್ಗ: ಅಮೀರ್ ಖಾನ್, ಸೋಹಾ ಅಲಿ ಖಾನ್, ಸಿದ್ಧಾರ್ಥ್, ಶರ್ಮಾನ್ ಜೋಶಿ, ಕುನಾಲ್ ಕಪೂರ್, ಆರ್. ಮಾಧವನ್, ಅತುಲ್ ಕುಲಕರ್ಣಿ, ವಹೀದಾ ರೆಹಮಾನ್, ಅನುಪಮ್ ಖೇರ್, ಕಿರಣ್ ಖೇರ್, ಆಲಿಸ್ ಪ್ಯಾಟನ್, ಇತರರು‌

83:

ನಿರ್ದೇಶಕರು: ಕಬೀರ್‌ ಖಾನ್

ಕ್ರೀಡಾಲೋಕದಲ್ಲಿ ನಮ್ಮ ದೇಶವನ್ನು ತಿರುಗಿ ನೋಡುವಂತೆ ಮಾಡಿದ್ದು, 1983 ರ ಕ್ರಿಕೆಟ್‌ ವಿಶ್ವಕಪ್.‌ ಇದೇ ನೈಜ ಕಥೆಯನ್ನು ಆಧರಿಸಿ ಬಂದ ಸಿನಿಮಾ 83. ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಭಾರತದ ಕ್ರಿಕೆಟ್‌ ತಂಡ ವೆಸ್ಟ್‌ ವಿಂಡೀಸ್‌ ವಿರುದ್ಧ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ವಿಜಯವನ್ನು ದಾಖಲಿಸಿದ ಕಥೆಯನ್ನು ಸ್ಪೂರ್ತಿದಾಯಕವನ್ನು ಹೇಳಿದ ಸಿನಿಮಾ ಇದಾಗಿದೆ. ಪ್ರಧಾನ ಪಾತ್ರದಲ್ಲಿ ರಣವೀರ್‌ ಸಿಂಗ್‌ ಕಾಣಿಸಿಕೊಂಡಿದ್ದಾರೆ. ‌

ಸ್ಟ್ರೀಮ್:‌  ಡಿಸ್ನಿ + ಹಾಟ್‌ ಸ್ಟಾರ್‌

ಪಾತ್ರವರ್ಗ: ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪಂಕಜ್ ತ್ರಿಪಾಠಿ, ತಾಹಿರ್ ರಾಜ್ ಭಾಸಿನ್, ಸಾಕಿಬ್ ಸಲೀಮ್, ಹಾರ್ಡಿ ಸಂಧು, ಆಮಿ ವಿರ್ಕ್, ಜತಿನ್ ಸರ್ನಾ, ನೀನಾ ಗುಪ್ತಾ, ಬೊಮನ್ ಇರಾನಿ, ಇತರರು

ಚಕ್ ದೇ! ಇಂಡಿಯಾ:  

ನಿರ್ದೇಶಕರು: ಶಿಮಿತ್ ಅಮೀನ್

ಭಾರತೀಯ ಸಿನಿಮಾರಂಗದಲ್ಲಿ ಕ್ರೀಡಾ ಸ್ಪೂರ್ತಿ ಹಾಗೂ ದೇಶ ಪ್ರೇಮವನ್ನು ಸಾರುವ ಸಿನಿಮಾದಲ್ಲಿ ಶಾರುಖ್‌ ಖಾನ್‌ ಅಭಿನಯದ ʼಚಕ್‌ ದೇ ಇಂಡಿಯಾʼ ಸಿನಿಮಾ ಕೂಡ ಒಂದು. ಭಾರತೀಯ ಪುರುಷರ ಹಾಕಿ ತಂಡದ ಕಪ್ತಾನನಾಗಿದ್ದ ಕಬೀರ್‌ ಖಾನ್‌ ಅವರ ಬಗೆಗಿನ ನೈಕ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ಪಾಕಿಸ್ತಾನ ತಂಡದ ವಿರುದ್ದ ಸೋಲು ಕಂಡ ಬಳಿಕ  ಕಬೀರ್‌ ಖಾನ್‌ ಧರ್ಮದ ವಿಚಾರದಿಂದ ತಂಡದಿಂದ ಹೊರ ಹಾಕಲಾಗುತ್ತದೆ. ಇದಾದ 7 ವರ್ಷದ ಬಳಿಕ ಅವರನ್ನು 16 ಜನ ಮಹಿಳಾ ತಂಡಕ್ಕೆ ತರಬೇತಿ ನೀಡಲು ಕೋಚ್‌ ಆಗಿ ನೇಮಿಸಲಾಗುತ್ತದೆ. ಹಾಕಿ ವಿಶ್ವಕಪ್‌ ಗೆಲ್ಲುವ ಕಥೆಯನ್ನು ಸಿನಿಮಾದಲ್ಲಿ ಸ್ಪೂರ್ತಿದಾಯಕವಾಗಿ ಹೇಳಲಾಗಿದೆ.

ಸ್ಟ್ರೀಮ್‌ : ಅಮೇಜಾನ್‌ ಪ್ರೈಮ್‌

ಪಾತ್ರವರ್ಗ:  ಶಾರುಖ್ ಖಾನ್, ವಿದ್ಯಾ ಮಾಲ್ವಾಡೆ, ಶಿಲ್ಪಾ ಶುಕ್ಲಾ, ಸಾಗರಿಕಾ ಘಾಟ್ಗೆ, ಚಿತ್ರಾಶಿ ರಾವತ್, ತಾನ್ಯಾ ಅಬ್ರೋಲ್, ಅನೈತಾ ನಾಯರ್, ಆರ್ಯ ಮೆನನ್, ಅಂಜನ್ ಶ್ರೀವಾಸ್ತವ್, ವಿಭಾ ಚಿಬ್ಬರ್, ಇತರರು

ಬಾರ್ಡರ್:‌  

ನಿರ್ದೇಶಕರು: ಜೆ.ಪಿ.ದತ್ತಾ

1971 ರಲ್ಲಿ ಲಾಂಗೆವಾಲಾ ಕದನದ ಸಮಯದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸೈನಿಕರ ಧೈರ್ಯ, ಶೌರ್ಯ, ಸ್ನೇಹವನ್ನು ದೇಶಭಕ್ತಿಯ ಹಿನ್ನೆಲೆಯಲ್ಲಿ ತೋರಿಸಲಾಗಿದೆ.ಭಾರತೀತ ಸಿನಿಮಾರಂಗದಲ್ಲಿ ʼಬಾರ್ಡರ್‌ʼ ಎಂದಿಗೂ ಸ್ಪೆಷೆಲ್‌ ಸಿನಿಮಾವಾಗಿ ಸಿನಿಮಾವಾಗಿ ನಿಲ್ಲುತ್ತದೆ.

ಸ್ಟ್ರೀಮ್‌ : ಅಮೇಜಾನ್‌ ಪ್ರೈಮ್‌

ಪಾತ್ರವರ್ಗ:  ಸುನಿಲ್ ಶೆಟ್ಟಿ, ಜಾಕಿ ಶ್ರಾಫ್, ಅಕ್ಷಯ್ ಖನ್ನಾ, ಪುನೀತ್ ಇಸ್ಸಾರ್, ಕುಲಭೂಷಣ್ ಖರ್ಬಂದ, ಟಬು, ಪೂಜಾ ಭಟ್, ರಾಖಿ, ಇತರರು.

ಸರ್ದಾರ್ ಉದಾಮ್:    

ನಿರ್ದೇಶಕರು: ಶೂಜಿತ್ ಸಿರ್ಕಾರ್

ಸರ್ದಾರ್ ಉದಾಮ್ 1919 ರ ಅಮೃತಸರದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಪ್ರತೀಕಾರಕ್ಕಾಗಿ ಲಂಡನ್‌ನಲ್ಲಿ ಮೈಕೆಲ್ ಓ’ಡ್ವೈಯರ್‌ನನ್ನು ಹತ್ಯೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಉಧಮ್ ಸಿಂಗ್ ಅವರ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ  ಮುಖ್ಯ ಪಾತ್ರದಲ್ಲಿ ವಿಕ್ಕಿ ಕೌಶಲ್‌ ನಟಿಸಿದ್ದಾರೆ.

ಸ್ಟ್ರೀಮ್‌ : ಅಮೇಜಾನ್‌ ಪ್ರೈಮ್

ಪಾತ್ರವರ್ಗ: ವಿಕ್ಕಿ ಕೌಶಲ್, ಶಾನ್ ಸ್ಕಾಟ್, ಸ್ಟೀಫನ್ ಹೊಗನ್, ಅಮೋಲ್ ಪರಾಶರ್, ಬನಿತಾ ಸಂಧು, ಇತರರು

ರಾಝೀ:

ನಿರ್ದೇಶಕರು: ಮೇಘನಾ ಗುಲ್ಜಾರ್

ಆಲಿಯಾಭಟ್ ಅಭಿನಯದ ʼರಾಝೀʼ ಸಿನಿಮಾದಲ್ಲಿ ಹರೀಂದರ್ ಸಿಕ್ಕಾರ ‘ಕಾಲಿಂಗ್ ಸೆಹಮತ್ʼ ಕಾದಂಬರಿಯಲ್ಲಿ ಎಳೆಯನ್ನು ತೋರಿಸಲಾಗಿದೆ. ಭಾರತದ ʼರಾʼ ಏಜೆಂಟ್‌ ಯುವತಿಯೊಬ್ಬಳು ಪಾಕಿಸ್ತಾನ ವ್ಯಕ್ತಿಯೊಂದಿಗೆ ಮದುವೆ ಆಗುವ ಮೂಲಕ ದೇಶದ ಪರವಾಗಿ ಕೆಲಸ ಮಾಡುವ ಕುರಿತಾದ ಕಥೆಯನ್ನು ಒಳಗೊಂಡಿದೆ.

ಸ್ಟ್ರೀಮ್:‌ ಅಮೇಜಾನ್‌ ಪ್ರೈಮ್‌

ಪಾತ್ರವರ್ಗ: ಆಲಿಯಾ ಭಟ್, ವಿಕ್ಕಿ ಕೌಶಲ್, ಸೋನಿ ರಜ್ದಾನ್, ಜೈದೀಪ್ ಅಹ್ಲಾವತ್, ರಜಿತ್ ಕಪೂರ್, ಶಿಶಿರ್ ಶರ್ಮಾ, ಅಮೃತಾ ಖಾನ್ವಿಲ್ಕರ್, ಇತರರು

 

ಟಾಪ್ ನ್ಯೂಸ್

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.