
IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್
Team Udayavani, Sep 19, 2020, 11:20 PM IST

ಅಬುಧಾಬಿ: ಐಪಿಎಲ್ 13ನೇ ಅವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಳಿಂದ ಭರ್ಜರಿ ಜಯಗಳಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ನಾಯಕ ಧೋನಿ ನಿರ್ಧಾರ ಫಲ ಕೊಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 9 ವಿಕೆಟಿಗೆ 162 ರನ್ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ಗೆ 163 ರನ್ ಗಳ ಬೃಹತ್ ಸವಾಲೊಡ್ಡಿತ್ತು. ಈ ಸವಾಲಿನ ಮೊತ್ತ ಬೆನ್ನತ್ತಿದ್ದ ಧೋನಿ ಪಡೆ ಡು ಪ್ಲೆಸಿಸ್ ಹಾಗೂ ಅಂಬಾಟಿ ರಾಯಡು ಅವರ ಅಮೋಘ 115 ರನ್ ಗಳ ಜೊತೆಯಾಟದೊಂದಿಗೆ 19.2 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು.
ಬೌಂಡರಿಯೊಂದಿಗೆ ಆರಂಭ
ಈ ಐಪಿಎಲ್ ಬೌಂಡರಿ ಹೊಡೆತ ದೊಂದಿಗೆ ಆರಂಭಗೊಂಡಿತು. ದೀಪಕ್ ಚಹರ್ ಎಸೆತವನ್ನು ಕವರ್ ಬೌಂಡರಿಗೆ ಬಾರಿಸಿದ ರೋಹಿತ್ ಶರ್ಮ, ಚುಟುಕು ಕ್ರಿಕೆಟಿನ ಜೋಶ್ ಕೂಟದುದ್ದಕ್ಕೂ ಇರಲಿದೆ ಎಂಬುದರ ಮುನ್ಸೂಚನೆ ನೀಡಿದರು. ಇವರ ಜತೆಗಾರನಾಗಿ ಬಂದವರು ಕ್ವಿಂಟನ್ ಡಿ ಕಾಕ್. ಈ ಜೋಡಿ 4.4 ಓವರ್‌ಗಳಿಂದ ಮೊದಲ ವಿಕೆಟಿಗೆ 46 ರನ್ ಪೇರಿಸಿತು. ರೋಹಿತ್ (12) ವಿಕೆಟ್ ಕಿತ್ತ ಲೆಗ್‌ಸ್ಪಿನ್ನರ್ ಪೀಯೂಷ್ ಚಾವ್ಲಾ ಚೆನ್ನೈಗೆ ಮೊದಲ ಯಶಸ್ಸು ತಂದಿತ್ತರು.
ಮುಂದಿನ ಓವರಿನಲ್ಲೇ ಸ್ಯಾಮ್ ಕರನ್ ಮುಂಬೈಗೆ ಮತ್ತೂಂದು ಹೊಡೆತ ನೀಡಿದರು. ಬೀಸು ಹೊಡೆತಗಳಿಗೆ ಮುಂದಾಗಿದ್ದ ಡಿ ಕಾಕ್ ಅವರನ್ನು ವಾಪಸ್ ಕಳುಹಿಸಿದರು. ಡಿ ಕಾಕ್ ಗಳಿಕೆ 20 ಎಸೆತಗಳಿಂದ 33 ರನ್ (5 ಬೌಂಡರಿ). ಬೆನ್ನು ಬೆನ್ನಿಗೆ 2 ವಿಕೆಟ್ ಕಳೆದುಕೊಂಡ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ಸೌರಭ್ ತಿವಾರಿ 44 ರನ್ ಜತೆಯಾಟ ನಡೆಸಿದರು. ಜಡೇಜ ಎಸೆತವನ್ನು ಲಾಂಗ್‌ಆಫ್ ಮೂಲಕ ರವಾನಿಸಿದ ತಿವಾರಿ ಈ ಕೂಟದ ಮೊದಲ ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ತಿವಾರಿ ಕೊಡುಗೆ 31 ಎಸೆತಗಳಿಂದ 42 ರನ್ (3 ಬೌಂಡರಿ, 1 ಸಿಕ್ಸರ್).
ಹಾರ್ದಿಕ್ ಪಾಂಡ್ಯ ಜಡೇಜ ಅವರ ಸತತ ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿದರೂ 14 ರನ್ ಗಡಿ ದಾಟಲಿಲ್ಲ. 15ನೇ ಓವರ್‌ನಲ್ಲಿ ಬೌಂಡರಿ ಲೈನ್‌ನಲ್ಲಿ 2 ಅದ್ಭುತ ಕ್ಯಾಚ್ ಪಡೆದ ಡು ಪ್ಲೆಸಿಸ್ ಚೆನ್ನೈಗೆ ಮೇಲುಗೈ ಒದಗಿಸಿದರು. ಕೊನೆಯ ಹಂತದಲ್ಲಿ ಕೈರನ್ ಪೊಲಾರ್ಡ್ ಸಿಡಿಯುವ ನಿರೀಕ್ಷೆ ಹುಸಿಯಾಯಿತು. ಪೊಲಾರ್ಡ್ ಗಳಿಕೆ 18 ರನ್ ಮಾತ್ರ (14 ಎಸೆತ).
ಸ್ಕೋರ್‌ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ 12
ಕ್ವಿಂಟನ್ ಡಿ ಕಾಕ್ 33
ಸೂರ್ಯಕುಮಾರ್ ಯಾದವ್ 17
ಸೌರಭ್ ತಿವಾರಿ 42
ಹಾರ್ದಿಕ್ ಪಾಂಡ್ಯ 14
ಕೈರನ್ ಪೊಲಾರ್ಡ್ 18
ಕೃಣಾಲ್ ಪಾಂಡ್ಯ 3
ಜೇಮ್ಸ್ ಪ್ಯಾಟಿನ್ಸನ್ 11
ರಾಹುಲ್ ಚಹರ್ ಔಟಾಗದೆ 2
ಟ್ರೆಂಟ್ ಬೌಲ್ಟ್ 0
ಜಸ್‌ಪ್ರೀತ್ ಬುಮ್ರಾ ಔಟಾಗದೆ 5
ಇತರ 5
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 162
ವಿಕೆಟ್ ಪತನ: 1-46, 2-48, 3-92, 4-121, 5-124, 6-136, 7-151, 8-156, 9-156.
ಬೌಲಿಂಗ್:
ದೀಪಕ್ ಚಹರ್ 4-0-32-2
ಸ್ಯಾಮ್ ಕರನ್ 4-0-28-1
ಲುಂಗಿ ಎನ್‌ಗಿಡಿ 4-0-38-3
ಪೀಯೂಷ್ ಚಾವ್ಲಾ 4-0-21-1
ರವೀಂದ್ರ ಜಡೇಜ 4-0-42-2
ಚೆನ್ನೈ ಕಿಂಗ್ಸ್ 19.2 ಓವರ್, 166/5
ಮುರಳಿ ವಿಜಯ್ 1
ಶೇನ್ ವಾಟ್ಸನ್ 4
ಡು ಪ್ಲೆಸಿಸ್ ಅಜೇಯ 58
ಅಂಬಾಟಿ ರಾಯುಡು 71
ರವೀಂದ್ರ ಜಡೇಜ 10
ಸ್ಯಾಮ್ ಕರನ್ 18
ಎಂ.ಎಸ್.ಧೋನಿ ಅಜೇಯ 0
ಇತರೆ 4
ವಿಕೆಟ್ ಪತನ: 1-5, 2-6, 3-121, 4-134, 5-153
ಬೌಲಿಂಗ್
ಟ್ರೆಂಟ್ ಬೌಲ್ಟ್ 3.2 0 23 1
ಜೇಮ್ಸ್ ಪ್ಯಾಟಿನ್ಸನ್ 4 0 27 1
ಜಸಿøàತ್ ಬುಮ್ರಾ 4 0 43 1
ಕೃಣಾಲ್ ಪಾಂಡ್ಯ 4 0 37 1
ರಾಹುಲ್ ಚಹರ್ 4 0 36 1
ಪಂದ್ಯ ಶ್ರೇಷ್ಠ: ಅಂಬಾಟಿ ರಾಯುಡು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
