“ಇಲ್ಲಿ’ ಬೇರು ಬಿಟ್ಟು “ಅಲ್ಲಿ’ಯ ಅವಕಾಶಕ್ಕಾಗಿ ತುಡಿಯುವ ವೃಕ್ಷ


Team Udayavani, Nov 14, 2020, 5:55 AM IST

Jivayana

ಸಾಂದರ್ಭಿಕ ಚಿತ್ರ

ಬದುಕಿನ ವೇದಿಕೆಯಾಗಿ, ಜೀವನ ನಡೆಯುವ ಯಂತ್ರವಾಗಿ ನಮ್ಮ ದೇಹವು ಒಂದು ಅದ್ಭುತ ಸೃಷ್ಟಿ. ಅದರಲ್ಲಿ ಯಾವುದೇ ಕುಂದು ಕೊರತೆಗಳಿಲ್ಲ. ಒಂದೇ ಒಂದು ಸಮಸ್ಯೆ ಎಂದರೆ ಅದು ನಮ್ಮನ್ನು ಇಲ್ಲಿಂದಾಚೆಗೆ ಎಲ್ಲಿಗೂ ಒಯ್ಯುವುದಿಲ್ಲ. ಇಲ್ಲೇ ಜನಿಸಿದ ದೇಹವು ಇಲ್ಲಿಯೇ ಮಣ್ಣಾಗುತ್ತದೆ. ಪಂಚ ಭೂತಗಳಿಂದ ಸೃಷ್ಟಿಯಾದದ್ದು ಮತ್ತೆ ಪಂಚಭೂತಗಳಲ್ಲಿ ಲೀನವಾಗುತ್ತದೆ.

ಇಷ್ಟು ಸಾಕೇ? ಒಂದು ಹಂತದ ವರೆಗೆ ಇದು ತೃಪ್ತಿಕರ. ಆದರೆ ದೈಹಿಕ ಇತಿಮಿತಿಗಳಿ ಗಿಂತ ಆಚೆಗಿನದ್ದರತ್ತ ಇಣುಕುವ, ತುಡಿ ಯುವ ಸ್ವಭಾವವು ಇದೇ ದೇಹ ಮತ್ತು ಅದರೊಂದಿಗಿರುವ ಮನಸ್ಸಿನ ಮೂಲೆಯಲ್ಲಿ ಇರುತ್ತದೆ. ಇರುವುದರಷ್ಟರಲ್ಲಿಯೇ ತೃಪ್ತಿ ಪಡದೆ, ಇರದುದರತ್ತ ತುಡಿಯುವ ಈ ಸ್ವಭಾವವೇ ಜೀವನದ ಮೂಲಸ್ರೋತ.

ನಾವು ಏನಾಗಿದ್ದೇವೆಯೂ ಅದಕ್ಕೆ ಕಾರಣವಾಗಿರುವುದು ಬದುಕಿನ ಈ ಆಯಾಮವೇ. ಪ್ರತಿಯೊಂದು ಜೀವ ಸೃಷ್ಟಿಯೂ ಈ ಆಯಾಮವನ್ನು ಹೊಂದಿರು ತ್ತದೆ. ಹೆಚ್ಚು ಬುದ್ಧಿಶಕ್ತಿಯನ್ನು ಹೊಂದಿರುವ, ಹೆಚ್ಚು ವಿಕಾಸ ಗೊಂಡಿರುವ ನಮ್ಮಲ್ಲಿ ಅಂದರೆ ಮನುಷ್ಯನಲ್ಲಿ ಬದು ಕಿನ ಈ ಸ್ರೋತ ಇನ್ನಷ್ಟು ಸಮೃದ್ಧವಾಗಿ ಪ್ರಜ್ವಲಿಸು ತ್ತಿರುತ್ತದೆ.

ನಮ್ಮ ಭೌತಿಕ ಆಯಾಮ ಮತ್ತು ಅದರಾಚೆಗಿನ ಆಯಾಮಗಳ ನಡುವೆ ಸಂದಿಗ್ಧವನ್ನು ಅನುಭವಿಸುವುದು, ಕಣ್ಣಿಗೆ ಕಾಣಿಸುವ ಸೃಷ್ಟಿಯಾಚೆಗೆ ಏನೋ ಇದೆ, ಅದೇನು ಎಂದು ಕಾತರಿಸುವುದು, ಆಧ್ಯಾತ್ಮಿಕ ಅನುಭವ ಗಳಿಸಲು ಹಂಬಲಿಸುವುದು, ಧ್ಯಾನಿಸುವುದು ಇದೇ ಕಾರಣಕ್ಕೆ. ನಾವು ಇಹದ ಮಿತಿಗೆ ಒಳಪಟ್ಟಿದ್ದರೂ ಅದರಾಚೆಗೂ ಏನೋ ಇದೆ ಎಂಬ ಪ್ರಜ್ಞೆ ನಮ್ಮೆಲ್ಲರ ಆಳದಲ್ಲಿ ಇದ್ದೇ ಇರುತ್ತದೆ.

ಇಹಕ್ಕೆ ಮಿತರಾಗಿರುವ ಗುಣದಿಂದ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ, ಒಟ್ಟು ಗೂಡಿಸಿಕೊಳ್ಳುವ ಗುಣ ನಮ್ಮಲ್ಲಿ ಸಹಜ ಸ್ವಭಾವವಾಗಿ ಕಾಣಬರುತ್ತದೆ. ಇದರಿಂದ ನಾವು ನಮ್ಮ ಸುತ್ತ ಗೋಡೆಗಳನ್ನು, ಚೌಕಟ್ಟು ಗಳನ್ನು ಕಟ್ಟಿಕೊಳ್ಳುತ್ತೇವೆ. ಇಲ್ಲಿ ಇರುವುದಕ್ಕಿಂತ ಆಚೆಗೆ ಏನೋ ಇದೆ ಎಂಬ ತುಡಿತವು ನಮ್ಮ ಗಡಿಗಳನ್ನು ಮೀರಿ ವಿಸ್ತರಿಸುವ ಸ್ವಭಾವವನ್ನು ನಮ್ಮಲ್ಲಿ ಉಂಟು ಮಾಡುತ್ತದೆ. ಒಂದ ರ್ಥದಲ್ಲಿ ಇವು ಒಂದ ಕ್ಕೊಂದು ತದ್ವಿರುದ್ಧ ವಾದ ಸಂಕುಚನ ಮತ್ತು ವಿಕಸನ ಗುಣಗಳು. ಆದರೆ ನಿಜಕ್ಕೂ ಇವು ವಿರುದ್ಧ ಧ್ರುವಗಳಲ್ಲ; ಒಂದಕ್ಕೊಂದು ಪೂರಕ. ಒಂದು ನಮ್ಮನ್ನು ಈ ಭೂಮಿಯ ಜತೆಗೆ ಆಳವಾದ ಸಂಬಂಧ ಹೊಂದುವಂತೆ, ಇಹದಲ್ಲಿ ಬೇರೂರುವಂತೆ ಮಾಡಿದರೆ ಆ ಬೇರಿನ ಆಧಾರದಲ್ಲಿ ವಿಶಾಲವಾಗಿ ಬೆಳೆದು ವಿಶ್ವ ಮಾನವರಾಗುವ ಸಾಧ್ಯತೆಯನ್ನು ವಿಕಸನಶೀಲ ಗುಣ ನೀಡುತ್ತದೆ.

ಹಾಗಾಗಿಯೇ ಈ ಎರಡೂ ಸತ್ವಗಳನ್ನು ನಾವು ಒಂದಕ್ಕೊಂದು ಪೂರಕವಾಗಿ ಪರಿಭಾವಿಸಬೇಕು. ಎರಡೂ ಗುಣಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಗುರುತಿಸಿ, ಪೋಷಿಸುವ ತಿಳಿವಳಿಕೆ ನಮ್ಮಲ್ಲಿದ್ದರೆ ಅವುಗಳ ನಡುವೆ ತಿಕ್ಕಾಟ ಉಂಟಾಗುವುದಿಲ್ಲ. ಆದರೆ ಇಹದಲ್ಲಿ ಬೇರು ಬಿಡುವ ಗುಣದಲ್ಲೇ ವ್ಯಸ್ತರಾದರೆ ಈ ಎರಡೂ ಮೂಲ ಸ್ರೋತ ಗಳು ಒತ್ತಡಕ್ಕೆ ಕಾರಣವಾಗುತ್ತವೆ.

ಐಹಿಕ ಮತ್ತು ಪಾರಲೌಕಿಕ – ಇವೆರಡರ ನಡುವೆ ನಾವು ನೀವು ಸಿಲುಕಿ ಹೈರಾಣಾಗು ವುದು ಈ ಅರಿವಿನ ಕೊರತೆಯಿಂದಲೇ. “ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಕವಿವಾಣಿ ಇದರ ಪ್ರತಿಮಾತ್ಮಕ ಅಭಿವ್ಯಕ್ತಿ. ಇನ್ನೊಂದು ಆಯಾಮದತ್ತ ಹೊರಳುವುದು ನಮ್ಮ ಸಹಜ ಗುಣ. ಈ ದೇಹಕ್ಕೆ ವಿಧಿಸಲ್ಪಟ್ಟಿರುವ ಗಡಿಗಳು, ಮಿತಿಗಳಿಂದ ಆಚೆಗೆ ಅಸೀಮ ಸೃಷ್ಟಿಯ ಕಡೆಗೆ ತುಡಿಯು ವುದೇ ಆಧ್ಯಾತ್ಮಿಕ ಸಾಧನೆಯ ಮೊದಲ ಹೆಜ್ಜೆ.

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.