CONNECT WITH US  

ಟ್ವಿಟಾಪತಿ

12 ಮಹಿಳೆಯರ ವಿರುದ್ಧ ಮಾನನಷ್ಟ ಮೊಕದ್ದಮೆಗೆ 97 ವಕೀಲರನ್ನು ಸಚಿವ ಎ.ಜೆ. ಅಕ್‌ಬರ್‌ ನೇಮಿಸಿಕೊಂಡಿದ್ದಾರೆ! ಆದರೆ ಸತ್ಯವನ್ನು ವಕೀಲರು ಮರೆಮಾಚಲಾಗದು.
●ಸಂಜಯ್‌ ಝಾ
ಜಪಾನ್‌ನಲ್ಲಿ ಮಹಿಳೆಯರ ಪ್ರವೇಶ ನಿಷೇಧಿಸುವ ದೇವಸ್ಥಾನ ಯುನೆಸ್ಕೋ ಪಾರಂಪರಿಕ ತಾಣವಾಗಿದೆ. ಆದರೆ ಶಬರಿಮಲೆಯಲ್ಲಿ ನಾವು ಸಂಪ್ರದಾಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ!
●ಶೆಫಾಲಿ ವೈದ್ಯ
ತನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದವರ ಮೇಲೆ ಸಚಿವ ಎಂ.ಜೆ ಅಕ್‌ಬರ್‌ ದೂರು ದಾಖಲಿಸಿದ್ದಾರೆ. ಹಾಗಾದರೆ ಸಚಿವೆ ಮೇನಕಾ ಗಾಂಧಿ ರಚಿಸಿದ, ಮಿ ಟೂ ಸಂಬಂಧಿ ಸಮಿತಿಯ ಕಥೆ ಏನಾಯ್ತು?
●ಹರಿಂದರ್‌ ಬವೇಜಾ
ಮಿ ಟೂ ಅಭಿಯಾನ ಕೇವಲ ಬಾಲಿವುಡ್‌ನ‌ಲ್ಲಷ್ಟೇ ಸದ್ದು ಮಾಡುತ್ತಿದೆ. ಇತರೆ ಚಿತ್ರರಂಗಗಳಲ್ಲಿ ಹೆಣ್ಣುಮಕ್ಕಳ ಕಥೆಯೇನೂ ಭಿನ್ನವಾಗಿರುವುದಿಲ್ಲ.
●ಅಜರ್‌ ಹನೀಫ್
ರಫೇಲ್‌ ಒಪ್ಪಂದದ ವಿಚಾರದಲ್ಲಿ ಕಾಂಗ್ರೆಸ್‌ ಅನವಶ್ಯಕ ಆರೋಪ ಮಾಡುತ್ತಿದೆ ಎನಿಸತೊಡಗಿದೆ. ಜನರಿಗೆ ಗೊತ್ತಿರದ ಯಾವ ವಿಷಯವನ್ನು ಅವರು ಹೇಳುತ್ತಿದ್ದಾರೆ?
●ತೂಜಾನೇನಾ
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಟಿ.ವಿ., ಇಂಟರ್ನೆಟ್‌ ಆಫ್ ಮಾಡಿಟ್ಟವನೇ ನಿಜವಾದ ಸುಖೀ ಪುರುಷ.
●ಟ್ರಾಲ್‌ಕೇಜ್ರಿ
ಕಾಂಗ್ರೆಸ್‌ ಮತ್ತು ಬಿಜೆಪಿಯ ಬೆಂಬಲಿಗರು ಯಾವ ಮಟ್ಟಕ್ಕೆ ಬ್ರೇನ್‌ವಾಶ್‌ ಆಗಿದ್ದಾರೆಂದರೆ ಮಿ ಟೂ ದಂಥ ಅಭಿಯಾನಕ್ಕೂ ಅವರು ರಾಜಕೀಯ ಬಣ್ಣ ಬಳಿಯಲು ಹಿಂದೆಮುಂದೆ ನೋಡುತ್ತಿಲ್ಲ.
●ದಯಾನಂದ್‌ ಸಾಠೆ
ಮಹಾಘಟಬಂಧನದ ಕನಸು ಕನಸಾಗಿಯೇ ಉಳಿಯಲಿದೆ. ಪ್ರತಿಪಕ್ಷಗಳ ಮೈತ್ರಿ ಎನ್ನುವುದೇ ಹಾಸ್ಯಾಸ್ಪದ ಕಲ್ಪನೆ.
●ಉದಯ್‌ ಪ್ರೀತಂ
ಜಿ.ಡಿ. ಅಗರವಾಲ್‌ ಅವರ ವಿಫ‌ಲ ಹೋರಾಟ ಮತ್ತು ಸಾವು, ಗಂಗಾ ಸ್ವತ್ಛತೆಯೆಡೆಗೆ ಇಲ್ಲಿಯವರೆಗಿನ ಎಲ್ಲಾ ಕೇಂದ್ರ ಸರ್ಕಾರಗಳ ಅಸಾಮರ್ಥ್ಯಕ್ಕೆ ಕನ್ನಡಿಯಾಗಿದೆ.
●ಸುಜಯ್‌ ವಿ
ನಾನಾ ಪಾಟೇಕರ್‌ ಉತ್ತಮ ನಟ ಎಂದ ಮಾತ್ರಕ್ಕೆ ಉತ್ತಮ ವ್ಯಕ್ತಿಯೂ ಆಗಿರಬೇಕೆಂದೇನೂ ಇಲ್ಲ. ನಟನೆಗೂ ವೈಯಕ್ತಿಕ ಬದುಕಿಗೂ ಬಹಳ ವ್ಯತ್ಯಾಸವಿದೆ.
●ವನಿತಾ ನಾರಾಯಣ್‌
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಎಂಜೆ ಅಕºರ್‌ ವಿಚಾರದಲ್ಲಿ ಕೇಂದ್ರ ಸ್ಪಷ್ಟ ನಿಲುವು ತೆಗೆದುಕೊಳ್ಳಲೇಬೇಕು. ಈ ವಿಚಾರದಲ್ಲಿ ಮೀನಮೇಷ ಬೇಡ.
●ತೂಜಾನೇನಾ
ಇನ್ನೆಷ್ಟು ದಿನ ಭಾರತದಂಥ ರಾಷ್ಟ್ರಗಳು ಅಮೆರಿಕದ ದರ್ಪಕ್ಕೆ ತಲೆಬಾಗಬೇಕು? ನನಗಾಗದವರಿಂದ ನೀವೂ ದೂರವಿರಿ ಎನ್ನುವ ಹಕ್ಕು ಅಮೆರಿಕಕ್ಕೆ ಕೊಟ್ಟವರ್ಯಾರು?
●ಅವಂತ್‌
ಮಿ ಟೂ ಆಂದೋಲನಕ್ಕೆ ರಾಜಕೀಯ ಬಣ್ಣ ಬಳಿಯುತ್ತಿರುವವರ ಗಮನಕ್ಕೆ... ಎಂಜೆ ಅಕ್ಬರ್‌ ಕಾಂಗ್ರೆಸ್‌ನಲ್ಲಿದ್ದಾಗ ಹೇಗೆ ಕ್ರೂರ ಕಾಮಿಯಾಗಿದ್ದನೋ ಬಿಜೆಪಿಯಲ್ಲಿದ್ದಾಗಲೂ ಹಾಗೆಯೇ ಇದ್ದಾನೆ. 1980ರಿಂದಲೂ ಆತ ಇರುವುದೇ ಹೀಗೆ.
●ಪ್ರಿಯಾ ರಮಣಿ
ಇಂದು ಪ್ರತಿ ಕಚೇರಿಗಳಲ್ಲೂ ಕಾಮುಕ ಮೃಗಗಳಿವೆ. ಮಹಿಳೆಯರು ತಮ್ಮ ರಕ್ಷಣೆಗೆ ಇರುವ ಕಾನೂನನ್ನು ಇಂಥವರ ವಿರುದ್ಧ ಸರಿಯಾಗಿ ಬಳಸಿಕೊಳ್ಳಬೇಕು.
●ಮಹಿಮಾ ಆನಂದ್‌
ಎಂ.ಜೆ. ಅಕ್ಬರ್‌ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಳ್ಳಲೇಬೇಕು. ಇಲ್ಲದಿದ್ದರೆ'ಬೇಟಿ ಬಚಾವೋ' ಎನ್ನುವ ಅದರ ಘೋಷಣೆ ಬರೀ ನಾಟಕವೆನಿಸಿಕೊಳ್ಳುತ್ತದೆ.
●ಅರ್ಪಿತಾ ಬಿಸ್ವಾಸ್‌

Pages

Back to Top