CONNECT WITH US  

ಟ್ವಿಟಾಪತಿ

ಇಬ್ಬರು ಮಹಿಳೆಯರು ಸನ್ನಿಧಾನಂ ಪ್ರವೇಶಿಸಿದ್ದಾರೆ. ಮಾಧ್ಯಮಗಳು ಇದನ್ನು"ಇತಿಹಾಸ'"ಐತಿಹಾಸಿಕ'ಎಂದೆಲ್ಲ ಬಣ್ಣಿಸುತ್ತಿವೆ.ಔರಂಗಜೇಬ್‌,ಜೆಂಗಿಸ್‌ ಖಾನ್‌,ಜೈ ಚಾಂದ್‌ ಕೂಡ ಇತಿಹಾಸದ ಭಾಗವಾಗಿದ್ದರು.ಆದರೆ,ಜನ ಅವರನ್ನು ಏನೆಂದು ಸ್ಮರಿಸುತ್ತಾರೆಂದು ಗೊತ್ತಿದೆಯಲ್ಲವೇ?ನಾಚಿಕೆಯಾಗಬೇಕು ನಿಮಗೆ.
● ಬಿ.ಎಲ್‌.ಸಂತೋಷ್‌
ಯಾವಾಗ ನಿಮ್ಮ ಪ್ರಾಮಾಣಿಕತೆಗೇ ಶಿಕ್ಷೆ ನೀಡಲಾಗುತ್ತದೋ, ಆಗ ನೀವು ಸುಳ್ಳು ಹೇಳಲು ಕಲಿಯುತ್ತೀರಿ.
●ಶಿರಿಶ್‌ ಕುಂದರ್‌
ಹೊಸ ವರ್ಷದ ಸಂಕಲ್ಪ ಒಂದೇ ದಿನಕ್ಕೆ ಸೀಮಿತವಾಗದಿರಲಿ. 2019 ನಿಜಕ್ಕೂ ನಿಮ್ಮ ಜೀವನದಲ್ಲಿ ಬದಲಾವಣೆ ತರಲಿ.
●ದಿಯಾ ಮಿರ್ಜಾ
ಯಾರೂ ಆಲಿಸಿಕೊಳ್ಳುತ್ತಿಲ್ಲ ಎನ್ನುವಂತೆ ಹಾಡು ಹಾಡಿ. ಯಾರೂ ನೋಡುತ್ತಿಲ್ಲ ಎನ್ನುವಂತೆ ನೃತ್ಯ ಮಾಡಿ. ಭೂಮಿಯಲ್ಲೇ ಸ್ವರ್ಗ ಇದೆ ಎನ್ನುವಂತೆ ಬಾಳಿ ತೋರಿಸಿ.
●ಪ್ರತಾಪ್‌ ಬೋಸ್‌
ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ದುಷ್ಟ ಸರ್ಕಾರವನ್ನು ನೋಡಿರಲಿಲ್ಲ. 29 ಬಾರಿ ದೆಹಲಿಗೆ ಹೋಗಿ ಮನವಿ ಸಲ್ಲಿಸಿದರೂ ನಮ್ಮ ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿಲ್ಲ.
●ಎನ್‌. ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ
ರೈತರಿಗಾಗಿ ಕಾಂಗ್ರೆಸ್‌ ನೀಡುವ ಭರವಸೆಗಳೆಲ್ಲವೂ ಚುನಾವಣೆ ಗೆಲ್ಲುವ ತಂತ್ರಗಳು ಎಂದು ಬಿಜೆಪಿ ಹೇಳುತ್ತಿದೆ. ಹಾಗಾದರೆ, ಪ್ರಧಾನಿ ಮೋದಿ ಘೋಷಿಸಲು ಹೊರಟಿರುವ ರೈತ ಪರ ಯೋಜನೆಗಳು 2019ರ ಚುನಾವಣೆಯಲ್ಲಿ ಬಿಜೆಪಿ ಸೋಲಲೆಂದು ಮಾಡುತ್ತಿರುವವೇ?
●ಪಿ. ಚಿದಂಬರಂ, ಕೇಂದ್ರದ ಮಾಜಿ ಹಣಕಾಸು ಸಚಿವ
1984ರ ಸಿಖ್‌V ನರಮೇಧದಂತೆ ಶಬಾನೋ ಪ್ರಕರಣವೂ ಸಹ ಕಾಂಗ್ರೆಸ್ಸನ್ನು ಸದಾ ಕಾಡುತ್ತಲೇ ಇರುತ್ತದೆ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಆಚರಣೆಯಲ್ಲಿರುವ ಇಂಥ ಕೆಟ್ಟ ಚಾಳಿಗಳನ್ನು ನಿಲ್ಲಿಸಲು ದೇಶದ ಎಲ್ಲಾ ಪಕ್ಷಗಳೂ ಕೈ ಜೋಡಿಸಬೇಕಿದೆ.
● ರಾಜದೀಪ್‌ ಸರ್‌ದೇಸಾಯ್‌
ಆತ: ಮೊಘಲರು ದೇಶವನ್ನು ಲೂಟಿ ಮಾಡಿದ್ದು ಬಿಟ್ರೆ, ಬೇರೇನನ್ನೂ ಕೊಡಲಿಲ್ಲ. ಹೋಟೆಲ್‌ ವೇಯ್ಟರ್‌: ಸರ್‌, ನಿಮ್ಮ ಆರ್ಡರ್‌ ರೆಡಿ. 2 ತಂದೂರಿ ಚಿಕನ್‌, 1 ಫಿರ್ಣಿ ಮತ್ತು 2 ಮೊಘಲೈ ಪರೋಟಾ!
●ರಾಮಸ್ವಾಮಿ
ಇಮ್ರಾನ್‌ ಖಾನ್‌ ಅವರು ಕ್ರಿಸ್‌ಮಸ್‌ ಹಬ್ಬದ ವೇಳೆ ಕ್ರಿಶ್ಚಿಯನ್ನರಿಗಷ್ಟೇ ಶುಭಾಶಯ ಹೇಳುತ್ತಾರೆ. ಆದರೆ, ನರೇಂದ್ರ ಮೋದಿಯವರು ಎಲ್ಲರಿಗೂ ಶುಭಾಶಯ ಹೇಳುತ್ತಾರೆ. ಇದುವೇ ಪಾಕ್‌ ಮತ್ತು ಭಾರತಕ್ಕಿರುವ ವ್ಯತ್ಯಾಸ.
●ಶೇಖರ್‌ ಗುಪ್ತಾ
ಸುಲಭದ ಜೀವನ ನನ್ನದಾಗಲಿ ಎಂದು ಪ್ರಾರ್ಥಿಸಬೇಡಿ. ಕಷ್ಟದ ಬದುಕನ್ನು ಸಮರ್ಥವಾಗಿ ಎದುರಿಸಲು ಧೈರ್ಯ ಕೊಡು ಎಂದು ಪ್ರಾರ್ಥಿಸಿ.
●ಅಂಕಿತ್‌
ಬಾಹುಬಲಿ,2.0 ಬಳಿಕ ಇದೀಗ ಕನ್ನಡ ಸಿನಿಮಾ ಕೆಜಿಎಫ್ ಯಶಸ್ಸು ನೋಡಿದರೆ, ಪ್ರಾದೇಶಿಕ ಅಡ್ಡಿಗಳೆಲ್ಲ ಮುರಿದುಬಿದ್ದಿರುವುದು ಗೋಚರಿಸುತ್ತದೆ. ಒಂದು ಒಳ್ಳೆಯ ಸಿನಿಮಾವನ್ನು ಎಲ್ಲಿ ಬೇಕಿದ್ದರೂ ಮಾಡಬಹುದು, ಅದು ಎಲ್ಲ ಕಡೆಯೂ ಓಡುತ್ತದೆ.
●ರಾಮ್‌ ಗೋಪಾಲ್‌ ವರ್ಮಾ
ಅಸ್ಸಾಂ ಎನ್ನುವುದು ಈಶಾನ್ಯದ ಅಸ್ಮಿತೆ. ಭಾರತದ ರಾಷ್ಟ್ರೀಯ ಶಕ್ತಿಯನ್ನು ಮರುಸ್ಥಾಪಿಸಬೇಕೆಂದರೆ ಈಶಾನ್ಯ ಭಾಗದ ಅಭಿವೃದ್ಧಿ ಆಗಬೇಕು. ಈ ನಿರ್ಲಕ್ಷಿತ ಪ್ರದೇಶದ ಕಡೆಗೆ ಬಿಜೆಪಿ ಕೊನೆಗೂ ಗಮನ ಹರಿಸಿರುವುದು ಸಂತೋಷದ ಸಂಗತಿ.
● ಡಾ.ಡೇವಿಡ್‌ ಫ್ರಾಲೆ
ಮಹಿಳೆಯು ಮಂದಿರಕ್ಕೆ ಹೋಗಬಾರದು ಎನ್ನುವಷ್ಟು ಅಪವಿತ್ರಳಾಗಿದ್ದರೆ,ಅವಳ ಗರ್ಭದಲ್ಲಿ 9ತಿಂಗಳು ಕಳೆದು ಹುಟ್ಟುವ ಪುರುಷ ಹೇಗೆ ಪವಿತ್ರನಾದ?
●ಡಿಂಪಲ್‌ ಯಾದವ್‌
ಮಹಾನತೆಯ ಮೂಲವಿರುವುದು ಮಾನವೀಯತೆಯಲ್ಲೇ ಎನ್ನುವುದು ನೆನಪಿರಲಿ.
●ಪೌಲೋ ಕೋಲ್ಹೋ
ದೇಶದ ರೈತ ನಮ್ಮ ರಾಜಕೀಯ ಪಕ್ಷಗಳಿಗೆ ವೋಟ್‌ ಬ್ಯಾಂಕ್‌ ಆಗಿದ್ದಾನೆ. ಆದರೆ ಈ ಬ್ಯಾಂಕಲ್ಲಿ ಹಣವೇ ಇಲ್ಲ.
●ತೂಜಾನೇನಾ

Pages

Back to Top