CONNECT WITH US  

ಟ್ವಿಟಾಪತಿ

ಗುಜರಾತ್‌ ಬಳಿ ಸ್ಫೋಟಗೊಂಡ ದೋಣಿ ಬಗ್ಗೆ ಹೀಗೊಂದು ಅಣಕ...
ಒಂದು ಬೋಟು ತುಂಬಾ ಹೊಸ ವರ್ಷದ ಉಡುಗೊರೆಯನ್ನು ಪಾಕಿಸ್ತಾನ ಕಳುಹಿಸಿಕೊಟ್ಟಿತ್ತು. ಭಾರತ ಅದನ್ನು ಸ್ಫೋಟಿಸಿತು! ರಾಜು ಅರುಣ್‌
ಮೋದಿಯವರಂತೆಯೇ ಕಾಣುವ ವ್ಯಕ್ತಿಯನ್ನು ಏನೆಂದು ಕರೆಯಬಹುದು?
-ಮೋದಿ ಜೆರಾಕ್ಸ್‌! „ ಅರುಣ
ಮಕ್ಕಳಿಗೆ ಆದಾಯ ತೆರಿಗೆ ಬಗ್ಗೆ ಪಾಠ ಹೇಳಿಕೊಡಬೇಕೇ? ಹೀಗೆ ಮಾಡಿ.
-ಮಕ್ಕಳು ಐಸ್‌ ಕ್ರೀಂ ತಿನ್ನುತ್ತಿರುವಾಗ ಅದರಲ್ಲಿ ಶೇ.30ರಷ್ಟನ್ನು ಕಿತ್ತುಕೊಂಡು ತಿನ್ನಿ.„ ಆರ್‌ಎ
ಸೋಪು ತಯಾರಿಸಲು ಎಣ್ಣೆ ಬೇಕು.
ಆದರೆ, ಎಣ್ಣೆ ಚೆಲ್ಲಿದ್ದನ್ನು ಶುಚಿಯಾಗಿಸಲು ಸೋಪು ಬೇಕು. ವಿಪರ್ಯಾಸ ಅಂದರೆ ಇದೇ ಅಲ್ಲವೇ? „ ಬಿ.ವಿ.ಕುಲಕರ್ಣಿ
ಎಲ್ಲ ರಾಜ್ಯಗಳಲ್ಲಿ ಪ್ಲಾಸ್ಟಿಕ್‌ ನಿಷೇಧಿಸುವುದನ್ನು ನೋಡಿದರೆ
ನನಗೆ ಪ್ರಿಯಾಂಕಾ ಚೋಪ್ರಾ ಭವಿಷ್ಯದ ಬಗ್ಗೆಯೇ ಚಿಂತೆಯಾಗುತ್ತಿದೆ! „ ರೇಬಿಸ್‌
ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ ಎನ್ನುವುದು
ನಮ್ಮ ವಿರುದ್ಧ ನಾವೇ ಯುದ್ಧ ಮಾಡುತ್ತೇವೆ ಎಂದು ಹೇಳಿದಂತೆ. „ ದಿ ಲೈಯಿಂಗ್‌ ಲಾಮಾ
ಭಾರತ ವಿರುದ್ಧ ಇನ್ಮುಂದೆ ಉಗ್ರ ದಾಳಿ ಸಂಘಟಿಸಲು ವಿಫ‌ಲವಾದರೆ
ಹಫೀಜ್‌ ಸಯೀದ್‌ನನ್ನು "ಕೆಟ್ಟ ಭಯೋತ್ಪಾದಕ' ಪಟ್ಟಿಗೆ ಸೇರಿಸುತ್ತೇವೆ-ಪಾಕಿಸ್ತಾನ „ ಸೈಕೋ
ಮುಂಬೈ ದಾಳಿಯಲ್ಲಿ ಉಗ್ರ ಲಖ್ವಿಯ ಕೈವಾಡ ಸಾಬೀತು ಪಡಿಸಲು ಪಾಕ್‌ಗೆ 6 ವರ್ಷವಾದರೂ ಆಗಿಲ್ಲ.
ಆದರೆ ಪೇಶಾವರ ಶಾಲಾ ಮಕ್ಕಳ ದಾಳಿ ಹಿಂದೆ ಭಾರತ ಕೈವಾಡ ಕಂಡು ಹಿಡಿಯಲು 1 ಗಂಟೆ ಸಾಕಾಯ್ತು! „ ಪರೇಶ್‌ ರಾವಲ್‌
ಭಾರತ ವಿರುದ್ಧ ಹಾಕಿ ಪಂದ್ಯ ಗೆದ್ದ ಪಾಕ್‌ ಆಟಗಾರರು ಟೀಶರ್ಟ್‌ ಬಿಚ್ಚಿದ್ದು ಒಳ್ಳೆ ಬೆಳವಣಿಗೆ;
ಆತ್ಮಹತ್ಯಾ ಬಾಂಬರ್‌ಗಳಲ್ಲ ಎಂಬುದು ಗೊತ್ತಾಯಿತು! „ ಸರ್‌ ಜಡೇಜಾ
ಮೋದಿಯವರ "ಮನ್‌ ಕೀ ಬಾತ್‌' ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್‌ನವರು ಏನಾದರೂ ಮಾಡಬೇಕು;
"ಸನ್‌ ಕೀ ಬಾತ್‌' ಹೆಸರಲ್ಲಿ ಅವರೂ ಶುರುಮಾಡುವುದು ಒಳ್ಳೆಯದು! „ ರಮೇಶ್‌ ಶ್ರೀವತ್ಸ
ಮಹಿಳೆಯರು ದಪ್ಪಗೆ, ಭಾರ ಇರುತ್ತಾರೆ ಎಂದು ದೂರುವಂತಿಲ್ಲ;
ಸೀರೆ 5 ಕೇಜಿ, ಮೇಕಪ್‌ 2 ಕೇಜಿ ಇದ್ದರೆ ಮತ್ತಿನ್ನೇನು? „ ಝೂಕರ್‌
ಇವತ್ತು ಒಳ್ಳೆಯ ಕ್ರೀಡಾ ದಿನ.
ಹಗಲು: ಇಂಡಿಯಾ ವರ್ಸಸ್‌ ಆಸ್ಟ್ರೇಲಿಯಾ. ಗವಾಸ್ಕರ್‌ ಬಾರ್ಡರ್‌ ಟ್ರೋಫಿ. ರಾತ್ರಿ: ಇಂಡಿಯಾ ವರ್ಸಸ್‌ ಪಾಕಿಸ್ತಾನ. ಬಾರ್ಡರ್‌ ಟ್ರೋಫಿ! „ ರಮೇಶ್‌ ಶ್ರೀವತ್ಸ
ದಿಲ್ಲಿಯಲ್ಲೊಬ್ಬ ಡಾಕ್ಟರ್‌ಗೆ ಪೇಶಂಟ್‌ಗಳೆಲ್ಲ ಸೇರಿ ಹಿಗ್ಗಾಮುಗ್ಗಾ ಬಾರಿಸಿದರು.
ಕಾರಣ: ಅವನ ಕೈಬರಹ ತುಂಬಾ ಸುಂದರವಾಗಿತ್ತು. ಹಾಗಾಗಿ ಅವನು ನಕಲಿ ಡಾಕ್ಟರ್‌ ಅಂತ ರೋಗಿಗಳಿಗೆ ಡೌಟು! „ ಮೈ ಫೇಕಿಂಗ್‌ ನ್ಯೂಸ್‌
ಪ್ರಜಾಪ್ರಭುತ್ವ ಎಂದರೇನು?
ರಾಹುಲ್‌ ಗಾಂಧಿ ಮತ್ತು ಅಲಿಯಾ ಭಟ್‌ರಂಥವರ ಹೇಳಿಕೆ ಕೇಳಿ ನಗುವ ಹಾಗೂ ಅವರಿಗಿಂತ ನಿಷ್ಪ್ರಯೋಜಕರನ್ನು ಆಯ್ಕೆ ಮಾಡುವ ಒಂದು ವ್ಯವಸ್ಥೆ! „ ಬಕ್‌ ಸಾಲಾ
ಟ್ಯಾಕ್ಸಿಗಳಲ್ಲಿ ನೂತನ ನೀತಿ ಜಾರಿ
ಮಹಿಳಾ ಗ್ರಾಹಕರು ಬಂದರೆ ಕೂಡಲೇ ಚಾಲಕರು ಕಾರಿನ ಕೀ ಕೊಟ್ಟು ಇಳಿದು ಹೋಗಬೇಕು! - ಮಲಿಕ್‌

Pages

Back to Top