ಐಟಿ ಮಂದಿಯ ಕಿಕ್‌ ಸಾಂಗ್‌

Team Udayavani, Jul 17, 2017, 10:56 AM IST

MCB-(1).jpg

ಈ ಕಲರ್‌ಫ‌ುಲ್‌ ಜಗತ್ತೇ ಹಾಗೆ. ಇಲ್ಲಿ ಪ್ರತಿಭೆ ಇದ್ದರೆ, ಯಾರು ಏನು ಬೇಕಾದರೂ ಆಗಬಹುದು. ಈಗಾಗಲೇ ಅದು ಸಾಬೀತಾಗಿದೆ ಕೂಡ. ಆ ಸಾಲಿಗೆ ಐಟಿ ಕಂಪೆನಿಯ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಸೇರಿದ್ದಾನೆ. ಅವನೊಳಗಿರುವ ಪ್ರತಿಭೆ ಮೆಚ್ಚಿಕೊಂಡು ಎಂಎನ್‌ಸಿ ಐಟಿ ಕಂಪೆನಿ ಮಂದಿ ಸೇರಿ, ಆ ಹುಡುಗನಿಗೊಂದು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಎಂಸಿಬಿ (ಮಿಡಲ್‌ ಕ್ಲಾಸ್‌ ಬಾಯ್ಸ) ಎಂಬ ವೀಡಿಯೋ ಆಲ್ಬಂ ಮಾಡುವ ಮೂಲಕ ಅವನೊಳಗಿನ ಪ್ರತಿಭೆಗೆ ಸಾಥ್‌ ಕೊಟ್ಟಿದ್ದಾರೆ.

ಅಂದಹಾಗೆ, ಆ ಹುಡುಗನ ಹೆಸರು ಟೋನಿ. ಸಾಹಿತ್ಯ ಬರೆದು, ಆ ವೀಡಿಯೋ ಆಲ್ಬಂನಲ್ಲಿ ಸ್ಟೆಪ್‌ ಹಾಕಿರುವ ಟೋನಿ ಟ್ರೀನ್ಸ್‌ನನ್ನು ಕರೆದುಕೊಂಡು ಪತ್ರಕರ್ತರ ಮುಂದೆ ಬಂದಿದ್ದರು ಐಟಿ ಮಂದಿ. “ಐಟಿಬಿಟಿಯಿಂದ ಕನ್ನಡ ದೂರವಾಗುತ್ತಿದೆ ಎಂಬ ಮಾತಿದೆ. ಅದನ್ನು ಸುಳ್ಳು ಮಾಡೋಕೆ ನಾವು ನಮ್ಮಲ್ಲಿ ಪ್ರತಿ ವರ್ಷ ಕನ್ನಡ ಹಬ್ಬ ಮಾಡುತ್ತಿದ್ದೇವೆ. ಎಲ್ಲರಲ್ಲೂ ಐಟಿ ಮಂದಿ ಕನ್ನಡ ಮಾತಾಡಲ್ಲ ಎಂಬ ಭಾವನೆ ಇದೆ. ಅದೂ ಕೂಡ ಸುಳ್ಳು.

ಕನ್ನಡ ಬರದವರಿಗೆ ಕನ್ನಡ ಕಲಿಸೋ ಪ್ರಯತ್ನವೂ ನಡೆಯುತ್ತಿದೆ. ಇಲ್ಲಿ ಟೋನಿ ಟ್ರೀನ್ಸ್‌ಗೆ ವೇದಿಕೆ ಕಲ್ಪಿಸಲು ಕಾರಣ, ನಮ್ಮ ಕಂಪೆನಿಯಲ್ಲಿ ಆರು ವರ್ಷಗಳಿಂದಲೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ. ಒಮ್ಮೆ, ಆ ಕಾರ್ಯಕ್ರಮದಲ್ಲಿ ಟೋನಿ ಟ್ರೀನ್ಸ್‌ಗೊಂದು  ಅವಕಾಶ ಕೊಟ್ಟಿದ್ದೆವು. ಚೆನ್ನಾಗಿ ಡ್ಯಾನ್ಸ್‌ ಮಾಡಿ, ಎಲ್ಲರ ಮನ ಗೆದ್ದಿದ್ದ. ಮರು ವರ್ಷ ಕಾರ್ಯಕ್ರಮ ಇದೆ ಅಂದಾಗ, ಎಷ್ಟೋ ಜನ ಟೋನಿ ಟ್ರೀನ್ಸ್‌ ಡ್ಯಾನ್ಸ್‌ ಇದೆಯಾ ಅಂತ ಕೇಳ್ಳೋರು.

ಅವನಲ್ಲಿ ಪ್ರತಿಭೆ ಇದೆ ಅಂತ ಗೊತ್ತಾಗಿ, ಅವನಿಗೊಂದು ವೇದಿಕೆ ಕಲ್ಪಿಸಲು ಈ ಆಲ್ಬಂ ಮಾಡಲಾಗಿದೆ. ಈ ಆಲ್ಬಂನಿಂದ ಯಾವುದೇ ರಿಟರ್ನ್ಸ್ ಬೇಡ ಅಂದರು ನಟೇಶ್‌. ಟೋನಿ ಟ್ರೀನ್ಸ್‌ಗೆ ನಾಚಿಕೆ ಸ್ವಭಾವ ಜಾಸ್ತಿಯಂತೆ. “ನನ್ನಲ್ಲಿ ಕಲೆ ಇತ್ತು. ಕನಸೂ ಇತ್ತು. ಆದರೆ, ಯಾರಲ್ಲೂ ಅವಕಾಶ ಕೇಳುತ್ತಿರಲಿಲ್ಲ. ಎಲ್ಲೋ ಇದ್ದವನು ನಾನು, ನನ್ನೊಳಗಿನ ಪ್ರತಿಭೆ ನೋಡಿ. ಎಂಎನ್‌ಸಿ ಕಂಪೆನಿಯವರು ಅವಕಾಶ ಕಲ್ಪಿಸಿದ್ದಾರೆ. ಒಳ್ಳೇ ಟೀಮ್‌ನಿಂದಾಗಿ, ಈ ಆಲ್ಬಂ ಮಾಡಲು ಸಾಧ್ಯವಾಗಿದೆ. ಶಶಾಂಕ್‌ ಶೇಷಗಿರಿ ಅವರು ಚೆನ್ನಾಗಿ ಸಂಗೀತ ಸಂಯೋಜಿಸಿದ್ದಾರೆ’ ಅಂದರು ಟೋನಿ.

ಸಂಗೀತ ನಿರ್ದೇಶಕ ಶಶಾಂಕ್‌ ಶೇಷಗಿರಿ ಅವರಿಗೆ ಇದು ಮೊದಲ ಸಂಗೀತದ ವೀಡಿಯೋ ಆಲ್ಬಂ ಅಂತೆ. ಗೆಳೆಯ ಚರಣ್‌ನಿಂದ ಈ ಅವಕಾಶ ಸಿಕ್ಕಿತು. ಟೋನಿ ಒಳ್ಳೇ ಹಾಡು ಬರೆದಿದ್ದರು. ಟ್ಯೂನ್‌ ಕೂಡ ಹಾಕಿದ್ದರು. ಅದನ್ನು ಇಟ್ಟುಕೊಂಡು ಈಗಿನ ಟ್ರೆಂಡ್‌ಗೆ ತಕ್ಕಂತೆ ಸಂಗೀತ ನೀಡಿದ್ದೇನೆ ಅಂದರು ಶಶಾಂಕ್‌. ನಿರ್ದೇಶಕ ಚಿರಂಜೀವಿ, ಆಲ್ಬಂ ನಾಯಕಿ ಪೂಜಾ, ಕ್ಯಾಮೆರಾಮೆನ್‌ ಉದಯ್‌ ನೀಲ್‌, ಸಂಗಮೇಶ್‌, ಅವಿನಾಶ್‌ ಶ್ರೀಮುರಳಿ, ವಿಜೀತ್‌,ಶೈಲಾ ಇತರರು ಇದ್ದರು.

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.