CONNECT WITH US  

ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದ ಶ್ವೇತಾ ಶ್ರಿವಾತ್ಸವ್‌ !

ಬೆಂಗಳೂರು: ಇತ್ತೀಚೆಗಷ್ಟೇ ಬೆಲ್ಲಿ ಪೇಂಟಿಂಗ್‌ ಫೋಟೋ ಶೂಟ್‌ ಮಾಡಿಸಿಕೊಂಡು ಸುದ್ದಿಯಲ್ಲಿದ್ದ ನಟಿ ಶ್ವೇತಾ ಶ್ರೀವಾತ್ಸವ್‌  ಈಗ ನವಮಾಸ ಕಳೆದು  ಶುಕ್ರವಾರ ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. 

ಪತಿ ಅಮಿತ್‌ ಶ್ರೀವಾತ್ಸವ್‌ ಅವರೊಂದಿಗೆ ಸತತ ಆರು ಗಂಟೆಗಳ ಕಾಲ ಖ್ಯಾತ ಕಲಾವಿದ ಬಾದಲ್‌ ನಂಜುಂಡಸ್ವಾಮಿ  ತುಂಬು ಹೊಟ್ಟೆಯ ಮೇಲೆ ಪೇಂಟಿಂಗ್‌ ಮಾಡಿದ್ದರು. ಫೋಟೋಗಳು ವೈರಲ್‌ ಆಗಿದ್ದವು.
 
ಹೆಣ್ಣು ಮಗುವಿನ ಆಗಮನ ನಮ್ಮ ಮನೆಗಾಗಿದೆ ಎನ್ನುವುದನ್ನು ತಿಳಿಸಲು ಸಂತಸವಾಗುತ್ತಿದೆ. ಎಲ್ಲರಿಗೂ ಧನ್ಯವಾದ ಎಂದು ಬಾಣಂತಿ ಶ್ವೇತಾ ಟ್ವೀಟ್‌ ಮಾಡಿದ್ದಾರೆ. 

Trending videos

Back to Top