CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇಲ್ಲಿ ನನ್ನದೆಂಬುದು ಏನೂ ಇಲ್ಲ; ಶಿವಣ್ಣ ಸ್ಪೀಕಿಂಗ್‌

ಒಂದು ವಾರ ಈ ಚಿತ್ರದ ಚಿತ್ರೀಕರಣ, ಇನ್ನೊಂದು ವಾರ ಇನ್ನೊಂದು, ಈ ಮಧ್ಯೆ ಬೆಂಗಳೂರಿನಲ್ಲೊಂದು ಮದುವೆ, ಹೈದರಾಬಾದ್‌ನಲ್ಲೊಂದು ಎಂಗೇಜ್‌ಮೆಂಟ್‌, ಕುವೈತ್‌ನಲ್ಲೊಂದು ಸನ್ಮಾನ ... ಕಟ್‌ ಮಾಡಿದರೆ ಮತ್ತೆ ಇನ್ನೊಂದು ಚಿತ್ರದ ಚಿತ್ರೀಕರಣ. ಬಹುಶಃ ಈ ವರ್ಷ ಅತ್ಯಂತ ಬಿಝಿಯಾಗಿದ್ದವರ ಸಾಲಿನಲ್ಲಿ ಶಿವರಾಜಕುಮಾರ್‌ ಮೊದಲಿಗರಾಗಿ ನಿಲ್ಲುತ್ತಾರೆ ಎನ್ನಬಹುದು. ಮೂರು ಚಿತ್ರಗಳ ಬಿಡುಗಡೆ, ಐದು ಚಿತ್ರಗಳ ಚಿತ್ರೀಕರಣ, ನಾಲ್ಕೆದು ದೇಶಗಳ ಸುತ್ತಾಟ, "ಕಿಕ್‌' ಕಾರ್ಯಕ್ರಮದಲ್ಲಿ ಭಾಗವಸಿದ್ದು, ಜೊತೆಗೆ ಕಾರ್ಯಕ್ರಮಗಳು, ಅಭಿಮಾನಿಗಳು ... ಹೀಗೆ ವರ್ಷ ಪೂರ್ತಿಯಾಗಿ ಬಿಝಿಯಾಗಿದ್ದರು ಶಿವರಾಜಕುಮಾರ್‌. ವರ್ಷ ಹೇಗೆ ಕಳೆಯಿತು ಎಂಬುದಕ್ಕಿಂತ, ಈಗಲೂ ಅವರು ಇಷ್ಟೆಲ್ಲವನ್ನೂ ಹ್ಯಾಗೆ ಮ್ಯಾನೇಜ್‌ ಮಾಡುತ್ತಾರೆ ಎಂಬ ಕುತೂಹಲದಿಂದ ಅವರ ಮುಂದೆ ಮಾತಿಗೆ ಕುಳಿತಿದ್ದಾಯಿತು.


"ಶುರು ಮಾಡೋಣೇನಮ್ಮ ...'ಅಂತಲೇ ಮಾತು ಶುರು ಮಾಡಿದರು ಶಿವರಾಜಕುಮಾರ್‌. ದೇವನಹಳ್ಳಿ ಏರ್‌ಪೋರ್ಟ್‌ಗಿಂಥ ಹಿಂದೆ ಇರುವ ಸೀಗೇಹಳ್ಳಿ ದಾಟಿ ಮುಂದೆ ಹೋದರೆ, ಅಲ್ಲೊಂದು ದೊಡ್ಡ ಫಾರ್ಮ್ ಇದೆ. ಅಲ್ಲಿ ನಡೆಯುತಿತ್ತು "ಲೀಡರ್‌' ಚಿತ್ರದ ಚಿತ್ರೀಕರಣ. ಶಿವರಾಜಕುಮಾರ್‌ ಬೆಳಿಗ್ಗೆಯೇ ಬಂದು ಮೇಕಪ್‌ ಹಾಕಿಕೊಂಡು ಕುಳಿತಿದ್ದರು. ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತಿತ್ತು. ಇನ್ನೂ ಮೊದಲ ಶಾಟ್‌ ತೆಗೆದಿರಲಿಲ್ಲ. ಮಾತಾಡಿ, ಆ ನಂತರ ಚಿತ್ರೀಕರಣಕ್ಕೆ ಹೋಗುವುದಾಗಿ ಹೇಳಿದ ಶಿವರಾಜಕುಮಾರ್‌, ಒಂದು ಸಿಪ್‌ ಕಾಫಿ ಹೀರಿ ಮಾತಿಗೆ ಕುಳಿತರು.

"ಇದರಲ್ಲಿ ನಂದೇನಿದೆಯಮ್ಮಾ' ಎನ್ನುತ್ತಾರೆ ಅವರು. ವರ್ಷಪೂರ್ತಿ ಬಿಝಿಯಾಗಿದ್ದರಲ್ಲಿ ವಿಶೇಷವೇನಿಲ್ಲ ಎನ್ನುವಂತಿತ್ತು ಅವರ ಮಾತು. "ಇಲ್ಲಿ ನನ್ನೊಬ್ಬನ್ನದೇನಿಲ್ಲ. ಎಲ್ಲರ ಸಹಕಾರದಿಂದ ಸಾಧ್ಯವಾಯ್ತು. ಇದೆಲ್ಲಾ ಒಬ್ಬನ ಕೈಲಿ ಸಾಧ್ಯವಿಲ್ಲ. ನನಗೆ ಅವರೆಲ್ಲಾ ಕೋ-ಆಪರೇಟ್‌ ಮಾಡಿದ್ದರಿಂದಲೇ ಅಲ್ವಾ ನಾನು ನಟಿಸಿದ್ದು. ಹಾಗಾಗಿ ನನಗೇನೂ ಅನಿಸಲಿಲ್ಲ. ಇನ್ನೊಂದು ಖುಷಿಯೇನು ಎಂದರೆ, ನನ್ನ ಹಲವು ಮೂಡ್‌ಗಳನ್ನ ನೋಡಿಕೊಳ್ಳುವುದಕ್ಕೆ ನನಗೆ ಸಾಧ್ಯವಾಯ್ತು. ಎಲ್ಲರ ಜೊತೆಗೆ ಕೆಲಸ ಮಾಡಿದ ಅನುಭವವಾಯ್ತು. ಅದರಲ್ಲೂ ಇತ್ತೀಚೆಗೆ ಸಾಕಷ್ಟು ಹೊಸಬರು ಮತ್ತು ಯುವಕರ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ನಿರ್ದೇಶಕರು, ಕೋ-ಸ್ಟಾರ್ ಎಲ್ಲರೂ ಯುವಕರೇ. ಆಗ ನಾನೂ ಯಂಗ್‌ ಎಂಬ ಭಾವನೆ ಬರುತ್ತೆ' ಎನ್ನುತ್ತಾರೆ ಶಿವರಾಜಕುಮಾರ್‌.

ಇಷ್ಟೆಲ್ಲದರ ಮಧ್ಯೆ ಅವರು ದೇವರ ಹತ್ತಿರ ಒಂದು ವಿಷಯವನ್ನು ಕೇಳುತ್ತಾರಂತೆ. ಇಷ್ಟೆಲ್ಲಾ ಯಶಸ್ಸು ಮತ್ತು ಜನಪ್ರಿಯತೆ ತಲೆಗೆ ಹೋಗೋದು ಬೇಡ ಅಂತ. "ನಾನು ಇವತ್ತು ಏನೇ ಇರಬಹುದು. ಆದರೆ, ಅದು ತಲೆಗೆ ಹೋಗೋದು ಬೇಡ. ನನ್ನನ್ನ ಇನ್ನೂ ಸಿಂಪಲ್‌ ಆಗಿ ಇಟ್ಟಿರು ಅಂತ ದೇವರ ಹತ್ತಿರ ಕೇಳಿಕೊಳ್ತೀನಿ. ಲೈಫ್ನಲ್ಲಿ ಯಾವತ್ತೂ ಸಿಂಪಲ್‌ ಆಗಿರಬೇಕು ಅಂತ ನನ್ನ ಆಸೆ. ಮುಂಚಿನಿಂದಲೂ ಹಾಗೇ ಇದ್ದೀನಿ. ಈಗಲೂ ಅಷ್ಟೇ. ಮುಂದೆ ಸಹ ನಾನು ಹೀಗೆ ಇರಬೇಕು ಅಂತ ಆಸೆ' ಎಂಬುದು ಶಿವರಾಜಕುಮಾರ್‌ ಅಭಿಪ್ರಾಯ.

ಈ ವರ್ಷ ಅವರು ಸತತವಾಗಿ ಬಿಝಿಯಾಗಿದ್ದರು. ಮೂರು ಚಿತ್ರಗಳು ಬಿಡುಗಡೆಯಾದವು, ಎಲ್ಲಾ ಓಕೆ. ಆದರೆ, ಮುಂದಿನ ವರ್ಷ ಇನ್ನೂ ಚೆನ್ನಾಗಿರಲಿದೆ ಎಂಬುದು ಅವರ ವಿಶ್ವಾಸ. ಏಕೆಂದರೆ, ಮುಂದಿನ ವರ್ಷ ಶಿವರಾಜಕುಮಾರ್‌ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತವಂತೆ. ವರ್ಷದ ಮೊದಲ ಚಿತ್ರವಾಗಿ "ಶ್ರೀಕಂಠ' ಬಿಡುಗಡೆಯಾಗಲಿದೆ. ಅದಾದ ನಂತರ "ಬಂಗಾರ', "ಲೀಡರ್‌' ಮತ್ತು "ಟಗರು' ಚಿತ್ರಗಳು ಸ್ವಲ್ಪ ದಿನಗಳ ಗ್ಯಾಪ್‌ನಲ್ಲಿ ಬಿಡುಗಡೆಯಾಗಲಿವೆ. ಈ ಪೈಕಿ ಎಲ್ಲಾ ಚಿತ್ರಗಳು ಸಹ ಒಂದಕ್ಕಿಂತ ಒಂದು ವಿಭಿನ್ನ ಮತ್ತು ಎಲ್ಲಾ ಪಾತ್ರಗಳು ಸಹ ಬೇರೆ ಬೇರೆ ತರಹ ಇದೆಯಂತೆ. ಇನ್ನು ಈ ಚಿತ್ರಗಳಲ್ಲಿ ವಿಜಯ್‌ ರಾಘವೇಂದ್ರ, ಯೋಗಿ, ಧನಂಜಯ್‌, ವಸಿಷ್ಠ ಸಿಂಹ, ಗುರುರಾಜ್‌ ಜಗ್ಗೇಶ್‌ ಮುಂತಾದವರ ಜೊತೆಗೆ ನಟಿಸುತ್ತಿರುವುದು ಶಿವರಾಜಕುಮಾರ್‌ ಅವರಿಗೆ ಡಬ್ಬಲ್‌ ಖುಷಿ ಇದೆಯಂತೆ.

"ತುಂಬಾ ಜನ ಹುಡುಗರು ನನಗೆ ತುಂಬಾ ಗೌರವ ಕೊಡುತ್ತಾರೆ. ತುಂಬಾ ಮರ್ಯಾದೆುಂದ ನೋಡಿಕೊಳ್ಳುತ್ತಾರೆ. ಗಣೇಶ್‌, ಯಶ್‌, ಪ್ರಜ್ವಲ್‌ ... ಎಲ್ಲರೂ ಅಷ್ಟೇ. ಅಟ್‌ ದಿ ಸೇಮ್‌ ಟೈಮ್‌, ಅವರೆಲ್ಲಾ ನನ್ನ ವಯಸ್ಸು ಮರೆತು ನನ್ನ ಜೊತೆಗೆ ಆಟ ಆಡುತ್ತಾರೆ. ಪ್ರೀತಿುಂದ ಮಾತಾಡುತ್ತಾರೆ. ಅದರಲ್ಲಿ ಯಾವುದೇ ಕೊಂಕಿಲ್ಲ. ಅವರಿಗೆಲ್ಲಾ ಏನೋ ಗೌರವ. ಅದಕ್ಕೆಲ್ಲಾ ನಾನು ಅರ್ಹ ಅಂತ ನಾನು ಹೇಳುವುದಿಲ್ಲ. ಆದರೆ, ಅವರಿಗೆ ನಾನು ಅರ್ಹ ಅಂತ ಅನಿಸಿರಬಹುದು, ಅದೇ ಕಾರಣಕ್ಕೆ ತುಂಬಾ ಗೌರವದಿಂದ ನೋಡಿಕೊಳ್ಳುತ್ತಾರೆ. ನನ್ನ ವಯಸ್ಸು ಮರೆತು ನನ್ನ ಹುಡುಗನ ತರಹ ಟ್ರೀಟ್‌ ಮಾಡ್ತಾರೆ. ನಾವೆಲ್ಲಾ ಒಟ್ಟಿಗೆ ಪಾರ್ಟಿ ಮಾಡ್ತೀವಿ. ಆ ವಿಷಯದಲ್ಲಿ ನಾನು ಬಹಳ ಲಕ್ಕಿ ಎಂದರೆ ತಪ್ಪಿಲ್ಲ' ಎನ್ನತ್ತಾರೆ ಶಿವರಾಜಕುಮಾರ್‌.

ಇನ್ನು ಅವರು ಈ ವರ್ಷ ಸುದೀಪ್‌ ಜೊತೆಗೆ "ದಿ ವಿಲನ್‌' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವರಾಜಕುಮಾರ್‌ ಮತ್ತು ಸುದೀಪ್‌ ನಡುವೆ ಎಲ್ಲವೂ ಸರಿುಲ್ಲ ಎಂಬಂತ ಮಾತುಗಳು, ಸೋಯಲ್‌ ುàಡಿಯಾದಲ್ಲಿ ಇಬ್ಬರ ಅಭಿಮಾನಿಗಳ ಪರಸ್ಪರ ಕೆಸರೆರಚಾಟಗಳೆಲ್ಲಕ್ಕೂ ಈಗ ಫ‌ುಲ್‌ ಸ್ಟಾಪ್‌ ಬಿದ್ದಿದೆ. "ದಯಟ್ಟು ತೊಂದರೆ ಕೊಡಬೇಡಿ. ನಾನು ಮತ್ತು ಸುದೀಪ್‌ ಚೆನ್ನಾಗಿಯೇ ಇದ್ವಿ. ಒಂದು ಕುಟುಂಬದವರು ಎಂದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರಬಹುದು. ಅದನ್ನು ನಾವು ಸರಿ ಮಾಡಿಕೊಳ್ತೀವಿ. ದಯಟ್ಟು ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಅಭಿಮಾನಿಗಳಲ್ಲಿ ಹೇಳ್ಳೋದಿಷ್ಟೇ. ಬೀ ಸಿಂಪಲ್‌. ಅಭಿಮಾನ ಓಕೆ. ಅದು ಸಿನಿಮಾಗಿರಲಿ. ಅಭಿಮಾನ ಇದ್ದರೆ ಬಂದು ಸಿನಿಮಾ ನೋಡಿ. ಇತ್ತೀಚೆಗೆ "ಶ್ರೀಕಂಠ' ಚಿತ್ರದಲ್ಲಿ ವಿಷ್ಣು ಅವರಿಗೆ ಅವಮಾನವಾಯ್ತು ಅಂತೆಲ್ಲಾ ಆಯ್ತು. ನಾನು ಷ್ಣು ಅವರ ಅಭಿಮಾನಿ. ಅವರ ಬಗ್ಗೆ ತುಂಬಾ ಗೌರವ ಇದೆ. ಅರ್ಥ ಮಾಡಿಕೊಳ್ಳಿ. ಕೆ.ಎಸ್‌. ಅಶ್ವತ್ಥ್ ಅವರು ಅಪ್ಪಾಜಿ ಜೊತೆಗೂ ನಟಿಸುತ್ತಿದ್ದರು, ಷ್ಣುವರ್ಧನ್‌ ಅವರ ಜೊತೆಗೂ ನಟಿಸುತ್ತಿದ್ದರು. ಹಾಗಂತ ಅವರನ್ನ ಹೇಟ್‌ ಮಾಡೋಕೆ ಆಗುತ್ತಾ. ಖಂಡಿತಾ ಇಲ್ಲ. ಅದು ತಪ್ಪು. ಅತಿಯಾದ ಅಭಿಮಾನ ಬೇಡ. ಅಲ್ಲಿ ಪ್ರೀತಿ ಇರಲ್ಲ' ಎಂಬುದು ಅವರ ನೇರನುಡಿ.

ಈ ಮಧ್ಯೆ ಅವರು ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ 100ನೇ ಚಿತ್ರವಾದ "ಗೌತುಪುತ್ರ ಶಾತಕರ್ಣಿ'ಯಲ್ಲಿ ಒಂದು ಅತಿಥಿ ಪಾತ್ರವನ್ನು ಮಾಡಿಬಂದಿದ್ದಾರೆ. "ನಮ್ಮ ಅವರ ಕುಟುಂಬದ ಬಾಂಧವ್ಯ ಚೆನ್ನಾಗಿದೆ. ಅವರಿಗೆ ತಮ್ಮ ಚಿತ್ರದಲ್ಲಿ ನಾನು ನಟಿಸಬೇಕು ಅಂತ ಮನಸ್ಸಿನಲ್ಲಿ ಇತ್ತಂತೆ. ಹಾಗಾಗಿ ಕೇಳಿದರು. ಒಂದೊಳ್ಳೆಯ ಅನುಭವವಾಗುತ್ತದೆ ಎಂದು ಹೋಗಿ ಬಂದೆ. ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ. ಮೂರು ದಿನಗಳ ಚಿತ್ರೀಕರಣ ನಡೆಯಿತು. ಬಹಳ ಒಳ್ಳೆಯ ಅನುಭವ. ನಾನು ಅದರಲ್ಲಿ ನಿರೂಪಕನಾಗಿ ಕಾಣಿಸಿಕೊಂಡಿದ್ದೇನೆ' ಎನ್ನುತ್ತಾರೆ ಅವರು. ಇನ್ನು ಈ ಅಚಾರವಾಗಿ ದೊಡ್ಡ ಮಟ್ಟದ ಅಪಸ್ವರಗಳು ಕೇಳಿಬರದಿದ್ದರೂ, ಅದಲ್ಲಲ್ಲಿ ಗುಸುಗುಸು ಇದ್ದೇ ಇದೆ. ಅದೇನೆಂದರೆ, ಇದುವರೆಗೂ ಡಾ. ರಾಜಕುಮಾರ್‌ ಅವರ ಕುಟಂಬದಲ್ಲಿ ಯಾರೊಬ್ಬರೂ ಪರಭಾಷೆಯ ಚಿತ್ರಗಳಲ್ಲಿ ನಟಿಸಿರಲಿಲ್ಲ. ಈಗ ಶಿವರಾಜಕುಮಾರ್‌ ಮೊದಲ ಬಾರಿಗೆ ತೆಲುಗು ಚಿತ್ರವೊಂದರಲ್ಲಿ ನಟಿಸಿ ಬಂದಿದ್ದಾರೆ, ಈ ಮೂಲಕ ಬ್ರೇಕ್‌ ಮಾಡಿದ್ದಾರೆ ಎಂದು. ಹಾಗಾದರೆ, ಡಾ. ರಾಜ್‌ ಕುಟುಂಬದವರು ಪರಭಾಷೆಯಲ್ಲಿ ನಟಿಸಬಾರದು ಎಂದೇನಾದರೂ ಅಲಿಖೀತ ನಿಯಮತ್ತ ಎಂಬ ಪ್ರಶ್ನೆ ಬರಬಹುದು. ಖಂಡಿತಾ ಇಲ್ಲ ಎನ್ನುತ್ತಾ ಅವರು.

"ಕಲೆಗೆ ಯಾವುದೇ ಭಾಷೆ ಇಲ್ಲ. ಆ ತರಹದ ಯಾವುದೇ ನಿಯಮವೂ ಇಲ್ಲ. ನಮ್ಮವರು ಅಲ್ಲಿಗೆ ಹೋಗಿ ಅಭಿನುಸುವುದು ಹೆಮ್ಮೆಯ ಷಯವಲ್ಲ. ಕನ್ನಡಕ್ಕೆ ಸಮಸ್ಯೆಯಾದರೆ ಹೋರಾಟ ಮಾಡೋಣ. ಅದು ಇದ್ದೇ ಇದೆ. ಅದು ಬೇರೆ. ರಾಜಕುಮಾರ್‌ ಅವರಿಗೆ ಹೋಲಿಕೆ ಬೇಡ. ಅವರ ಆದರ್ಶ ಬೇರೆ, ಇದು ಬೇರೆ. ನಾವೇನು ಕೆಟ್ಟ ಸಿನಿಮಾ ಮಾಡುತ್ತಿಲ್ಲ. ಬಾಲಕೃಷ್ಣ ಅವರ ಚಿತ್ರ, ಮೇಲಾಗಿ ಅದು ಅವರ ನೂರನೆಯ ಚಿತ್ರ. ಅಂತಹ ಚಿತ್ರದಲ್ಲಿ ನಟಿಸುವುದು ಗೌರವ. ಹಾಗಾಗಿ ಆ ಬಗ್ಗೆ ಕೆಟ್ಟ ಭಾವನೆ ಬೇಡ' ಎನ್ನುತ್ತಾರೆ ಅವರು.

ಅಷ್ಟರಲ್ಲಿ ಲೈಟಿಂಗ್‌ ಆಗಿತ್ತು. ಕ್ಯಾಮೆರಾ ಪೂಜೆಗೆ ಸಿದ್ಧತೆಗಳು ನಡೆದಿದ್ದವು. ಅಸಿಸ್ಟಂಟ್‌ ಡೈರೆಕ್ಟರ್‌ ಬಂದು ಶಾಟ್‌ ರೆಡಿ ಎನ್ನುವುದಕ್ಕಿಂತ ಮುನ್ನವೇ, ಶಿವರಾಜಕುಮಾರ್‌ ಅವರು ಎದ್ದು ಚಿತ್ರೀಕರಣಕ್ಕೆ ಹೋದರು.

ಅದು ನಮ್ಮ ಸಿನಿಮಾ!

ಈ ವರ್ಷದ ಹಿಟ್‌ ಚಿತ್ರಗಳ ಪಟ್ಟಿಯಲ್ಲಿ ಮೊದಲಿಗೆ ನಿಲ್ಲುವುದು "ಶಿವಲಿಂಗಗ'. ನೂರು ದಿನ ಪೂರೈಸಿದ ಬೆರಳಣಿಕೆಯ ಚಿತ್ರದಲ್ಲಿ ಅದೂ ಒಂದು. ಏಳೆಂಟು ಕೇಂದ್ರಗಳಲ್ಲಿ 100 ದಿನ, 175 ಕೇಂದ್ರಗಳಲ್ಲಿ 40 ದಿನ ಮತ್ತು 225 ದಿನಗಳಲ್ಲಿ 25 ದಿನ ಪೂರೈಸಿದ ಚಿತ್ರವದು. ಆ ಚಿತ್ರದ ಬಗ್ಗೆ ಶಿವರಾಜಕುಮಾರ್‌ ಅವರಿಗೆ ಬಹಳ ಹೆಮೆುದೆ.

"ತುಂಬಾ ಜನ ನೋಡಿದ ಚಿತ್ರವದು. ಮರ್ಡರ್‌ ಮಿಸ್ಟ್ರಿಗೆ ಹಾರರ್‌ ಎಫೆಕ್ಟ್ ಕೊಟ್ಟಂತಹ ಚಿತ್ರ ಅದು. ಅದು ಶಿವರಾಜಕುಮಾರ್‌ ಅವರ ಚಿತ್ರ ಎನ್ನುವುದಕ್ಕಿಂತ ಜನ, ನಮ್ಮ ಚಿತ್ರ ಅಂತ ನೋಡಿದರು. ಒಬ್ಬ àರೋ ಫಿಲ್ಮ್ ಬೇರೆ. ಜನರ ಚಿತ್‌ ರಮೇರೆ. ಮೂರ್‍ನಾಲ್ಕು ವಾರಗಳ ಕಾಲ ಅದುರೋ ಸಿನಿಮಾ. ಆ ನಂತರ ಅದು ನಮ್ಮ ಸಿನಿಮಾ ಆಗುತ್ತೆ. "ಜನುಮದ ಜೋಡಿ', "ಓಂ', "ನಮ್ಮೂರ ಮಂದಾರ ಹೂವೇ' ಅವೆಲ್ಲಾ ಅದೇ ತರಹದ ಚಿತ್ರಗಳು. "ಶಿವಲಿಂಗ'ದಲ್ಲಿ ಬರೀ ಹೀರೋ ಪಾತ್ರವಷ್ಟೇ ಅಲ್ಲ, ನಾಯಕಿಯ ಪಾತ್ರ ಸಹ ಬಹಳ ಮುಖ್ಯವಾಗಿತ್ತು. ಕೆಲವು ಜನರನ್ನು ರೀಚ್‌ ಆಗೋದು ಕರ್ಮಯಲ್‌ ಚಿತ್ರಗಳು. ಎಲ್ಲಾ ತರಹದ ಜನರನ್ನು ಸಹ ರೀಚ್‌ ಆಗೋದೇ, ನಮ್ಮ ಚಿತ್ರಗಳು. "ಶಿವಲಿಂಗ' ಸಹ ನಮ್ಮ ಚಿತ್ರವಾಗಿತ್ತು ಅಂತ ಖು ಇದೆ' ಎನ್ನುತ್ತಾರೆ ಅವರು.

ಬರಹ: ಚೇತನ್‌ ನಾಡಿಗೇರ್‌; ಚಿತ್ರಗಳು: ಮನು

Back to Top