ಸಂಚಾರಿ ವಿಜಯ್ಗೆ ಕಟೌಟ್ ಭಾಗ್ಯ
Team Udayavani, Nov 14, 2017, 6:41 PM IST
ಸಂಚಾರಿ ವಿಜಯ್ ಚಿತ್ರರಂಗಕ್ಕೆ ಬರುವಾಗ ಗಾಯಕರಾಗಬೇಕೆಂಬ ಆಸೆಯಿಂದ ಬಂದರಂತೆ. ಗಾಯಕರಾಗದೇ ಹೋದಾಗ ಕಾಮಿಡಿ ನಟನಾಗಬೇಕೆಂಬ ಆಸೆ ತುಂಬಾ ಇತ್ತಂತೆ. ಆದರೆ, ಅವರಿಗೆ ಸಿಕ್ಕಿದ ಸಿನಿಮಾಗಳೆಲ್ಲವೂ ಸೀರಿಯಸ್ ಆಗಿದ್ದವು. ಈಗ ಸಂಚಾರಿ ವಿಜಯ್ ಸಿನಿಮಾವೊಂದರ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದಾರೆ. ಅದು “ನನ್ ಮಗಳೇ ಹೀರೋಯಿನ್’.
ಹೌದು, “ನನ್ ಮಗಳೇ ಹೀರೋಯಿನ್’ ಚಿತ್ರದಲ್ಲಿ ಸಂಚಾರಿ ವಿಜಯ್ ನಾಯಕರಾಗಿ ನಟಿಸಿದ್ದಾರೆ. ಇದು ಕಾಮಿಡಿ ಸಿನಿಮಾ. ಕೊನೆಗೂ ಸಂಚಾರಿ ವಿಜಯ್ ಆಸೆಯಂತೆ ಕಾಮಿಡಿ ಸಿನಿಮಾ ಸಿಕ್ಕಿದೆ. ಅಂದಹಾಗೆ, ಇಡೀ ಸಿನಿಮಾ ಕಾಮಿಡಿಯಾಗಿ ಸಾಗಿದರೂ ಅವರ ಪಾತ್ರ ತುಂಬಾ ಗಂಭೀರವಾಗಿದೆಯಂತೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಾಗಿ ವಿಜಯ್ ಕೂಡಾ ಖುಷಿಯಾಗಿದ್ದಾರೆ.
ಸಂಚಾರಿ ವಿಜಯ್ಗೆ “ನನ್ ಮಗಳೇ ಹೀರೋಯಿನ್’ ಚಿತ್ರ ತುಂಬಾ ಸ್ಪೆಷಲ್ ಎಂದರೆ ತಪ್ಪಲ್ಲ. ಮೊದಲನೇಯದಾಗಿ ಇದು ವಿಜಯ್ ಅವರ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಸಹಜವಾಗಿಯೇ ಒಬ್ಬ ನಟನಿಗೆ ಕಮರ್ಷಿಯಲ್ ಸಿನಿಮಾ ಎಂದಾಗ ಭಯ ಮತ್ತು ಖುಷಿ ಎರಡೂ ಇರುತ್ತದೆ. ಆ ಖುಷಿ ಸಂಚಾರಿ ವಿಜಯ್ಗೂ ಇದೆ. ಅದಕ್ಕಿಂತ ಹೆಚ್ಚಾಗಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಂಚಾರಿ ವಿಜಯ್ ಅವರ ಕಟೌಟ್ ಕೂಡಾ ಎದ್ದು ನಿಲ್ಲಲಿದೆ.
ಹೌದು, “ನನ್ ಮಗಳೇ ಹೀರೋಯಿನ್’ ಚಿತ್ರದ ರಿಲೀಸ್ ದಿನ ಸಂಚಾರಿ ವಿಜಯ್ ಅವರ ಕಟೌಟ್ ಥಿಯೇಟರ್ ಮುಂದೆ ತಲೆ ಎತ್ತಲಿದೆ. ವಿತರಕ ಆಟೋ ರಾಜ ಅವರು ಸಂಚಾರಿ ವಿಜಯ್ ಅವರ 54 ಅಡಿಯ ಕಟೌಟ್ ನಿಲ್ಲಿಸಲಿದ್ದಾರೆ. ಹಾಗಾಗಿ, ಸಂಚಾರಿ ವಿಜಯ್ ಅವರ ಮೊದಲ ಕಮರ್ಷಿಯಲ್ ಸಿನಿಮಾ ಅದ್ಧೂರಿಯಾಗಿಯೇ ಬಿಡುಗಡೆಯಾಗಲಿದೆ ಎಂದರೆ ತಪ್ಪಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್