CONNECT WITH US  

ಚತುರನ ಜೊತೆ ಪೂಜಾ

ಮತ್ತೆ ಬಂದ ಸೃಜನ್‌ ಅಕ್ಕ

ದೊಡ್ಡ ಗ್ಯಾಪ್‌ನ ನಂತರ ಪೂಜಾ ಲೋಕೇಶ್‌ ಅವರು "ಟೈಗರ್‌ ಗಲ್ಲಿ' ಚಿತ್ರದ ಮೂಲಕ ಎಂಟ್ರಿಯಾಗಿದ್ದು ಎಲ್ಲರಿಗೂ ಗೊತ್ತಿದೆ. ಆ ಚಿತ್ರದಲ್ಲಿ ಅವರು ಜಡ್ಜ್ ಆಗಿ ನಟಿಸಿದ್ದರು. ಮುಂದೆ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ಹೇಳಿದ್ದ ಪೂಜಾ ಈಗ ಸದ್ದಿಲ್ಲದೇ "ಚತುರ' ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. 

ಹೌದು, ಪೂಜಾ ಲೋಕೇಶ್‌ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಅವರು ಈ ಚಿತ್ರದಲ್ಲಿ ಸಣ್ಣಪುಟ್ಟ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಪೂಜಾಗೆ ಜೋಡಿಯಾಗಿ ಮುನಿ ನಟಿಸುತ್ತಿದ್ದಾರೆ. ಹೆಚ್ಚಾಗಿ ಖಳನಟನಾಗಿ  ಕಾಣಿಸಿಕೊಳ್ಳುತ್ತಿದ್ದ ಮುನಿ ಈ ಚಿತ್ರದಲ್ಲಿ ನಾಯಕ. ಬಹುತೇಕ ಸಿನಿಮಾ ಪೂಜಾ ಹಾಗೂ ಮುನಿ ಸುತ್ತ ಸಾಗಲಿದೆಯಂತೆ.

ಈ ಚಿತ್ರವನ್ನು ಸಾಮ್ರಾಟ್‌ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ "ಗಾಯತ್ರಿ' ಎಂಬ ಹಾರರ್‌ ಸಿನಿಮಾ ಮಾಡಿದ್ದ ಸಾಮ್ರಾಟ್‌ ಈಗ "ಚತುರ' ಮಾಡುತ್ತಿದ್ದಾರೆ. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಹುಡುಗಿಯನ್ನು ಜನ ಹೇಗೆಲ್ಲ ಕಾಣುತ್ತಾರೆ ಎಂಬ ಅಂಶದ ಮೇಲೆ ಈ ಕಥೆ ಸಾಗಲಿದೆ. ಫೆಬ್ರವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 

ಮಂಜು.ಎಸ್‌. ಪಟೇಲ್‌ ಸುಮತಿ ಶ್ರೀನಿವಾಸ್‌ ನಿರ್ಮಿಸುತ್ತಿರುವ ಚಿತ್ರಕ್ಕೆ ವಿನೋದ್‌ ಭಾರತಿ ಛಾಯಾಗ್ರಹಣ, ಅಭಿಷೇಕ್‌ ರಾಯ್‌ ಸಂಗೀತ, ಎಸ್‌. ಸಾಮ್ರಾಟ್‌ ಸಾಹಿತ್ಯ, ದುರ್ಗ ಪಿ.ಎಸ್‌. ಸಂಕಲನವಿದೆ. ಚಿತ್ರದಲ್ಲಿ  ಶೋಭರಾಜ್‌, ಹರೀಶ್‌ ರಾಯ್‌ ಕೋಟೆ ಪ್ರಭಾಕರ್‌, ಪೆಟ್ರೋಲ್‌ ಪ್ರಸನ್ನ, ಕರುಣಾಕರ್‌, ಲಕ್ಷಿ ಸಿದ್ದಯ್ಯ, ವಾಸು, ಮೈಕೋ ನಾಗರಾಜ್‌, ಅನಂತ್‌ ವೇಲು, ಅಪೂರ್ವ, ರಾಣಿ ಮುಂತಾದವರು ತಾರಾಬಳಗವಿದೆ.

Trending videos

Back to Top