ಕದ್ದು ಮುಚ್ಚಿ ಸಿನಿಮಾ ನೋಡಿದ ಹರಿಪ್ರಿಯಾ
Team Udayavani, Feb 3, 2018, 11:04 AM IST
ನಟಿ ಹರಿಪ್ರಿಯಾ ಯಾರಿಗೂ ಗೊತ್ತಾಗದಂತೆ ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಕದ್ದುಮುಚ್ಚಿ ಅವರು ಸಿನಿಮಾ ನೋಡಿದ್ದು, ತೆಲುಗಿನ ಬಾಲಕೃಷ್ಣ ಅಭಿನಯದ “ಜೈಸಿಂಹ’. ಅವರು ಈ ಚಿತ್ರದ ನಾಯಕಿ.
ಹರಿಪ್ರಿಯಾ ಅಭಿಮಾನಿಗಳು ಗುರುತು ಹಿಡಿಯಬಾರದು ಎಂಬ ಕಾರಣದಿಂದ ತಲೆಗೊಂದು ಮಂಕಿ ಕ್ಯಾಪ್ ಧರಿಸಿ, ಮೈತುಂಬಾ ಶಾಲು ಹಾಕಿಕೊಂಡು ಪ್ರೇಕ್ಷಕರ ಜೊತೆಯಲ್ಲಿ ಸಿನಿಮಾ ನೋಡಿದ್ದಾರೆ. ನಂತರ ಫೋಟೋ ಕ್ಲಿಕ್ಕಿಸಿಕೊಂಡು ಟ್ವೀಟ್ ಮಾಡಿದ್ದಾರೆ.