“8 ಎಂಎಂ’ ಪ್ರಚಾರಕ್ಕೆ ಬಿಗ್ಬಾಸ್ ಮನೆ ಕದ ತಟ್ಟಿದ ಜಗ್ಗೇಶ್
Team Udayavani, Nov 4, 2018, 5:44 PM IST
ಜಗ್ಗೇಶ್ ಅಭಿನಯದ “8 ಎಂಎಂ’ ಚಿತ್ರ ಇದೇ ನವೆಂಬರ್ 16ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರಕ್ಕಾಗಿ ನವರಸ ನಾಯಕ ಜಗ್ಗೇಶ್ ಕನ್ನಡದ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಅಲ್ಲದೇ ಇದೇ ವೇಳೆಯಲ್ಲಿ ಜಗ್ಗೇಶ್, ಕಿಚ್ಚ ಸುದೀಪ್ ಅವರನ್ನು ತಬ್ಬಿಕೊಂಡಿರುವ ಫೋಟೋವೊಂದನ್ನು ತಮ್ಮ ಟ್ವೀಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು! ಕಿಚ್ಚ ಸುದೀಪ್ ಹಾಗೂ ನವರಸ ನಾಯಕ ಜಗ್ಗೇಶ್ ಮೊದಲಿಂದಲೂ ತುಂಬಾ ಆತ್ಮೀಯತೆ ಇಂದ ಇದ್ದವರು.
ಹಾಗಾಗಿ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ “ಕನ್ನಡ ಚಿತ್ರರಂಗ ಶ್ರೀಮಂತಗೊಳಿಸುತ್ತಿರುವ ನಲ್ಮೆಯ ಸಹೋದರನ ಅಪ್ಪುಗೆಯಲ್ಲಿ..ಪರಭಾಷಿಕರನ್ನ ಕನ್ನಡ ಚಿತ್ರಕ್ಕೆ ಕರೆಸಿದ ಗಾರುಡಿಗ..#8mm ಚಿತ್ರದ ಪ್ರಚಾರಕ್ಕೆ #bigboss ಮನೆಗೆ ಹೋದಾಗ.. Love you..God bless.. @KicchaSudeep’ ಅಂತ ಬರೆದುಕೊಂಡಿದ್ದಾರೆ.
ಅಂದಹಾಗೆ “ನೀರ್ ದೋಸೆ’ ನಂತರ ನವರಸ ನಾಯಕ ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “8 ಎಂಎಂ’ ಚಿತ್ರ ತಮಿಳಿನ 8 ತೊಟಕಲ್ ಚಿತ್ರದ ಕನ್ನಡ ಅವತರಣಿಕೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಹರಿಕೃಷ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ.
ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್, ಸಲೀಮ್ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್ಲೈನ್ ವೆಂಕಟೇಶ್, ಮಯೂರಿ, ಆದಿಲೋಕೇಶ್ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ.
ಕನ್ನಡ ಚಿತ್ರರಂಗ ಶ್ರೀಮಂತಗೊಳಿಸುತ್ತಿರುವ ನಲ್ಮೆಯ ಸಹೋದರನ ಅಪ್ಪುಗೆಯಲ್ಲಿ..ಪರಭಾಷಿಕರನ್ನ ಕನ್ನಡ ಚಿತ್ರಕ್ಕೆ ಕರೆಸಿದ ಗಾರುಡಿಗ..#8mm
ಚಿತ್ರದ ಪ್ರಚಾರಕ್ಕೆ #bigboss ಮನೆಗೆ ಹೋದಾಗ..
Love you..God bless..@KicchaSudeep pic.twitter.com/ZjwUEkjmTg— ನವರಸನಾಯಕ ಜಗ್ಗೇಶ್ (@Jaggesh2) November 3, 2018
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ