CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಿಡಿಎಗೆ ಆರ್ಥಿಕ ಸಂಕಷ್ಟ

ಬೆಂಗಳೂರು: ಹತ್ತಾರು ಬಡಾವಣೆ ರಚಿಸಿ ಲಕ್ಷಾಂತರ ನಿವೇಶನ ಮಾರಾಟ ಮಾಡುವುದರ ಜತೆಗೆ ಸಾವಿರಾರು ಪ್ಲ್ರಾಟ್‌ ನಿರ್ಮಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೌದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆದಾಯಕ್ಕಿಂತ ವೆಚ್ಚವೇ ಅಧಿಕವಾಗಿದ್ದು, ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ 558.60 ಕೋಟಿ ರೂ.ಗಳನ್ನು ಬ್ಯಾಂಕ್‌ಗಳಿಂದ ಹಾಗೂ ಹುಡ್ಕೊ ಸಂಸ್ಥೆಯಲ್ಲಿ ಸಾಲ ಪಡೆದಿದೆ.

ಬಿಡಿಎಗೆ ರಾಜ್ಯ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನಗಳ ಹಂಚಿಕೆದಾರರಿಂದ ಪ್ರಾಧಿಕಾರಕ್ಕೆ ಸಂದಾಯ ವಾಗಬೇಕಾದ ಮೊತ್ತ ಬಂದಿಲ್ಲ. ಪ್ಲ್ರಾಟ್‌ಗಳ ಮಾರಾಟದಿಂದ ನಿರೀಕ್ಷಿತ ಆದಾಯವೂ ಬರುತ್ತಿಲ್ಲ. ಹೀಗಾಗಿ, ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ಖುದ್ದು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ವಿಧಾನಪರಿಷತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ. 

ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ, ಪ್ಲ್ರಾಟ್‌ಗಳ ಹಂಚಿಕೆ ಹಾಗೂ ಮೂಲೆ ನಿವೇಶನಗಳ ಹರಾಜಿನಿಂದ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 2011-12 ನೇ ಸಾಲಿನಲ್ಲಿ ಸಂಸ್ಥೆಯ ಆದಾಯ 646.97 ಕೋಟಿ ರೂ. ಆದರೆ ವೆಚ್ಚ 721.54 ಕೋಟಿ ರೂ. ಆಗಿತ್ತು.

ಅದೇ ರೀತಿ 2012-13 ರಲ್ಲಿ 749.17 ಕೋಟಿ ರೂ. ಆದಾಯ ಬಂದರೆ 1029.04 ಕೋಟಿ ರೂ. ವೆಚ್ಚವಾಗಿತ್ತು. 2013-14 ರಲ್ಲಿ 985.46 ಕೋಟಿ ರೂ. ಆದಾಯ ಬಂದರೆ 1108.03 ಕೋಟಿ ರೂ. ವೆಚ್ಚವಾಗಿತ್ತು. 2014-15 ರಲ್ಲಿ 842.78 ಕೋಟಿ ರೂ. ಆದಾಯ ಬಂದರೆ 1059.04 ಕೋಟಿ ರೂ. ವೆಚ್ಚವಾಗಿದೆ. 2015-16 ನೇ ಸಾಲಿನಲ್ಲಿ 1838.78 ಕೋಟಿ ರೂ. ಆದಾಯ ಬಂದರೆ ಅಷ್ಠೆà ಮೊತ್ತ ವೆಚ್ಚವಾಗಿದೆ ಎಂದು ವಿಧಾನಪರಿಷತ್‌ನಲ್ಲಿ ಬಿಜೆಪಿಯ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಅವರಿಗೆ ನೀಡಿರುವ ಲಿಖೀತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.

ಬಿಡಿಎ ವತಿಯಿಂದ ಸಾರ್ವಜನಿಕರ ಹಿತಕ್ಕಾಗಿ ಕೆಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಇದರಿಂದಾಗಿ ಬಿಡಿಎ ಆದಾಯಕ್ಕಿಂತ ವೆಚ್ಚ ಅಧಿಕಾವಾಗಿದೆ. ಅದನ್ನು ಸರಿತೂಗಿಸಲು ಸಾಲ ಪಡೆಯಲಾಗಿದೆ  ಎಂದು ಅವರು ಹೇಳಿದ್ದಾರೆ.

ಜೇಷ್ಠತಾ ಪಟ್ಟಿ ಪ್ರಕಟ
ಬೆಂಗಳೂರು:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನಗಳಿಗೆ ಅರ್ಜಿ ಸಲ್ಲಿಸಿ ನಿವೇಶನ ದೊರೆಯದ ಫ‌ಲಾನುಭವಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ  ಶನಿವಾರ ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ವೆಬ್‌ಸೈಟ್‌ನಲ್ಲಿ ಹೆಸರು ಪ್ರಕಟವಾಗಿರುವ ನಿವೇಶನ ಆಕಾಂಕ್ಷಿಗಳು, ಆಕ್ಷೇಪಣೆಗಳಿದ್ದರೆ ಏ.18ರೊಳಗೆ ಸಲ್ಲಿಸಬಹುದಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ನಿವೇಶನ ಹಂಚಿಕೆಗಾಗಿ ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಜೇಷ್ಠಾತಾ ಪಟ್ಟಿ ಪ್ರಕಟಿಸಿದೆ.  ಆಕ್ಷೇಪಣೆ ಸಲ್ಲಿಕೆಯಾದ ನಂತರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಏ.18ರ ನಂತರ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಬಿಡಿಎ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ ಡಿಡಿಡಿ.ಚಿಛಚಚಿಚnಜಚlಟ್ಟಛಿ.ಟ್ಟಜ ಇಲ್ಲಿಗೆ ಕಳುಹಿಸಬಹುದು.

Back to Top