ನಿಷೇಧದ ನಡುವೆಯೇ ಪ್ಲಾಸ್ಟಿಕ್‌ ವ್ಯವಹಾರ ರಾಜಾರೋಷ


Team Udayavani, Jul 23, 2018, 10:14 AM IST

blore-1.jpg

ಆಯ್ದ ಪ್ಲಾಸ್ಟಿಕ್‌ ಉತ್ಪನ್ನಗಳ ನಿಷೇಧದಿಂದ ರಾಜ್ಯದಲ್ಲಿ ಉತ್ಪಾದನೆ ಸ್ಥಗಿತಗೊಂಡು ಬಳಕೆ ಪ್ರಮಾಣದಲ್ಲೂ ಇಳಿಕೆಯಾಗಿದೆ. ಆದರೆ ಹೊರ ರಾಜ್ಯಗಳಿಂದ ಅಕ್ರಮವಾಗಿ ರಾಜ್ಯಕ್ಕೆ ಪ್ಲಾಸ್ಟಿಕ್‌ ಕೈಚೀಲ ಪೂರೈಕೆಯಾಗುತ್ತಿದ್ದು, ಮಾಲಿನ್ಯ ಮುಂದುವರಿದಿದೆ. ಸೂಕ್ತ ಮೇಲ್ವಿಚಾರಣೆ ಇಲ್ಲದೇ ಅಕ್ರಮವಾಗಿ ಪ್ಲಾಸ್ಟಿಕ್‌ ಪೂರೈಕೆಯಾಗುತ್ತಿರುವುದು ರಾಜ್ಯದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪಾದನಾ ಉದ್ಯಮಗಳನ್ನು ಸ್ಥಗಿತಗೊಳಿಸಿದ ಉದ್ಯಮಿಗಳ ಬೇಸರಕ್ಕೆ ಕಾರಣವಾಗಿದೆ

ಬೆಂಗಳೂರು: ಮಹಾರಾಷ್ಟ್ರದಲ್ಲಿ ತಿಂಗಳ ಹಿಂದೆ ಪ್ಲಾಸ್ಟಿಕ್‌ ನಿಷೇಧ ಜಾರಿಗೆ ಬಂದಿದೆ. ಉತ್ತರಪ್ರದೇಶದಲ್ಲೂ ನಿಷೇಧಕ್ಕೆ ಚಿಂತನೆ ನಡೆದಿದೆ. ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ ಜಾರಿಗೆ ಬಂದು 2 ವರ್ಷವಾಗಿದೆ. ಕಾನೂನು ಜಾರಿಗೆ ತರುವಲ್ಲಿ ಮುಂದಿದ್ದ ಕರ್ನಾಟಕ ಅನುಷ್ಠಾನದಲ್ಲಿ ಮಾತ್ರ ಹಿಂದೆ ಬಿದ್ದಿದೆ. ರಾಜ್ಯದಲ್ಲಿ ಕೈಚೀಲ ಸೇರಿದಂತೆ ಆಯ್ದ ಪ್ಲಾಸ್ಟಿಕ್‌ ಉತ್ಪನ್ನಗಳ ಉತ್ಪಾದನೆ, ಬಳಕೆ ನಿಷೇಧ ವಾಗಿದ್ದರೂ ಇಂದಿಗೂ ನಿತ್ಯ 15 ಟನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್‌ ಕೈಚೀಲ, ಇತರೆ ಉತ್ಪನ್ನಗಳು ರಾಜ್ಯಾದ್ಯಂತ ಬಳಕೆಯಾಗುತ್ತಿವೆ! ಪ್ಲಾಸ್ಟಿಕ್‌ ಮಾತ್ರವಲ್ಲ, ನಿಷೇಧಿತ ಫ್ಲೆಕ್ಸ್‌ ಕೂಡ ನೆರೆಯ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ.

ನಿಷೇಧಿತ ಪ್ಲಾಸ್ಟಿಕ್‌ ಕೈಚೀಲ ನೇರವಾಗಿ ಖರೀದಿಗೆ ಲಭ್ಯವಿಲ್ಲದಿದ್ದರೂ ಪರೋಕ್ಷ ವಹಿವಾಟು ಮುಂದುವರಿದಿದೆ. ಆದರೆ ನಿಷೇಧಕ್ಕೂ ಮೊದಲು ಬಳಕೆಯಾಗುತ್ತಿದ್ದ ಪ್ರಮಾಣಕ್ಕೆ ಹೋಲಿಸಿದರೆ ಪ್ಲಾಸ್ಟಿಕ್‌ ಕೈಚೀಲ ಬಳಕೆಯಲ್ಲಿ ಮೂರನೇ ಎರಡರಷ್ಟು ಇಳಿಕೆ ಆಗಿರುವುದು ಸಮಾಧಾನಕರ ಸಂಗತಿ.
 
ಕೈಚೀಲ ಸೇರಿದಂತೆ ಆಯ್ದ ಬಗೆಯ ಪ್ಲಾಸ್ಟಿಕ್‌ ಉತ್ಪಾದನೆ, ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ತ್ಯಾಜ್ಯ ಸಮಸ್ಯೆಗೆ ಕಾರಣವಾಗುವ ಜತೆಗೆ ಪರಿಸರಕ್ಕೂ ಮಾರಕ ಎಂಬ ಕಾರಣಕ್ಕೆ ಸರ್ಕಾರ ನಿಷೇಧ ಹೇರಿದೆ. ಇದರಿಂದ ಅನಿವಾರ್ಯವಾಗಿ ಪ್ಲಾಸ್ಟಿಕ್‌ ಉತ್ಪಾದನೆ ಸ್ಥಗಿತಗೊಳಿಸಬೇಕಾಯಿತು.

ಸಾವಿರ ಸಣ್ಣ ಉದ್ಯಮ ಬಂದ್‌: ನಿಷೇಧಕ್ಕೂ ಮೊದಲು ರಾಜ್ಯದಲ್ಲಿ ಸುಮಾರು 3,500 ಉದ್ಯಮಗಳು ಪ್ಲಾಸ್ಟಿಕ್‌ ಕೈಚೀಲ ಸೇರಿದಂತೆ ಇತರೆ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದ್ದವು. ಸುಮಾರು 75,000ಕ್ಕೂ ಹೆಚ್ಚು ಮಂದಿ ಕಾರ್ಮಿಕರಿದ್ದರು. ಆಯ್ದ ಪ್ಲಾಸ್ಟಿಕ್‌ ನಿಷೇಧದಿಂದಾಗಿ ಈ ಉದ್ಯಮಗಳನ್ನು ದಿಢೀರ್‌ ಸ್ಥಗಿತಗೊಳಿಸಬೇಕಾಯಿತು. ಆರ್ಥಿಕವಾಗಿ ಸದೃಢವಾಗಿರುವ ಕೆಲ ಉದ್ಯಮಗಳು ಪ್ಲಾಸ್ಟಿಕ್‌ನ ಪರ್ಯಾಯ ಉತ್ಪನ್ನ, ಇಲ್ಲವೇ ನಿಷೇಧವಿಲ್ಲದ ಪ್ಲಾಸ್ಟಿಕ್‌ ತಯಾರಿಕೆಗೆ ರೂಪಾಂತರಗೊಂಡವು. ಆದರೆ ಸಾವಿರಕ್ಕೂ ಹೆಚ್ಚು ಉದ್ಯಮಗಳಿಗೆ ಬೀಗ ಮುದ್ರೆ ಬಿತ್ತು ಎಂದು ಕರ್ನಾಟಕ ರಾಜ್ಯ ಪ್ಲಾಸ್ಟಿಕ್‌ ಉತ್ಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ ಎನ್‌. ಸಾಗರ್‌ ಹೇಳುತ್ತಾರೆ.

ತೆರಿಗೆ ಆದಾಯ ಇಳಿಕೆ ಪ್ಲಾಸ್ಟಿಕ್‌ ಉದ್ಯಮ ವಲಯದಿಂದ ನಾನಾ ರೀತಿಯಲ್ಲಿ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸುಮಾರು 400 ಕೋಟಿ ರೂ. ತೆರಿಗೆ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಪ್ಲಾಸ್ಟಿಕ್‌ ನಿಷೇಧದಿಂದ ಉದ್ಯಮವೇ ಸ್ಥಗಿತಗೊಂಡಿದ್ದರಿಂದ ತೆರಿಗೆ ಪ್ರಮಾಣ ಈಗ 100 ಕೋಟಿ ರೂ. ಕೂಡ ಇಲ್ಲ ಎನ್ನುತ್ತದೆ ಪ್ಲಾಸ್ಟಿಕ್‌ ಉದ್ಯಮ ವಲಯ.

ಅಕ್ರಮವಾಗಿ ಪೂರೈಕೆ ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿಲ್ಲ. ಹಾಗಾಗಿ ಅನ್ಯ ರಾಜ್ಯಗಳಿಂದ ಭಾರಿ ಪ್ರಮಾಣದ ಪ್ಲಾಸ್ಟಿಕ್‌ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ, ತಮಿಳುನಾಡು, ಆಂಧ್ರದ ಗಡಿ ಭಾಗಗಳಲ್ಲಿ ಪ್ಲಾಸ್ಟಿಕ್‌ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಅಲ್ಲಿಂದ ಅಕ್ರಮವಾಗಿ ರಾಜ್ಯಕ್ಕೆ ಪೂರೈಕೆಯಾಗುತ್ತಿವೆ. ಹೊಸೂರು ಬಳಿಯ ಉದ್ಯಮಗಳಿಂದ ಬೆಂಗಳೂರಿಗೆ ನಿತ್ಯ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳು ಪೂರೈಕೆಯಾಗುತ್ತಿವೆ ಎನ್ನಲಾಗಿದೆ.

ನಸುಕಿನಲ್ಲಿ ಪ್ಲಾಸ್ಟಿಕ್‌ ಕೈಚೀಲ, ಇತರೆ ವಸ್ತುಗಳನ್ನು ವಾಹನಗಳಲ್ಲಿ ನಗರಕ್ಕೆ ತಂದು ಬೆಳಕು ಹರಿಯುವ ಮೊದಲೇ
ಮಳಿಗೆದಾರರು, ವ್ಯಾಪಾರಿಗಳಿಗೆ ತಲುಪಿಸಿ ವಾಪಸಾಗುತ್ತಾರೆ. ಹೂವು, ಹಣ್ಣು, ತರಕಾರಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ರಸ್ತೆಬದಿ ತಿಂಡಿ, ಊಟ ಮಾರಾಟಗಾರರು, ಸಣ್ಣಪುಟ್ಟ ಹೋಟೆಲ್‌ದಾರರು, ಮಳಿಗೆದಾರರು ಪ್ರಮುಖ ಖರೀದಿದಾರರೆನಿಸಿದ್ದಾರೆ. ಬೆಂಗಳೂರಿನ ಸುತ್ತಮುತ್ತಲ ಪ್ರದೇಶದ ವ್ಯಾಪಾರಿಗಳು ಸಹ ನಿಯಮಿತವಾಗಿ ಕೈಚೀಲಗಳನ್ನು ಖರೀದಿಸಿ ಬಳಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚೆಕ್‌ಪೋಸ್ಟ್‌ ರದ್ದಾದ ಕಾರಣ ನಿಯಂತ್ರಣವಿಲ್ಲ ಜಿಎಸ್‌ಟಿ ಜಾರಿ ಬಳಿಕ ದೇಶಾದ್ಯಂತ ನಾನಾ ಹಂತದ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ರಾಜ್ಯಗಳ ಗಡಿ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ವ್ಯವಸ್ಥೆ ರದ್ದಾಗಿದೆ. ಇದರಿಂದ ನಿಷೇಧಿತ ಪ್ಲಾಸ್ಟಿಕ್‌ ನಾನಾ ಮಾರ್ಗಗಳ ಮೂಲಕ ರಾಜ್ಯ ಪ್ರವೇಶಿಸಿದರೂ ನಿಗಾ ವಹಿಸುವವರಿಲ್ಲ ಎಂಬಂತಾಗಿದೆ. ಇದು ಅಕ್ರಮವಾಗಿ ಪ್ಲಾಸ್ಟಿಕ್‌ ಸಾಗಣೆಗೆ ದಾರಿ ಮಾಡಿಕೊಟ್ಟಂತಾಗಿದೆ. 

ತಂಬಾಕು, ಶಾಂಪೂ ಸ್ಯಾಷೆ ನಿಷೇಧಿಸಬೇಕು ಪ್ಲಾಸ್ಟಿಕ್‌ ಕೈಚೀಲದಷ್ಟೇ ತಂಬಾಕು, ಅಡಿಕೆ, ಸಿಗರೇಟು, ಶಾಂಪೂ ಸ್ಯಾಷೆ, ಚಾಕೊಲೆಟ್‌, ಚ್ಯೂಯಿಂಗ್‌ ಗಮ್‌, ತಿಂಡಿ- ತಿನಿಸಿನ ಪ್ಲಾಸ್ಟಿಕ್‌ ಹೊದಿಕೆಗಳು ಅಪಾಯಕಾರಿಯಾಗಿದ್ದು, ಅದನ್ನು ನಿಷೇಧಿಸಬೇಕು. ಇವುಗಳ ಸಂಗ್ರಹಣೆ, ವಿಲೇವಾರಿ ಸವಾಲೆನಿಸಿದ್ದು, ಎಲ್ಲೆಂದರೆ ಹರಡಿ ಆಯಾ ಪ್ರದೇಶದ ಸೌಂದರ್ಯವೂ ಹಾಳಾಗುತ್ತದೆ. ಇದನ್ನು ಆದ್ಯತೆ ಮೇರೆಗೆ ನಿಷೇಧಿಸಬೇಕು ಎಂದು ಪ್ಲಾಸ್ಟಿಕ್‌ ಉದ್ಯಮ ವಲಯ ಆಗ್ರಹಿಸಿದೆ.

ನಿಷೇಧಿತ ಫ್ಲೆಕ್ಸ್‌  ಕೂಡ ಪೂರೈಕೆ ರಾಜ್ಯದಲ್ಲಿ ಫ್ಲೆಕ್ಸ್‌ ನಿಷೇಧವಿದ್ದು, ಬಟ್ಟೆ ಬ್ಯಾನರ್‌ಗಳನ್ನಷ್ಟೇ ಬಳಸಬೇಕು. ಆದರೆ ಚೆನ್ನೈ ನಗರದಿಂದ ಫ್ಲೆಕ್ಸ್‌ ಸಾಮಗ್ರಿ ನಿರಂತರವಾಗಿ ಬೆಂಗಳೂರು ಸೇರಿದಂತೆ ಇತರೆ ಪ್ರದೇಶಗಳಿಗೆ ಪೂರೈಕೆಯಾಗುತ್ತಿದೆ. ಫ್ಲೆಕ್ಸ್‌ಗಳ ವಿಲೇವಾರಿಯೂ ತಲೆನೋವಾಗಿದ್ದು, ಚರಂಡಿ, ಕಾಲುವೆ ಸೇರಿದರೆ ಮಳೆ ನೀರು ಹರಿವಿಗೂ ಅಡ್ಡಿಯಾಗುತ್ತದೆ. ಫ್ಲೆಕ್ಸ್‌ಗಳನ್ನು ಸುಡುವುದರಿಂದ ತೀವ್ರ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತಿದ್ದು, ಬಹಳಷ್ಟು ಕಡೆ ಸುಡಲಾಗುತ್ತಿದೆ. ಇಷ್ಟಾದರೂ ಫ್ಲೆಕ್ಸ್‌ ಅಳವಡಿಸುವವರು, ಮುದ್ರಿಸುವವರ ಮೇಲೆ ಯಾವುದೇ ಕ್ರಮವಿಲ್ಲ ಎಂದು ಕೈಗಾರಿಕೋದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ. 

ದೇಶಾದ್ಯಂತ ನಿಷೇಧವಾಗಲಿ ದೇಶಾದ್ಯಂತ ನಿಷೇಧವಾಗಲಿ ಪ್ಲಾಸ್ಟಿಕ್‌ ಪರಿಸರಕ್ಕೆ ಮಾರಕ ಎನ್ನುವುದಾದರೆ ದೇಶಾದ್ಯಂತ ನಿಷೇಧವಾಗಲಿ. ಬದಲಿಗೆ ಒಂದು ರಾಜ್ಯ ನಿಷೇಧಿಸಿ ಮತ್ತೂಂದು ರಾಜ್ಯ ಅವಕಾಶ ನೀಡುವುದು ಸರಿಯಲ್ಲ. ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧದಿಂದಾಗಿ ಸಾವಿರಾರು ಉದ್ಯಮಗಳು ಬಂದ್‌ ಆಗಿವು. ಆದರೆ ಈಗಲೂ ಕೈಚೀಲ ಸೇರಿ ಇತರೆ ನಿಷೇಧಿತ ಪ್ಲಾಸ್ಟಿಕ್‌ ಅಕ್ರಮವಾಗಿ ಪೂರೈಕೆಯಾಗುತ್ತಿದೆ. ಇದರಿಂದ ಮಾಲಿನ್ಯವೂ ಮುಂದುವರಿದಿದ್ದು, ಇನ್ನೊಂದೆಡೆ ರಾಜ್ಯದ ಉದ್ಯಮಗಳಿಗೆ
ಹೊಡೆತ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ಪ್ಲಾಸ್ಟಿಕ್‌ ಉತ್ಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ ಎನ್‌. ಸಾಗರ್‌ ತಿಳಿಸಿದರು. ಪ್ಲಾಸ್ಟಿಕ್‌ನಿಂದ ಅನುಕೂಲದ ಜತೆಗೆ ತೊಂದರೆಯೂ ಇದೆ. ಸಮಸ್ಯೆಗೆ ನಿಷೇಧವೊಂದೇ ಪರಿಹಾರವಲ್ಲ. ನಿಷೇಧ ಅನಿವಾರ್ಯವಾದರೆ ಪರ್ಯಾಯಗಳನ್ನು ಕಲ್ಪಿಸಿ ಬಳಕೆಗೆ ಕಾಲಾವಕಾಶ ನೀಡಿ ಜಾರಿಗೊಳಿಸಬೇಕು. ಸುಧಾರಿತ ತಂತ್ರಜ್ಞಾನ ಬಳಸಿ
ವೈಜ್ಞಾನಿಕ ಸಂಸ್ಕರಣೆಗೆ ಅವಕಾಶವಿದೆ. ಪರಿಸರ ಸ್ನೇಹಿ ಕ್ರಮವನ್ನು ಉದ್ಯಮ ವಲಯ ಸ್ವಾಗತಿಸಲಿದ್ದು, ದೇಶಾದ್ಯಂತ ಏಕರೂಪದ ವ್ಯವಸ್ಥೆ ಜಾರಿಗೊಳಿಸುವುದು ಸೂಕ್ತ. ರಾಜ್ಯದಲ್ಲಿ ನಿಷೇಧ ಹೇರಿದ ಮೇಲೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸಿ ನಿಯಂತ್ರಿಸುವುದು ಸಹ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ನಿಷೇಧ ಅನುಷ್ಠಾನ ಹೊಣೆ ಯಾರದು?  
ರಾಜ್ಯಮಟ್ಟದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಪ್ರಧಾನ ಕಾರ್ಯದರ್ಶಿ, ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆ, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು, ಅನುಷ್ಠಾನ ಅಧಿಕಾರಿಗಳಾಗಿದ್ದಾರೆ.

ಅವರೆಲ್ಲರಿಗೂ ಈಗಾಗಲೇ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ, ಸಾಗಣೆ, ಸಂಗ್ರಹ, ಮಾರಾಟ ಮತ್ತು ಬಳಕೆ ವಿರುದ್ಧ ಕಾರ್ಯಾಚರಣೆ ನಡೆಸುವುದು ಇವರ ಜವಾಬ್ದಾರಿ. ಜೂನ್‌ ತಿಂಗಳಲ್ಲೇ ಸುಮಾರು 1,200 ಕೆಜಿಯಷ್ಟು ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರೂ ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ, ಮಹಜರು ಮಾಡಿ, ಕೇಸು ದಾಖಲಿಸಲು ಜಿಲ್ಲಾಧಿಕಾರಿಗೆ ಮಾತ್ರ ಅಧಿಕಾರ ಇರುತ್ತದೆ. 

ಯಾವೆಲ್ಲಾ ನಿಷೇಧ?
ಕ್ಯಾರಿಬ್ಯಾಗ್‌, ಲೋಟ, ತಟ್ಟೆ, ಸ್ಟ್ರಾಗಳು, ಬ್ಯಾನರ್‌ಗಳು, ಫ್ಲೆಕ್ಸ್‌, ಚಮಚಗಳು, ಊಟದ ಟೇಬಲ್‌ಗ‌ಳ ಮೇಲೆ
ಹಾಸುವ ಮತ್ತು ಹಣ್ಣು-ಹಂಪಲುಗಳ ಮೇಲೆ ಸುತ್ತುವ ತೆಳುವಾದ ಪ್ಲಾಸ್ಟಿಕ್‌ ಹಾಳೆಗಳು, ಬಾವುಟಗಳು, ಬಂಟಿಂಗ್ಸ್‌,
ಥರ್ಮೋಕೋಲ್‌ ತಟ್ಟೆ-ಲೋಟ 

ವಿನಾಯ್ತಿ ಯಾವುದಕ್ಕೆ?
ಹಾಲಿನ ಪ್ಯಾಕೆಟ್‌, ತೋಟಗಾರಿಕೆ ಮತ್ತು ಸಸಿಗಳಿಗೆ ಬಳಸಲಾಗುವ ಪ್ಲಾಸ್ಟಿಕ್‌, ಪ್ಯಾಕೇಜಿಂಗ್‌ನ ಅವಿಭಾಜ್ಯ ಅಂಗವಾಗಿರುವ ಕಡೆಗಳಲ್ಲಿ, ರಫ್ತು ಆಧಾರಿತ ಘಟಕ (ಉದಾ: ಇಲ್ಲಿರುವ ಪ್ಲಾಸ್ಟಿಕ್‌ ತಯಾರಿಕೆ ಘಟಕಗಳಿಗೆ ಹೊರದೇಶಗಳಿಂದ ಬೇಡಿಕೆ ಬಂದರೆ)

ಪರ್ಯಾಯ ಏನಿದೆ?
ಪರ್ಯಾಯವಾಗಿ ಸದ್ಯಕ್ಕೆ ಇರುವುದು ಅಡಿಕೆ ಹಾಳೆ, ಬಟ್ಟೆ ಚೀಲ, ಸೆಣಬಿನ ಚೀಲ, ಪಿಂಗಾಣಿ ಬಟ್ಟಲು, ಚಮಚ. ಆದರೆ, ಇವುಗಳು ಪ್ಲಾಸ್ಟಿಕ್‌ ಕೊರತೆಯನ್ನು ನೀಗಿಸುವಷ್ಟರ ಮಟ್ಟಿಗೆ ಜನರಿಗೆ ಹತ್ತಿರ ಆಗಿಲ್ಲ. ಸೀಮಿತ ಲಭ್ಯತೆಯಿಂದ ಈಗಲೂ ದುಬಾರಿಯಾಗಿ
ಪರಿಣಮಿಸಿವೆ.  

ಭಯ ಬರಬೇಕು
ಅಧಿಸೂಚನೆ ಉಲ್ಲಂ ಸಿದವರಿಗೆ ಜೈಲುವಾಸದವರೆಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಬೇಕು. ಸೆರೆವಾಸ ಶಿಕ್ಷೆ ವಿಧಿಸಿದ
ಒಂದಾದರೂ ಘಟನೆ ನಡೆದರೆ, ಜನರಲ್ಲಿ ಈ ಸಂಬಂಧದ ಕಾಯ್ದೆ ಬಗ್ಗೆ ಭಯ ಉಂಟಾಗುತ್ತದೆ. ಅದು ಪ್ಲಾಸ್ಟಿಕ್‌ ನಿಯಂತ್ರಣಕ್ಕೂ ಅನುಕೂಲ ಆಗುತ್ತದೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ)ಯ ಬಸವರಾಜ್‌ ಅಭಿಪ್ರಾಯಪಡುತ್ತಾರೆ.

 ● ಎಂ.ಕೀರ್ತಿಪ್ರಸಾದ್‌/ವಿಜಯಕುಮಾರ ಚಂದರಗಿ 

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.