115 ನೂತನ ಸೈನಿಕರ ಅಟ್ಟೆಸ್ಟೇಷನ್ ಪರೇಡ್
Team Udayavani, Oct 11, 2018, 12:12 PM IST
ಬೆಂಗಳೂರು: ನಗರದಲ್ಲಿರುವ ಭಾರತೀಯ ಸೇನೆಯ ಎಸಿಎಸ್ ತರಬೇತಿ ಕೇಂದ್ರ ಮತ್ತು ಕಾಲೇಜಿನಲ್ಲಿ ತರಬೇತಿ ಪಡೆದ 115 ಸೈನಿಕರನ್ನು ಅಟ್ಟೆಸ್ಟೇಷನ್ ಪರೇಡ್ ಮೂಲಕ ಸೈನಿಕ ಪ್ರಮಾಣ ವಚನ ಬೋಧನೆ ನೀಡಲಾಯಿತು.
ಸೈನ್ಯದ ಪುರಾತನ ಸಂಪ್ರದಾಯದಂತೆ ತರಬೇತಿ ಪಡೆದ ಎಲ್ಲರಿಗೂ ಸೈನ್ಯಕ್ಕೆ ಸೇರಿಕೊಳ್ಳುವ ಆರಂಭದಲ್ಲಿ ಪ್ರಮಾಣ ವಚನ ಬೋಧನೆ, ರಾಷ್ಟ್ರ ರಕ್ಷಣೆಯ ಸಂಕಲ್ಪ ನೀಡುವ ಜತೆಗೆ ಜಾತಿ, ಧರ್ಮ, ಪಂಥ, ಪಂಗಡದ ತಾರತಮ್ಯ ಇಲ್ಲದೇ ನಡೆದುಕೊಳ್ಳುವ ನೀತಿ ಪಾಠ ಕಲಿಸಲಾಗುತ್ತದೆ. ಅದರಂತೆ ಹೊಸದಾಗಿ ಸೇರ್ಪಡೆಗೊಂಡು ತರಬೇತಿ ಪಡೆದ 115 ಸೈನಿಕರಿಗೆ ಪ್ರಮಾಣವಚನ ಬೋಧನೆ ನಡೆಯಿತು. ಎಸಿಎಸ್ ತರಬೇತಿ ಕೇಂದ್ರದ ಡೆಪ್ಯೂಟಿ ಕಮಾಂಡೆಂಟ್ ಕೊಲನಲ್ ಬಿಜು ಪೌಲ್ ಅವರು ಪರೇಡ್ ಪರಿವೀಕ್ಷಣೆ ನಡೆಸಿದರು. ಯುವ ಸೈನಿಕರು ಹೇಗಿರಬೇಕು ಎಂಬ ಸಲಹೆ, ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ