ಖೇಲೋ ಇಂಡಿಯಾದಲ್ಲಿ ಚಿನ್ನ ಬಾಚಿದ ಬೆಳಗಾವಿ ಬಾಲೆಯರು

Team Udayavani, Jan 15, 2019, 11:46 AM IST

15-january-22.jpg

ಬೆಳಗಾವಿ: ಬೆಳಗಾವಿಯ ಮೂವರು ಕುವರಿಯರು ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ.

ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ದಾನೇಶ್ವರಿ ಅಶೋಕ ಠಕ್ಕನವರ 100 ಮೀ. ಹಾಗೂ 200 ಮೀಟರ್‌ ಓಟದಲ್ಲಿ ಎರಡು ಚಿನ್ನ, ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಅಕ್ಷತಾ ಕಮತಿ ವೇಟ್‌ ಲಿಫ್ಟಿಂಗ್ ನಲ್ಲಿ ಚಿನ್ನ ಹಾಗೂ ಕುಸ್ತಿಯಲ್ಲಿ ತಾಲೂಕಿನ ಕಿಣಯೇ ಗ್ರಾಮದ ಪೂಜಾ ದಳವಿ ಚಿನ್ನ ಗಳಿಸಿದ್ದಾರೆ.

ರೈತ ಕುಟುಂಬದ ಕುಡಿ: ನದಿ ಇಂಗಳಗಾಂವದ ಕೃಷಿ ಕುಟುಂಬದಲ್ಲಿ ಜನಿಸಿದ ದಾನೇಶ್ವರಿ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮುಗಿಸಿ ಎಂಟನೇ ತರಗತಿಯಿಂದ ಬೆಂಗಳೂರಿನ ವಿದ್ಯಾನಗರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿ ಓದುತ್ತಿದ್ದಾಳೆ. ಮುಂಚೆಯಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ದಾನೇಶ್ವರಿ ಈಗ ರಾಷ್ಟ್ರಮಟ್ಟದಲ್ಲಿಯೇ ಉತ್ತಮ ಸ್ಥಾನ ಪಡೆದುಕೊಂಡಿದ್ದಾಳೆ.

21 ವರ್ಷದ ಒಳಗಿನ ವಿಭಾಗದಲ್ಲಿ ದಾನೇಶ್ವರಿ 11.99 ಸೆಕೆಂಡ್‌ನ‌ಲ್ಲಿ 100 ಮೀ. ಹಾಗೂ 24.58 ಸೆಕೆಂಡ್‌ನ‌ಲ್ಲಿ 200 ಮೀ. ಓಡಿ ಚಿನ್ನ ಗಳಿಸಿದ್ದಾಳೆ. ಈಕೆಗೆ ಅಶೋಕ ಮಂಟೂರ ತರಬೇತಿ ನೀಡಿದ್ದಾರೆ. ಸದ್ಯ ಬಿ.ಕಾಂ. ಮೊದಲನೇ ವರ್ಷದಲ್ಲಿರುವ ದಾನೇಶ್ವರಿ ಎರಡು ಚಿನ್ನದ ಪದಕ ಪಡೆದಿದ್ದು ಹೆಮ್ಮೆಯ ವಿಷಯ. ತಂದೆ ಅಶೋಕ, ತಾಯಿ ಸುಧಾ ರೈತರಾಗಿದ್ದು, ಮಗಳ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ.

ಹೆಗಲ ಮೇಲೆ ಕುಟುಂಬದ ಭಾರ: ಹಲಗಾ ಗ್ರಾಮದ ಅಕ್ಷತಾ ಕಮತಿ ಬೆಂಗಳೂರಿನ ಕೆಂಗೇರಿಯಲ್ಲಿರುವ ನ್ಪೋರ್ಟ್ಸ್ ಅಥಾರಿಟಿ ಆಫ್‌ ಇಂಡಿಯಾ (ಸಾಯ್‌)ದಲ್ಲಿ ವೇಟ್‌ ಲಿಫ್ಟಿಂಗ್ ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ. 71 ಕೆ.ಜಿ. ವಿಭಾಗದಲ್ಲಿ ಚಿನ್ನ ಗಳಿಸಿದ್ದು, 103 ಕೆ.ಜಿ. ಹಾಗೂ 73 ಕೆ.ಜಿಯ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಳು. ಅಕ್ಷತಾಗೆ ವೀರಪಾಲ್‌ ಕೌರ್‌, ಶಾಮಲಾ ಶೆಟ್ಟಿ ಹಾಗೂ ಸದಾನಂದ ತರಬೇತಿ ನೀಡಿದ್ದಾರೆ. ಮೊದಲು ಶಾರದಾ ಪ್ರೌಢಶಾಲೆಯಲ್ಲಿ ತರಬೇತಿ ಆರಂಭಿಸಿ ಈಗ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ಕುಸ್ತಿಯಲ್ಲಿ ಮಿಂಚಿದ ಪೂಜಾ: ಖೇಲೋ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ ಬೆನ್ನಲ್ಲೇ ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಪೂಜಾ ದಳವಿ 21 ವಯೋಮಿತಿ ಒಳಗಿನ ವಿಭಾಗದ 68 ಕೆ.ಜಿ.ಯಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ತಂದೆ ರಾಜು ಕೃಷಿಕರಾಗಿದ್ದು, ಮಗಳನ್ನು ಕ್ರೀಡೆಯಲ್ಲಿಯೇ ಸಾಧನೆ ಮಾಡಿಸಬೇಕೆಂಬ ಪಣ ತೊಟ್ಟಿದ್ದಾರೆ.

ಬೆಳಗಾವಿಯ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿಯೇ ತರಬೇತಿ ಪಡೆಯುತ್ತಿರುವ ಈಕೆ ಸದ್ಯ ಆರ್‌ಪಿಡಿ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾಳೆ. ಪೂಜಾಗೆ ಕೋಚ್‌ಗಳಾದ ನಾಗರಾಜ ಎ.ಆರ್‌. ಕೆ ತರಬೇತಿ ನೀಡಿದ್ದಾರೆ. ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಇನ್ನೋರ್ವ ಯುವತಿ ಲಕ್ಷ್ಮೀ ರೇಡೆಕರ ಕೂಡ ಕುಸ್ತಿಯಲ್ಲಿ ಕಂಚು ಪಡೆದುಕೊಂಡಿದ್ದಾಳೆ. ಮೂಡಬಿದರೆಯ ಆಳ್ವಾಸ್‌ನಲ್ಲಿ ಓದುತ್ತಿರುವ ಲಕ್ಷ್ಮೀ ಮೂಲತಃ ಬೆಳಗಾವಿಯವರು ಎನ್ನುವುದೇ ಹೆಮ್ಮೆಯ ವಿಷಯ. ಕುಸ್ತಿಯಲ್ಲಿ ಕರ್ನಾಟಕದಿಂದ 17 ಜನ ಆಯ್ಕೆಯಾಗಿದ್ದು, ಇದರಲ್ಲಿ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಡ ಕೃಷಿ ಕುಟುಂಬದಲ್ಲೇ ಬೆಳೆದ ಅಕ್ಷತಾ
ಖೇಲೋ ಇಂಡಿಯಾದಲ್ಲಿ 21 ವಯೋಮಿತಿ ಒಳಗಿನ ವೇಟ್‌ ಲಿಫ್ಟಿಂಗ್ ನಲ್ಲಿ ಹಲಗಾ ಗ್ರಾಮದ ಅಕ್ಷತಾ ಕಮತಿ ಚಿನ್ನ ಗೆದ್ದಿದ್ದಾಳೆ. ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಅಕ್ಷತಾ ಆರ್ಥಿಕವಾಗಿ ಹಿಂದುಳಿದಿದ್ದು, ತಂದೆ ಬಸವಂತ ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ಹಾಗೂ ಕಟ್ಟಡ ಸೆಂಟ್ರಿಂಗ್‌ ಕೆಲಸ ಮಾಡುತ್ತಾರೆ. ಇದರಲ್ಲಿ ಬರುವ ಆದಾಯದಲ್ಲಿಯೇ ಮಗಳನ್ನು ಓದಿಸಿದ್ದಾರೆ. ಈಕೆಯ ಇನ್ನಿಬ್ಬರು ಸಹೋದರರು ಓದುತ್ತಿದ್ದಾರೆ. 10ನೆ ತರಗತಿ ಮುಗಿದ ಬಳಿಕ ಎರಡು ವರ್ಷ ಶಿಕ್ಷಣ ನಿಲ್ಲಿಸಿದ್ದ ಅಕ್ಷತಾ ಈಗ ದ್ವಿತೀಯ ಪಿಯುಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿದ್ದಾಳೆ. ಜತೆಗೆ ಆರ್ಥಿಕ ಸಹಾಯವೂ ಈಕೆಗೆ ಅವಶ್ಯವಿದೆ ಎನ್ನುತ್ತಾರೆ ಈಕೆಯ ಕೋಚ್‌ ಶಾಮಲಾಶೆಟ್ಟಿ.

ಕುಸ್ತಿಯಲ್ಲಿ ಕರ್ನಾಟಕದಿಂದ 17 ಕುಸ್ತಿ ಆಟಗಾರರು ಖೇಲೋ ಇಂಡಿಯಾಕ್ಕೆ ಸ್ಥಾನ
ಪಡೆದಿದ್ದರು. ಇದರಲ್ಲಿ ಇಬ್ಬರು ಯುವತಿಯರು, ಇಬ್ಬರು ಯುವಕರು ಪದಕ ಗಳಿಸಿದ್ದಾರೆ. ಇಬ್ಬರೂ ಯುವತಿಯರು ಬೆಳಗಾವಿಯವರು ಎಂಬುದೇ ಹೆಮ್ಮೆಯ ವಿಷಯ. ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.
ನಾಗರಾಜ ಎ.ಆರ್‌.ಕೆ.,
ಕುಸ್ತಿ ಕೋಚ್ 

ನನ್ನ ತಂದೆ ಅಲ್ಪಸ್ವಲ್ಪ ಜಮೀನಿನಲ್ಲಿಯೇ ಕೃಷಿ ಮಾಡಿ ನಮ್ಮನ್ನು ಬೆಳೆಸಿದ್ದಾರೆ. ನನ್ನ ಗೆಲುವಿನ ಹಿಂದೆ ತಂದೆಯ ಶ್ರಮ ಬಹಳಷ್ಟಿದೆ. ಇಬ್ಬರು ಸಹೋದರರ ಪೈಕಿ ಒಬ್ಬ ದ್ವಿತೀಯ ಪಿಯು ಮುಗಿಸಿದ್ದು, ಇನ್ನೊಬ್ಬ ಶಾಲೆಗೆ ಹೋಗುತ್ತಾನೆ. ನ್ನನ ಹಾಗೂ ಸಹೋದರರ ಶಿಕ್ಷಣ, ಮನೆ ನಡೆಸಿಕೊಂಡು ಹೋಗುವುದು ಕಷ್ಟಕರ. ಆರ್ಥಿಕವಾಗಿ ಹಿಂದುಳಿದಿರುವ ನನ್ನ ಕುಟುಂಬಕ್ಕೆ ಸಹಾಯದ ಅಗತ್ಯವಿದೆ.
ಅಕ್ಷತಾ ಕಮತಿ,
ಚಿನ್ನದ ಹುಡುಗಿ

ಭೈರೋಬಾ ಕಾಂಬಳೆ 

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.