CONNECT WITH US  

ಬೀದರ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಬೀದರ: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆ.31ರಂದು ಹತ್ತನೇ ಘಟಿಕೋತ್ಸವ ನಡೆಯಲ್ಲಿದ್ದು, ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೂಡ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ. ಎಂವಿಎಸ್‌ಸಿ ವಿಭಾಗದಲ್ಲಿ ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ರಮೇಶ ಕಂಕನವಾಡಿ, ಸೂಕ್ಷ್ಮಾಣುಜೀವಿ ಶಾಸ್ತ್ರ (3), ನಿಖೀತ್‌ ಎಂ.ಎಸ್‌. ಪಶುವೈದ್ಯಕೀಯ ಶಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ(3), ಶ್ರೀಕಾಂತ ಪ್ರಾಣಿ ಅನುವಂಶೀಯತೆ ಮತ್ತು ಸಂವರ್ಧನೆ ಶಾಸ್ತ್ರ(1), ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ಹರೀಶ ಕೆ.ಎಂ. ಪಶುವೈದ್ಯಕೀಯ ಸ್ತ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ (2), ಯೋಗೇಶಗೌಡ ಎಸ್‌. ಪಶುವೈದ್ಯಕೀಯ ಔಷಧ ಮತ್ತು ವಿಷ ಶಾಸ್ತ್ರ (01), ರೂಪೇಶ ಎಂ.ಪಿ.ಪಶುವೈದ್ಯಕೀಯ ಪರೋಪಜೀವಿ ಶಾಸ್ತ್ರ(1), ಸೈಯಿದಾ ಸುಮಯ್ನಾ ಪಶುವೈದ್ಯಕೀಯ ರೋಗ ಶಾಸ್ತ್ರ (1), ಅರ್ಪಿತಾ ಆರ್‌. ಪ್ರಾಣಿ ಆಹಾರ ಶಾಸ್ತ್ರ (1), ಅಬ್ದುಲ್‌ವುತೀನ್‌ ವಲ್ಲಿಭಾಯಿ ಜಾನುವಾರು ಉತ್ಪಾದನೆ ಮತ್ತು ನಿರ್ವಹಣೆ(1), ಪ್ರಿಯಾಂಕ ವಿ.ಎಸ್‌. ಜಾನುವಾರು ಉತ್ಪನ್ನಗಳ ತಂತ್ರಜ್ಞಾನ
(1) ಮತ್ತು ಕಿರಣ ಎಂ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ವಿಸ್ತರಣಾ ಶಿಕ್ಷಣದಲ್ಲಿ ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ.

ಬೋಧನೆ: ವಿಶ್ವವಿದ್ಯಾಲಯ ಮೂರು ವಿಷಯಗಳಲ್ಲಿ (ಪಶುವೈದ್ಯಕೀಯ, ಮೀನುಗಾರಿಕೆ ಮತ್ತು ಹೈನು ವಿಜ್ಞಾನ) ರಾಜ್ಯಾದ್ಯಂತ ವ್ಯಾಪಿಸಿರುವ ಏಳು ಆವರಣಗಳ ಎಂಟು ಮಹಾವಿದ್ಯಾಲಯಗಳಲ್ಲಿ ಬೋಧನೆ ಮಾಡಲಾಗುತ್ತಿದೆ. ಐದು ಪಶುವೈದ್ಯಕೀಯ ಮಹಾವಿದ್ಯಾಲಯಗಳು ಬೀದರ, ಬೆಂಗಳೂರು, ಶಿವಮೊಗ್ಗ, ಹಾಸನ ಮತ್ತು ಗದಗ ಜಿಲ್ಲೆಗಲ್ಲಿ
ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರು ಮತ್ತು ಕಲಬುರಗಿಯ-ಮಹಾಗಾಂವದಲ್ಲಿ ಹೈನು ವಿಜ್ಞಾನ ಮಹಾವಿದ್ಯಾಲಯಗಳು ಇವೆ. ಮಂಗಳೂರಿನಲ್ಲಿ ಮೀನುಗಾರಿಕೆ ಮಹಾವಿದ್ಯಾಲಯ ಇದ್ದು, ಐದು ಪಶುಸಂಗೋಪನಾ ಪಾಲಿಟೆಕ್ನಿಕ್‌ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 

ವಿಸ್ತರಣೆ: ವಿಶ್ವವಿದ್ಯಾಲಯದ ಬೀದರ, ಬೆಂಗಳೂರು, ಶಿವಮೊಗ್ಗ ಮತ್ತು ಹಾಸನದ ಆವರಣಗಳಲ್ಲಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಾಪಿಸಿದ್ದು, ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ರೈತ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶ್ವವಿದ್ಯಾಲಯದ ಅಡಿ ಬರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು-ಕೃಷಿ ವಿಜ್ಞಾನ ಕೇಂದ್ರ-ದಕ್ಷಿಣ ಕನ್ನಡ, ಮಂಗಳೂರು, ರೈತ ಸಮುದಾಯದ ಕೃಷಿ ತಂತ್ರಜ್ಞಾನದ ಅವಶ್ಯಕತೆ ಈಡೇರಿಸುತ್ತಿದೆ ಎಂದು ಕುಲಪತಿಗಳು ಮಾಹಿತಿ ನೀಡಿದ್ದಾರೆ.


Trending videos

Back to Top