ಅಂತ್ಯ ಕಾಲಕ್ಕೆ ಎಲ್ಲ ತೊರೆದು ಹೋಗಲೇಬೇಕು


Team Udayavani, Dec 8, 2018, 12:05 PM IST

bid-4.jpg

ಬಸವಕಲ್ಯಾಣ: ದೇವನು ಸಮಾಜದಲ್ಲಿ ನಾಗರಿಕತೆ ಕಟ್ಟಿ ಬೆಳೆಸಲು ಅವಶ್ಯಕ ಇರುವ ಎಲ್ಲ ಸೌಕರ್ಯಗಳನ್ನು ನಿರ್ಮಿಸಿದ್ದು, ಅವುಗಳನ್ನು ಅನುಭವಿಸಲು ಕರಾರು ಮಾಡಿ ನಮ್ಮನ್ನು ಭೂಮಿ ಮೇಲೆ ಸೃಷ್ಟಿಸಿದ್ದಾನೆ. ಅದನ್ನು ಮೀರಿ ಒಂದು ನಿಮಿಷ ಕೂಡ ಜೀವಂತ ಇರಲು ಸಾಧ್ಯವಿಲ್ಲ ಎಂದು ಮಂಗಳೂರಿನ ಖ್ಯಾತ ಪ್ರವಚನಕಾರ ಮಹಮ್ಮದ್‌ ಕುಂಞ ಹೇಳಿದರು.

ನಗರದ ಸಭಾ ಭವನದಲ್ಲಿ ಜಮಾತೆ ಇಸ್ಲಾಂ ಹಿಂದ್‌ ಸಂಘಟನೆಯಿಂದ ಪ್ರವಾದಿ ಮುಹಮ್ಮದ್‌ (ಸ) ಸಂದೇಶ ಕುರಿತು ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ “ಮಾನವ ಜೀವನದ ವಾಸ್ತವಿಕತೆ’ ವಿಷಯ ಕುರಿತ ಅವರು ಮಾತನಾಡಿದರು. ದೇವರು ಒಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾನೆ. ಮತ್ತು ದೇವರನ್ನು ನಿರಾಕರಿಸುವ ಜನರು ಬಹಳ ಸಂಖ್ಯೆಯಲ್ಲಿದ್ದಾರೆ. ಆದರೆ ಮರವಣವನ್ನು ನಿರಾಕರಿಸುವವರು ಈ ಮಣ್ಣಿನಲ್ಲಿ ಯಾರೂ ಇಲ್ಲ ಎಂದು ಹೇಳಿದರು.

ಸಮಯ ಮುಗಿದಮೇಲೆ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು. ನಾವು ಜೀವಿತ ಅವಧಿಯಲ್ಲಿ ಮಾಡಿರುವ ಕರ್ಮಗಳು ಮಾತ್ರ ನಮ್ಮೊಂದಿಗೆ ಪರಲೋಕಕ್ಕೆ ಬರುತ್ತವೆ. ದೇವನ ನ್ಯಾಯಲಯದಲ್ಲಿ ಅವು ವಿಚಾರಣೆಗೆ ಒಳಪಡುತ್ತವೆ ಎಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು ಎಂದರು.

ಸಂಸ್ಕೃತಿ ಚಿಂತಕ ಹಾಗೂ ಸಾಹಿತಿ ರಂಜಾನ್‌ ದರ್ಗಾ ಮಾತನಾಡಿ, ಜಗತ್ತಿನಲ್ಲಿ ಏಕದೇವೋಪಾಸನೆ ಧರ್ಮ ಯಾವುದಾದರೂ ಇದ್ದರೆ, ಅದು ಇಸ್ಲಾಂ ಧರ್ಮ ಮತ್ತು ಬಸವ ಧರ್ಮವಾಗಿದೆ. ಮುಹಮ್ಮದ್‌ ಪೈಗಂಬರ್‌ ಹಾಗೂ ಬಸವಣ್ಣನವರು ಬಡವರ ಪರ ಹೋರಾಡಿದವರು. ಯಾರು ತಪ್ಪು ದಾರಿಗೆ ಹೋಗುತ್ತಾರೊ, ಅವರಿಗೆ ತಿಳಿ ಹೇಳುವ ಕಾರ್ಯವನ್ನು ಬಸವಣ್ಣನವರು ಮಾಡಿದ್ದರು ಎಂದು ಹೇಳಿದರು.

ಶಾಸಕ ಬಿ.ನಾರಾಯಣರಾವ್‌ ಹಾಗೂ ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ ಮಾತನಾಡಿದರು. ಅಸ್ಲಾಂ ಜನಾಬ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಜರತ್‌ ರಾಜ್‌ ಬಾಗ್‌ ಸವಾರ ದರ್ಗಾದ ಖ್ವಾಜಿ ಜಿಯಾಉಲ್‌ ಹಸನ್‌ ಜಾಗಿರ್‌ದಾರ್‌, ಮಾಜಿ ಶಾಸಕ ಎಂ.ಜಿ. ಮುಳೆ, ನಗರಸಭೆ ಅಧ್ಯಕ್ಷ ಮೀರ ಅಜರ್‌ ಅಲಿ ನವರಂಗ, ಸಿಎಂಸಿ ಸಹಾಯಕ ಆಯುಕ್ತ ಸುರೇಶ ಬಬಲಾದ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶರಣಬಸಪ್ಪಾ ಬಿರಾದಾರ್‌, ಅರ್ಜುನ ಕನಕ, ನೀಲಕಂಠ ರಾಠೊಡ, ಪ್ರಭುಲಿಂಗಯ್ನಾ ಟಂಕಸಾಲಿ ಮಠ, ವೀರಶೆಟ್ಟಿ ಮಲಶೆಟ್ಟೆ, ಚಂದ್ರಕಾಂತ ಮೇತ್ರೆ, ರಾಜು ಮಂಠಾಳೆ, ಮಿಲಿಂದ ಗೂರುಜಿ ಹಾಗೂ ಮತ್ತಿತರರು ಇದ್ದರು. ಅಸ್ಲಾಂ ಜನಾಬ್‌ ಸ್ವಾಗತಿಸಿದರು. ಇಸುಫೋದ್ದಿನ್‌ ನಿಲಂಗೆ ವಂದಿಸಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.