ಕರ್ನಾಟಕ ಒನ್‌ ಕೇಂದ್ರ ಕಾರ್ಯಾರಂಭ


Team Udayavani, Feb 27, 2018, 3:12 PM IST

vij-2.jpg

ವಿಜಯಪುರ: ಬೆಂಗಳೂರಿನ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ಇ-ಆಡಳಿತ ಇಲಾಖೆ ನೇತೃತ್ವದಲ್ಲಿ ವಿಜಯಪುರ ಮಹಾನಗರ ಪಾಲಿಕೆ ಕಚೇರಿಯಲ್ಲಿ ಕರ್ನಾಟಕ ಒನ್‌ ಕೇಂದ್ರಕ್ಕೆ ಮೇಯರ್‌ ಸಂಗೀತಾ ಪೋಳ ಚಾಲನೆ ನೀಡಿದರು.

ಎಲ್ಲ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ರಾಜ್ಯ ಕರ್ನಾಟಕ ಒನ್‌ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರದಲ್ಲಿ ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ಪಡೆಯಬಹುದಾಗಿದೆ ಎಂದು ಮೇಯರ್‌ ಸಂಗೀತಾ ಹೇಳಿದರು.

ಈ ಕೇಂದ್ರವು ಬೆಳಗ್ಗೆ 8ರಿಂದ ಸಂಜೆ 7ರವರೆಗೆ ವರ್ಷದ ಎಲ್ಲ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದ್ದು ರಾಷ್ಟ್ರೀಯ ಹಬ್ಬಗಳು ಹಾಗೂ ಚುನಾವಣೆ ಸಂದರ್ಭಗಳನ್ನು ಹೊರತುಪಡಿಸಿ ಸಮಗ್ರ ನಾಗರಿಕ ಸೇವೆ ನೀಡಲು ಈ ಕೇಂದ್ರ ಸನ್ನದ್ಧವಾಗಿರುತ್ತವೆ. ಕೇಂದ್ರಗಳಲ್ಲಿ ಲಭ್ಯವಿರುವ ಕೆಲ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಗೆ ನಾಗರಿಕರು ಸೇವಾ ಶುಲ್ಕ ಪಾವತಿಸಬೇಕಾಗಿಲ್ಲ ಎಂದು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಶಿವಕುಮಾರ ಮಾಹಿತಿ ನೀಡಿದರು.

ಕರ್ನಾಟಕ ಒನ್‌ ಕೇಂದ್ರಗಳಲ್ಲಿ ವಿದ್ಯುತ್‌ ಬಿಲ್‌ಗ‌ಳ ಪಾವತಿ, ಹೆಚ್ಚುವರಿ ಭದ್ರತಾ ಠೇವಣಿ ಪಾವತಿ, ನೀರಿನ ಬಿಲ್‌ ಪಾವತಿ,
ಆಸ್ತಿ ತೆರಿಗೆ ಪಾವತಿ, ಸ್ವಯಂ ಆಸ್ತಿ ತೆರಿಗೆ ಪೂರ್ವ ಭರ್ತಿ ಮಾಡಿದ ಅರ್ಜಿಗಳನ್ನು ಮುದ್ರಿಸುವುದು, ಬಿಎಸ್‌ಎನ್‌ಎಲ್‌ ಲ್ಯಾಂಡ್‌ ಲೈನ್‌ ಬಿಲ್‌ ಪಾವತಿ, ಮೊಬೈಲ್‌ ಬಿಲ್‌ ಪಾವತಿ, ಪೊಲೀಸ್‌ ವೇರಿಫಿಕೇಶನ್‌/ಕ್ಲೀಯರೆನ್ಸ್‌, ಪ್ರಮಾಣ ಪತ್ರಕ್ಕಾಗಿ ಶುಲ್ಕ ಪಾವತಿ, ಧ್ವನಿವರ್ಧಕ ವ್ಯವಸ್ಥೆ ಅಳವಡಿಕೆ ಶುಲ್ಕ ಪಾವತಿ, ವಾಹನಗಳ ವಿಚಾರಣಾ ವರದಿಗಾಗಿ ಶುಲ್ಕ ಪಾವತಿ, ಪಿಯುಸಿ ಉತ್ತರ ಪತ್ರಿಕೆ ಫೋಟೋಕಾಫಿ ಪ್ರತಿ, ಮರು ಎಣಿಕೆ ಅರ್ಜಿ, ಮರು ಮೌಲ್ಯಮಾಪನಕ್ಕಾಗಿ ಅರ್ಜಿ, ಪಿಯುಸಿ ಫಲಿತಾಂಶ, ಆಧಾರ್‌, ಪಡಿತರ ಚೀಟಿ, ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ನಕಲಿಗಾಗಿ ಅರ್ಜಿ, ಮರು ಎಣಿಕೆ, ಮೌಲ್ಯಮಾಪನ ಅರ್ಜಿ ಸೇರಿದಂತೆ ಇತರೆ ಸರ್ಕಾರಿ ಸೇವೆಗಳನ್ನು ಈ ಕೇಂದ್ರದಿಂದ ಪಡೆಯಬಹುದು ಎಂದು ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ವಿವರಿಸಿದರು.

ಇದಲ್ಲದೇ ಕೆಲವು ಖಾಸಗಿ ಸೇವೆಗಳನ್ನೂ ಇಲ್ಲಿ ಪಡೆಯಲು ಅವಕಾಶ ನೀಡಿದ್ದು, ದೂರವಾಣಿ ಲ್ಯಾಂಡ್‌ಲೈನ್‌ ಬಿಲ್‌, ಏರ್‌
ಟೆಲ್‌, ವೋಡಾಫೋನ್‌ ಮೊಬೈಲ್‌ ಬಿಲ್‌, ಎಕ್ಸೈಡ್‌ ಲೈಫ್‌ ಇನ್ಸೂರೆನ್ಸ್‌, ಜೀವ ವಿಮಾ ಕಂತು ಪಾವತಿ, ನಮಸ್ತೆ ಮೇಡಿಯಾ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ ನೋಂದಣಿ, ಐಡಿಯಾ ಮೊಬೈಲ್‌ ಬಿಲ್ಲ ಪಾವತಿ ಸಹ ಇದರಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ವಿಜಯಪುರ ಸೇರಿದಂತೆ ರಾಜ್ಯದ 18 ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಈ ಸೇವಾ ಕೇಂದ್ರ ತೆರೆಯಲಾಗಿದೆ. ವಿಜಯಪುರದ ಜನಲಗರದಲ್ಲಿರುವ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಈ ಕೇಂದ್ರ ತೆರೆಯಲಾಗಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಉಪ ಮೇಯರ್‌ ರಾಜೇಶ ದೇವಗಿರಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಅಬ್ದುಲ್‌ರಜಾಕ್‌ ಹೊರ್ತಿ, ಸಜ್ಜಾದೆ ಪೀರಾ ಮುಶ್ರೀಫ್‌ ಸೇರಿದಂತೆ ಪಾಲಿಕೆ ಇತರೆ ಸದಸ್ಯರು ಇದ್ದರು.

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.