ಚಳಿಗೆ ಗಡಗಡ-ಗುಮ್ಮಟ ಆವರಿಸಿದ ಮಂಜು

Team Udayavani, Dec 20, 2018, 12:57 PM IST

vij-2.jpg

ವಿಜಯಪುರ: ಗುಮ್ಮಟ ನಗರಿ ಬುಧವಾರ ಅಕ್ಷರಶಃ ನಡುಗಿದೆ. ಪ್ರಸಕ್ತ ವರ್ಷದ ಅತ್ಯಂತ ಕನಿಷ್ಠ ತಾಪಮಾನದ ಚಳಿ ಜೊತೆಗೆ ಅಧಿಕ ಪ್ರಮಾಣದಲ್ಲಿ ಮಂಜು ಮುಸುಕಿದ ಕಾರಣ ಇಡೀ ದಿನ ವಿಜಯಪುರ ಘಡಘಡ ನಡುಗಿದೆ.

ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಅಧಿಕ ಚಳಿ ಆವರಿಸಿದ್ದು, ಬುಧವಾರವಂತೂ ಕಳೆದ ಮೂರು ವರ್ಷಗಳಲ್ಲೇ ಪ್ರಸಕ್ತ ವರ್ಷ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಡಿ. 18ರಂದು 13 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದ ತಾಪಮಾನ, ಡಿ. 19ರಂದು 9.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ನಸುನಿಂದಲೇ ಅತ್ಯಧಿಕ ಮಂಜು ಆವರಿಸಿದ ಕಾರಣ ಇಡಿ ದಿನ ವಿಜಯಪುರದ ಬಹುತೇಕ ಭಾಗದಲ್ಲಿ ಸೂರ್ಯ ದರ್ಶನವೇ ಇಲ್ಲವಾಗಿತ್ತು.

ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಕೊಂಚ ಬಿಸಿ ತಾಗಿಸುವ ತಾಪ ನೀಡಿದರೂ ಸೂರ್ಯ ಮಾತ್ರ ಬಹುತೇಕ ಮಾಯವೇ ಆಗಿದ್ದ. ಹತ್ತು ವರ್ಷದಿಂದ ಇಂಥ ಮಂಜು ಹಾಗೂ ಚಳಿ ಕಂಡಿರಲಿಲ್ಲ. ಈ ವರ್ಷ ಇಂಥ ಚಳಿ ಹೆಚ್ಚಿಗೆ ಬಿದ್ದಿರುವುದು ನಮ್ಮ ಬಾಲ್ಯದ ಸಂದರ್ಭವನ್ನು ನೆನಪು ಮಾಡಿದೆ. ಮಂಜು ಹೆಚ್ಚಿಗೆ ಬೀಳುವ ಕಾರಣ ಮಳೆ ಕೊರತೆಯ ಮಧ್ಯೆಯೂ ಬೆಳೆದು ನಿಂತ ಬೆಳೆಗಳು ಉತ್ತಮವಾಗಿ ಹೂ ಬಿಟ್ಟು, ಕಾಳು ಕಟ್ಟಲು ಸಹಕಾರಿ ಆಗುತ್ತದೆ ಎನ್ನುತ್ತಾರೆ ಬಸನಗೌಡ ಬಿರಾದಾರ.

ವಿಶ್ವದ ಅಚ್ಚರಿ ಎನಿಸಿರುವ ಐತಿಹಾಸಿಕ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಬಹುಮಹಡಿ ಆಧುನಿಕ
ಕಟ್ಟಡಗಳೆಲ್ಲ ಭಾರಿ ಪ್ರಮಾಣದ ಮಂಜು ಅವರಿಸಿ, ಸಂಪೂರ್ಣ ಮಂಜಿನಲ್ಲೇ ಮುಳುಗಿದ್ದರಿಂದ ಮಧ್ಯಾಹ್ನದವರೆಗೂ ಚಳಿಗೆ ನಡುಗುವಂತಾಗಿದ್ದವು. ನಿತ್ಯವೂ ಸೂರ್ಯೋದಯಕ್ಕೆ ಮುನ್ನವೇ ಗೋಲಗುಮ್ಮಟ ಆವರಣಕ್ಕೆ ವಾಯು ವಿಹಾರಕ್ಕೆ ಬರುತ್ತಿದ್ದ ಸಾರ್ವಜನಿಕರು ಬುಧವಾರ ಕಡಿಮೆ ತಾಪಮಾನ ಹಾಗೂ ಚಳಿ ಅಧಿಕ ಇದ್ದ ಕಾರಣ ಬೆಳಗ್ಗೆ 9ಕ್ಕೆ ಮನೆಯಿಂದ ಹೊರಬಂದರೂ ಮಂಜಿನಿಂದ ಆವರಿಸಿದ್ದ ಮೋಡದ ಹೊದಿಕೆ ಹೊದ್ದಿದ್ದ ಗೋಲಗುಮ್ಮಟ ಕಾಣೆಯಾದ ಅಪರೂಪದ ದೃಶ್ಯ ಸೃಷ್ಟಿಯಾಗಿತ್ತು.

ಭಾರತದ ಆಗ್ನೇಯ ಭಾಗದ ಸಮುದ್ರದ ಭಾಗದಲ್ಲಿ ವಾಯುಭಾರ ಕುಸಿತವಾಗಿ ವೇಗ ಪಡೆದ ಚಂಡಮಾರುತ ಹಾಗೂ ಪಶ್ಚಿಮದಿಂದ ಬೀಸುವ ಗಾಳಿಯ ಪರಿಣಾಮ ತಾಪಮಾನ ಕನಿಷ್ಠ ಮಟ್ಟ ತಲುಪಲು ಕಾರಣವಾಗಿದೆ. ಇದುವೇ ಕನಿಷ್ಠ ತಾಪಮಾನ ಹಾಗೂ ಗರಿಷ್ಠ ಮಂಜು ಆವರಿಸಿಕೊಳ್ಳಲು ಕಾರಣ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಇನ್ನೂ ಒಂದೆರಡು ದಿನ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಜಯಪುರ-ಹಿಟ್ನಳ್ಳಿ ಫಾರ್ಮ್ನ ಹವಾಮಾನ ವಿಭಾಗದ ತಜ್ಞರಾದ ವೆಂಕಟೇಶ್‌ ವಿವರಿಸುತ್ತಾರೆ. 

ಇನ್ನು ಇದೇ ಕೇಂದ್ರದ ಹವಾಮಾನ ತಾಂತ್ರಿಕ ಅಧಿಕಾರಿ ಡಾ| ಶಂಕರ ಕುಲಕರ್ಣಿ ಅವರ ಪ್ರಕಾರ ಕಳೆದ ಮೂರ್ನಾಲ್ಕು
ವರ್ಷಗಳಿಂದ ಕಡಿಮೆ ಮಳೆಯಾಗಿದ್ದು, ಪ್ರಸಕ್ತ ವರ್ಷವೂ ಅತ್ಯಂತ ಕಡಿಮೆ ಮಳೆಯಾಗಿದೆ. ಇದರಿಂದ ಕಪ್ಪು ಮಣ್ಣಿನ
ಈ ಪ್ರದೇಶದಲ್ಲಿ ತೇವಾಂಶ ಪ್ರಮಾಣ ಕಡಿಮೆಯಗುವ ಕಾರಣ ಇಂಥ ವಾತಾವಣರ ಸೃಷ್ಟಿಯಾಗುತ್ತದೆ.

ಟಾಪ್ ನ್ಯೂಸ್

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

Karnataka ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Jharkhand 32 crore discovery case: Two arrested

Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.