1 ದೇಹ 2 ತಲೆ ಇರುವ ಹುಡುಗಿ ಫೋಟೊ ವೈರಲ್
Team Udayavani, Jul 13, 2017, 4:23 AM IST
ಜಾಲತಾಣಗಳಲ್ಲಿ ಸೆಲ್ಫಿಯೊಂದು ಹರಿದಾಡುತ್ತಿದೆ. ನೋಡಿದ ಕೂಡಲೇ ಇದು ತಮಾಷೆಯಾಗಿ ಕಂಡರೂ ಬಳಿಕ ಇದು ಭಯಾನಕವಾಗಿ ಕಾಣುವುದು ಸುಳ್ಳಲ್ಲ. ಫೋಟೊದಲ್ಲಿ 1 ದೇಹ 2 ತಲೆ ಇರುವ ಹುಡುಗಿ ನಿಂತಿರುವುದು ಕಾಣುತ್ತದೆ.
ಈ ಚಿತ್ರ ಮೊದಲಿಗೆ ಜಾಲತಾಣಗಳಲ್ಲಿ ಹರಿದಾಡಿದಾಗ ಜನರೆಲ್ಲ ಇದು ಫೋಟೊಶಾಪ್ ಮೂಲಕ ತಿದ್ದಿರುವ ಚಿತ್ರ ಎಂದೇ ಅಂದಾಜಿಸಿದರು. ಆದರೆ ಬಳಿಕವೇ ಸೆಲ್ಫಿ ತೆಗೆದ ವ್ಯಕ್ತಿ ಜುದ್ ಜಾಸ್ಪರ್ ಈ ಸೆಲ್ಫಿ ಹಿಂದಿನ ಮರ್ಮವನ್ನು ಬಹಿರಂಗಪಡಿಸಿದರು. “ತಮ್ಮ ಫೋನಿನಲ್ಲಿ ಪನೋರಮಾ ರೀತಿಯ ವೈಡ್ ಸೆಲ್ಫಿ ಇದೆ. ಸೆಲ್ಫಿ ತೆಗೆಯುವಾಗ ನನ್ನ ಗರ್ಲ್ಫ್ರೆಂಡ್ ಸೀನಿದಳು. ಫೋಟೊ ಈ ರೀತಿ ಬಂದಿತು’ ಎಂದಿದ್ದಾರೆ.