ಅತಿ ಕಡಿಮೆದರಕ್ಕೆ ಮದ್ಯ ದೊರಕುವತಾಣವಾಗಿ ಸ್ಕಾಟ್ಲೆಂಡ್
Team Udayavani, Nov 16, 2017, 4:23 AM IST
ಮದ್ಯಪ್ರಿಯರು ವಿದೇಶ ಪ್ರಯಾಣ ಮಾಡುವುದಾರೆ ಸ್ಕಾಟ್ಲೆಂಡ್ಗೇ ಹೋಗಬಹುದೋ ಏನೋ? ಅದು ಸುಂದರವಾದ ದೇಶ ಅಂತ ಅಷ್ಟೇ ಅಲ್ಲ, ನಿಮಗೆ ಅತಿ ಕಡಿಮೆ ಬೆಲೆಯಲ್ಲಿ ಮದ್ಯ ದೊರಕುವ ದೇಶ ಕೂಡ. ಜಗತ್ತಿನಲ್ಲೇ ಅತಿ ಕಡಿಮೆ ಬೆಲೆಯಲ್ಲಿ ಮದ್ಯ ದೊರಕುವ ದೇಶವಾಗಿ ಸದ್ಯದಲ್ಲೇ ಸ್ಕಾಟ್ಲೆಂಡ್ ಮಾರ್ಪಾಡಾಗಲಿದೆ.
ಜನರು ಕಡಿಮೆ ಬೆಲೆಗೆ ಸಿಗುವ ಕಳಪೆ ಮದ್ಯ ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ದೇಶದ ಎಲ್ಲಾ ಬ್ರಾಂಡೆಡ್ ಮದ್ಯಗಳೂ ಅತಿ ಕಡಿಮೆ ಬೆಲೆಗೆ ಜನರಿಗೆ ಸಿಗುವಂತಾಗಬೇಕು ಎಂದು ಸ್ಕಾಟ್ಲೆಂಡ್ ಸರ್ಕಾರ ಕೋರ್ಟ್ಗೆ ಮನವಿ ಸಲ್ಲಿಸಿತ್ತು.
ಸರ್ಕಾರದ ಮನವಿಗೆ ವಿರುದ್ಧವಾಗಿ ಸ್ಕಾಚ್ ವಿಸ್ಕಿ ತಯಾರಕರು ಮತ್ತು ಇತರ ಕಂಪನಿಗಳು ಬೆಲೆ ಹೆಚ್ಚಿಸಲು ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. 5 ವರ್ಷಗಳ ಕಾಲ ನಡೆದ ಈ ಮೊಕದ್ದಮೆಯಲ್ಲಿ ಸರ್ಕಾರವೇ ಜಯಶಾಲಿಯಾಗಿದೆ. ಅದರಂತೆ, ಇನ್ನು ಮುಂದೆ ಸ್ಕಾಟ್ಲೆಂಡ್ನಲ್ಲಿ ಅಗ್ಗದ ದರದಲ್ಲಿ ಮದ್ಯ ದೊರಕಲಿದೆ.