ಹಳ್ಳಿಯ ಹೊಲದ ಮೇಲೆ ವಿಮಾನದಿಂದ ಬಿದ್ದಿದ್ದೇನು?
Team Udayavani, Jan 22, 2018, 7:49 AM IST
ಗುರುಗ್ರಾಮದ ಬಳಿಯ ಫಾಜಿಲ್ಪುರ ಬಾದ್ಲಿಯ ಜನ ಶನಿವಾರದಂದು ಗಾಬರಿ, ಭಯ, ಕುತೂಹಲ ಎಲ್ಲವನ್ನೂ ಒಟ್ಟೊಟ್ಟಿಗೆ ಅನುಭವಿಸಿದರು. ಕಾರಣ ಆಕಾಶದಲ್ಲಿ ಗುಡುಗಿನ ಸದ್ದಾಯಿತು. ಅದಾಗಿ ಕೆಲವೇ ಸೆಕೆಂಡುಗಳಲ್ಲಿ ಭೂಮಿ ಮೇಲೆ ಏನೋ ಭಾರವಾರ ವಸ್ತುವೊಂದು ಬಿದ್ದ
ಸಪ್ಪಳ ಕೇಳಿತು. ಗೋಧಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರಾಜಿರ್ ಯಾದವ್, ಆಕಾಶದಿಂದ ಬಿದ್ದ ಈ ಮೂಟೆ ನೋಡಿ ಗಾಬರಿಗೊಂದು ಊರಿನ ಮುಖಂಡರಿಗೆ ಈ ವಿಷಯ ತಿಳಿಸಿದರು. ಕೆಲವೇ ನಿಮಿಷಗಳಲ್ಲಿ ಇಡೀ ಊರಿಗೆ ಊರೇ ಆ ಸ್ಥಳದಲ್ಲಿ ಜಮೆಯಾಯಿತು. ಯಾರೂ ಇದನ್ನು
ಹತ್ತಿರ ಹೋಗಿ ನೋಡುವ ಧೈರ್ಯ ಮಾಡಲಿಲ್ಲ. ಕೆಲವರು ಇದನ್ನು ಬಾಂಬ್ ಎಂದರು, ಮತ್ತೆ ಕೆಲವರು ಉಲ್ಕೆ ಎಂದರು. ಮಕ್ಕಳಂತೂ ಅದು ಅನ್ಯಗ್ರಹ ಜೀವಿಗಳ ಉಡುಗೊರೆ ಎಂದೇ ನಿರ್ಧರಿಸಿ ಸಂಭ್ರಮಿಸಿದರು. ಕಡೆಗೆ ಕೆಲವರು ಈ ವಿಷಯವನ್ನು ಜಿಲ್ಲಾಧಿಕಾರಿಗೆ ತಿಳಿಸಿದರು.
ಅವರು ಹವಾಮಾನ ತಜ್ಞರನ್ನು ಕರೆತಂದು, ಮೂಟೆ ಬಿಚ್ಚಿ ಪರೀಕ್ಷಿಸಿದಾಗ, ಇದು ವಿಮಾನ ಹೊರ ಎಸೆದ ಮಾನವರ ಮಲ ಎಂದು ತಿಳಿದುಬಂತು. ಈಗ ಗೊಳ್ಳೆಂದು ನಗುವ ಸರದಿ ಗ್ರಾಮಸ್ಥರದ್ದು.