ಗೂಗಲ್ ಮಾಡಿದ ಎಡವಟ್ಟು ಈಗ ವೈರಲ್
Team Udayavani, Jan 24, 2018, 7:18 AM IST
ಗೂಗಲ್ ಫೋಟೋಸ್ನಲ್ಲಿರುವ ಫೋಟೋಗಳನ್ನು ಸ್ವತಃ ಗೂಗಲ್ ಆನಿಮೇಷನ್, ಕೊಲಾಜ್ ಮಾಡಿಕೊಡುವುದನ್ನು ಗೂಗಲ್ ಬಳಕೆದಾರರು ಗಮನಿಸಿಯೇ ಇರುತ್ತೀರಿ. ಆದರೆ ಈ ವಿಚಾರದಲ್ಲಿ ಗೂಗಲ್ ಯಡವಟ್ಟುಗಳನ್ನೂ ಮಾಡುತ್ತದೆಂದು ನಿಮಗೆ ಗೊತ್ತೇ?
ಮಾಲ್ಲೆಟ್ಸ್ ಡಾರ್ಕರ್ ಸ್ನೇಹಿತರ ಜೊತೆ ಕೆನಡಾದ ಲೂಯಿಸ್ ಸರೋವರಕ್ಕೆ ಪ್ರವಾಸ ಹೋಗಿದ್ದಾಗ ಒಂದಷ್ಟು ಫೋಟೊಗಳನ್ನು ತೆಗೆದಿದ್ದರು. ಅದನ್ನು ಗೂಗಲ್ನಲ್ಲಿ ಸೇವ್ ಮಾಡಿದ್ದರು. ಕೆಲ ದಿನಗಳ ನಂತರ ಅವರ ಫೋಟೊಗಳ ಆನಿಮೇಷನ್ ಮಾಡಿರುವುದಾಗಿ ಗೂಗಲ್ ಹೇಳಿತು. ಆನಿಮೇಟೆಡ್ ಫೋಟೊಗಳನ್ನು ನೋಡಿ ಲೂಯಿಸ್ ಬೆಚ್ಚಿಬಿದ್ದರಂತೆ. 3 ಫೋಟೊಗಳನ್ನು ಸೇರಿಸಿ ಅದು 1 ಫೋಟೊ ಮಾಡಿತ್ತು. ಅದರಲ್ಲಿ ಅವರ ಸ್ನೇಹಿತನ ತಲೆ ಮಾತ್ರ ಮರಗಳ ಹಿಂದೆ ಭಯಾನಕವಾಗಿ ಕಾಣುತ್ತಿತ್ತು.