CONNECT WITH US  

ಗೂಢಾಚಾರಿ ಅಲಿಯಾಗೆ ಸಿನಿಪ್ರಿಯರು ಫಿದಾ: "ರಾಝಿ' ಟ್ರೈಲರ್ ವೈರಲ್

ವಿಭಿನ್ನ ಪಾತ್ರದ ಮೂಲಕ ತೆರೆಮೇಲೆ ಬರಲು ಸಜ್ಜಾಗಿರುವ ಅಲಿಯಾ ಭಟ್ ಅವರ ಬಹುನಿರೀಕ್ಷಿತ ಚಿತ್ರ "ರಾಝಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಇಲ್ಲಿಯವೆರೆಗೂ ಒಂದೂವರೆ ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ.

ಈಗಾಗಲೇ "ಹೈವೆ' ಹಾಗೂ "ಉಡ್ತಾ ಪಂಜಾಬ್​' ಸಿನಿಮಾಗಳಲ್ಲಿನ ಅಭಿನಯದ ಮೂಲಕ ತನ್ನ ಅಮೋಘ ನಟನಾ ಕೌಶಲವನ್ನು ಅಲಿಯಾ ಭಟ್​ ಸಾಬೀತುಪಡಿಸಿದ್ದಾರೆ. ಇನ್ನು ಟ್ರೈಲರ್'ನಲ್ಲಿ ಅಲಿಯಾ ಗೂಢಾಚಾರಿ (ಸ್ಪೈ) ಪಾತ್ರದಲ್ಲಿ ಮಿಂಚಿದ್ದು, ನೋಡುಗರಿಗೆ ಅವರ ಅಭಿನಯ ಮನಮುಟ್ಟುವಂತಿದೆ.

ಅಲಿಯಾಗೆ ಜೊತೆಯಾಗಿ ವಿಕ್ಕಿ ಕೌಶಲ್​ ನಟಿಸಿದ್ದು, ಪಾಕಿಸ್ತಾನಿ ಸೇನಾಧಿಕಾರಿಯ ಪಾತ್ರದಲ್ಲಿ ವಿಕ್ಕಿ ಮಿಂಚಿದ್ದಾರೆ. ಭಾರತದ ಗೂಢಾಚಾರಿಯಾಗಿರುವ ಅಲಿಯಾ ಪಾಕಿಸ್ತಾನಿ ಸೇನಾಧಿಕಾರಿಯ ಪತ್ನಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾದ ಕಥೆ ಹರಿಂದರ್​ ಸಿಕ್ಕಾ ಅವರ ಕಾದಂಬರಿ "ಕಾಲಿಂಗ್​ ಸಹಮತ್​' ಆಧಾರಿತವಾಗಿದೆ.

1971ರ ಭಾರತ-ಪಾಕ್​ ಯುದ್ಧದ ಮೇಲೆ ಹೆಣಯಲಾಗಿರುವ ಗಂಭೀರ ಕಥೆಯಾಧರಿತ ಚಿತ್ರವಾಗಿದೆ. ಕರಣ್​ ಜೋಹರ್​ ನಿರ್ಮಾಣದ ಈ ಸಿನಿಮಾ ಮೇ 11ಕ್ಕೆ ಬಿಡುಗಡೆಗೆ ಸಜ್ಜಾಗಿದ್ದು, ರಜಿತ್​ ಕಪೂರ್​, ಶಿಶಿರ್​ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.

Trending videos

Back to Top