ಫ್ರೆಂಡ್ ಅಂಗದ್ ಜತೆಗೆ ಮದುವೆ: ನೇಹಾ ಧೂಪಿಯಾ Big Surprise
Team Udayavani, May 10, 2018, 4:00 PM IST
ಮುಂಬಯಿ : ಬಾಲಿವುಡ್ನಲ್ಲಿ ಸೆಕ್ಸೀ ನಟಿಯಾಗಿ ಹಿಂದೊಮ್ಮೆ ಸಾಕಷ್ಟು ಹೆಸರು ಮಾಡಿದ್ದ ನೇಹಾ ಧೂಪಿಯಾ ಇಂದು ಗುರುವಾರ ತಾನು ತನ್ನ ಬೆಸ್ಟ್ ಫ್ರೆಂಡ್ ಅಂಗದ್ ಬೇಡಿಯನ್ನು ಮದುವೆಯಾಗಿರುವುದಾಗಿ ಇಡಿಯ ಚಿತ್ರರಂಗಕ್ಕೆ, ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾಳೆ.
ನೇಹಾ ಮತ್ತು ಅಂಗದ್ ಈಚೆಗೆ ಕೆಲ ಸಮಯದಿಂದ ಡೇಟಿಂಗ್ ನಿರತರಾಗಿರುವ ಬಗ್ಗೆ ದಟ್ಟ ವದಂತಿಗಳು ಹರಡಿಕೊಂಡಿದ್ದವು. ಸಿಕ್ಖ್ ಸಂಪ್ರದಾಯಂತೆ ತಾವು ಮದುವೆಯಾಗಿರುವುದಾಗಿ ಪ್ರಕಟಿಸಿರುವ ಈ ಜೋಡಿ ಇಂದು ಗುರುವಾರ ದಿಢೀರನೆ ಬಾಂಬ್ ಎಸೆದ ರೀತಿಯಲ್ಲಿ ತಮ್ಮ ವಿವಾಹವನ್ನು ಜಗಜ್ಜಾಹೀರು ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ನೇಹಾ ಅವರು ತಮ್ಮ ಮದುವೆಯನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದರು. ಜತೆಗೆ ಅಪ್ಲೋಡ್ ಮಾಡಿರುವ ವಿವಾಹ ಸಮಾರಂಭದ ಫೋಟೋ ಆಕೆ ಈ ರೀತಿಯ ಕ್ಯಾಪ್ಶನ್ ನೀಡಿದ್ದಾರೆ : “ನನ್ನ ಬದುಕಿನ ಅತ್ಯುತ್ತಮ ನಿರ್ಧಾರ; ಇವತ್ತು, ನಾನು ನನ್ನ ಅತ್ಯುತ್ತಮ ಗೆಳೆಯನನ್ನು ವಿವಾಹವಾಗಿದ್ದೇನೆ; ಹಲೋ, ಇಲ್ಲಿದ್ದಾರೆ ನನ್ನ ಪತಿ, ಅಂಗದ್ ಬೇಡಿ’.
ಅಂಗದ್ ಬೇಡಿ ಅವರು ಕೂಡ ನೇಹಾ ಜತೆಗಿನ ತಮ್ಮ ಮದುವೆಯ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಬೆಸ್ಟ್ ಫ್ರೆಂಡ್, ಈಗ ನನ್ನ ವೈಫ್; ಹಲೋ, ಈಗಿಲ್ಲಿ ನನ್ನ ಪತ್ನಿ ಇದ್ದಾರೆ – ಶ್ರೀಮತಿ ಬೇಡಿ!!!’ ಎಂದು ಅಂಗದ್ ಬರೆದುಕೊಂಡಿದ್ದಾರೆ.
ಕದ್ದು ಮುಚ್ಚಿ ತೆರೆಮರೆಯಲ್ಲಿ ಎಂಬಂತೆ ಮದುವೆಯಾಗಿರುವ ಈ ನೂತನ ಬಾಲಿವುಡ್ ಜೋಡಿಯ ವೈವಾಹಿಕ ಫೋಟೋಗಳು ರಂಗುರಂಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಮಿಂಚುತ್ತಿವೆ ! ನೂತನ ಜೋಡಿಗೆ ನಾವೂ ವೈವಾಹಿಕ ಶುಭಾಶಯ ಹೇಳೋಣ !
ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟಿ ಸೋನಮ್ ಕಪೂರ್ ಮದುವೆ ದಿಢೀರನೆ ನಡೆದು ಇಡಿಯ ಹಿಂದಿ ಚಿತ್ರರಂಗದವರು ಮತ್ತು ಆಕೆಯ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು