CONNECT WITH US  

ನಿರಂತರ 3ನೇ ದಿನದ ಕುಸಿತ: ಮುಂಬಯಿ ಶೇರು 60 ಅಂಕ ನಷ್ಟ

ಮುಂಬಯಿ : ವಾಣಿಜ್ಯ ಸಮರ ಭೀತಿಯಲ್ಲಿ ದೇಶೀಯ ಹೂಡಿಕೆದಾರರು ಮತ್ತು ವಹಿವಾಟುದಾರರು ಶೇರು ಮಾರಾಟಕ್ಕೆ ಮುಂದಾದ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ , ನಿರಂತರ ಮೂರನೇ ದಿನವಾಗಿ, 60 ಅಂಕಗಳ ನಷ್ಟಕ್ಕೆ ಗುರಿಯಾಯಿತು. 

ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ದೌರ್ಬಲ್ಯವನ್ನು ಅನುಸರಿಸಿ ಐಟಿ, ಟೆಕ್‌, ಆಯಿಲ್‌ ಆ್ಯಂಡ್‌ ಗ್ಯಾಸ್‌ ಶೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದವು. 

ಹೀರೊ ಮೋಟೋ ಕಾರ್ಪ್‌, ವಿಪ್ರೊ, ಐಟಿಸಿ, ಟಿಸಿಎಸ್‌, ಭಾರ್ತಿ ಏರ್‌ಟೆಲ್‌, ಇನ್‌ಫೋಸಿಸ್‌, ಡಾ. ರೆಡ್ಡಿ, ಕೋಟಕ್‌ ಬ್ಯಾಂಕ್‌, ಎಚ್‌ಡಿಎಫ್ಸಿ, ಬಜಾಜ್‌ ಆಟೋ ಶೇರುಗಳು ಶೆ.2ರಷ್ಟು ಕುಸಿದವು. 

ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್‌ 42.64 ಅಂಕಗಳ ನಷ್ಟದೊಂದಿಗೆ 32,553.90 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,972.60 ಅಂಕಗಳಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಐಸಿಐಸಿಐ ಬ್ಯಾಂಕ್‌, ಎಸ್‌ ಬ್ಯಾ,ಕ್‌ ಎಸ್‌ಬಿಐ, ಟಾಟಾ ಸ್ಟೀಲ್‌, ರಿಲಯನ್ಸ್‌ ಶೇರುಗಳು ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಸಕ್ರಿಯವಾಗಿದ್ದವು. 

ಶೇರು ಮಾರುಕಟ್ಟೆಗೆ ವ್ಯತಿರಿಕ್ತವಾಗಿ ಡಾಲರ್‌ ಎದುರು ರೂಪಾಯಿ ವಿನಿಮಯ ದರ ಇಂದು ಬೆಳಗ್ಗೆ 10 ಪೈಸೆಯಷ್ಟು ಬಲಗೊಂಡು 64.91 ರೂ. ಮಟ್ಟದಲ್ಲಿ ದಾಖಲಾಗಿತ್ತು. 

Trending videos

Back to Top