CONNECT WITH US  

ಉತ್ತಮ ಶಿಕ್ಷಕ ಪ್ರಶ್ನಸಿ ಪ್ರದಾನಕ್ಕೆ ಗಣ್ಯರ ಗೈರು

ಚಿಕ್ಕಬಳ್ಳಾಪುರ: ಎಲ್ಲರ ಮುಂದೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಲು ಉತ್ಸಾಹದಿಂದ ಜಿಲ್ಲೆಯ ವಿವಿಧ
ತಾಲೂಕುಗಳಿಂದ ಆಗಮಿಸಿದ್ದ ಪ್ರಶಸ್ತಿಗೆ ಆಯ್ಕೆಗೊಂಡಿದ್ದ ಶಿಕ್ಷಕರಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ತರಾತುರಿಯಲ್ಲಿ ಬಂದು ಭಾಷಣ ಮಾಡಿ ಹೊರಟ ಜನಪ್ರತಿನಿಧಿಗಳ ಕಾರ್ಯವೈಖರಿ ಶಿಕ್ಷಕರ ಕಣ್ಣು ಕೆಂಪಾಗಿಸಿದರೆ, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಗೈರಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಹೌದು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಕ್ರಾಸ್‌ನಲ್ಲಿರುವ ನಂಜುಂಡೇಶ್ವರ ಕನ್ವೆಂಷನ್‌ ಹಾಲ್‌ನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲು ಗಣ್ಯರ ಬರ ಎದುರಾಗಿದ್ದು, ಪ್ರಶಸ್ತಿ
ಸ್ವೀಕರಿಸಲು ಬಂದಿದ್ದ ಉತ್ತಮ ಶಿಕ್ಷಕರಲ್ಲಿ ಉತ್ಸಾಹ ಕುಗ್ಗುವಂತೆ ಮಾಡಿತು.

ಕಾರ್ಯಕ್ರಮದತ್ತ ನೋಡದ ಶಾಸಕರು: ಶಾಸಕ ಡಾ.ಕೆ.ಸುಧಾಕರ್‌ ಕಾರ್ಯಕ್ರಮ ಉದ್ಘಾಟಿಸಿ, ಭಾಷಣ ಮಾಡಿ ಹೊರಟರೆ, ವಿಧಾನ ಪರಿಷತ್ತು ಸದಸ್ಯ ವೈ.ಎ.ನಾರಾಯಣಸ್ವಾಮಿ ಕೂಡ ಬೇರೊಂದು ಕಾರ್ಯಕ್ರಮಕ್ಕೆ ಹೋಗಬೇಕೆಂದು ತಮ್ಮ ಭಾಷಣದ ಸರದಿ ಮುಗಿಸಿ ಹೊರಟರು. ಇನ್ನೂ ಕಾರ್ಯಕ್ರಮ ಉದ್ಘಾಟನೆ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇಸ್ರೇಲ್‌ ಪ್ರವಾಸದಲ್ಲಿದ್ದ ಕಾರಣ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಎಂ. ವೀರಪ್ಪ ಮೊಯ್ಲಿ ಸೇರಿದಂತೆ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಜಿಲ್ಲೆಯ ಯಾವ ಶಾಸಕರು ಕಾರ್ಯಕ್ರಮದ ಕಡೆ ಸುಳಿಯಲಿಲ್ಲ.

ಶಾಸಕ ಸುಧಾಕರ್‌ ಜತೆ ಆಗಮಿಸಿದ್ದ ತಾಲೂಕು ಪಂಚಾಯ್ತಿ ಅಧ್ಯಕ್ಷರು, ನಗರಸಭಾ ಸದಸ್ಯರು ಸಹ ಶಾಸಕರ ನಿರ್ಗಮನವಾಗುತ್ತಿದ್ದಂತೆ ಅವರನ್ನು ಹಿಂಬಾಲಿಸಿ ಹೊರ ನಡೆದರು. ಇದರಿಂದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡು ವವರೆಗೂ ಕಾಯದೇ ಶಾಸಕರು ಕಾರ್ಯಕ್ರಮದಿಂದ ನಿರ್ಗಮಿಸಿದ್ದು, ಶಿಕ್ಷಕರಲ್ಲಿ ಸಾಕಷ್ಟು ಟೀಕೆಗೆ ಗುರಿಯಾಯಿತು.

ಜಿಪಂ ಅಧ್ಯಕ್ಷರು ಮಾತ್ರ ಉಪಸ್ಥಿತಿ: ಇಡೀ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಚುನಾಯಿತ ಜನ ಪ್ರತಿನಿಧಿಗಳ ಪೈಕಿ ಆರಂಭದಿಂದ ಕೊನೆಯವರೆಗೂ ಉಪಸ್ಥಿತಿ ಇದದ್ದು ಮಾತ್ರ ಜಿಪಂ ಅಧ್ಯಕ್ಷ ಹೆಚ್‌ .ವಿ.ಮಂಜುನಾಥ ಮಾತ್ರ. ಕೊನೆಗೆ ಜಿಪಂ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೇ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಿದರು. ಈ ವೇಳೆ ಮಾತನಾಡಿದ ಜಿಪಂ ಅಧ್ಯಕ್ಷ ಹೆಚ್‌.ವಿ.ಮಂಜುನಾಥ, ಕಾಟಾಚಾರಕ್ಕೆ ಬಂದು ಹೋದ ಜನಪ್ರತಿನಿಧಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಸಹ ಜಿಲ್ಲೆಯ ಚುನಾಯಿತ ಜನಪ್ರತಿಧಿಗಳ ಕಾರ್ಯವೈಖರಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ದಿನಾಚರಣೆಯಿಂದ ದೂರ ಉಳಿದ ಡೀಸಿ, ಸಿಇಒ: ಒಂದಡೆ ಕಾಟಾಚಾರವೆಂಬಂತೆ ಜುನಾಯಿತ ಜನಪ್ರತಿನಿಧಿಗಳು ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಒಂದಿಷ್ಟು ಮಾತನಾಡಿ ಕಾರ್ಯಕ್ರಮಗಳ ಒತ್ತಡವಿದೆ ಎಂಬ ನೆಪದಲ್ಲಿ ಕಾರ್ಯಕ್ರಮದಿಂದ ನಿರ್ಗಮಿಸಿ ಶಿಕ್ಷಕರಲ್ಲಿ ಬೇಸರ ಮೂಡಿಸಿದರೆ, ಮತ್ತೂಂದಡೆ ಜಿಲ್ಲಾಡಳಿತದ ಚುಕ್ಕಾಣಿ ಹಿಡಿದಿರುವ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದು ಗಮನ ಸೆಳೆದರು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರಿಗೆ ಶುಭ ಕೋರಿ ಶಿಕ್ಷಕರಿಗೆ ಒಂದಿಷ್ಟು ಹಿತವಚನ ನೀಡಬೇಕಿದ್ದ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಕಾರ್ಯಕ್ರಮಕ್ಕೆ ಬಾರದೇ ಇದಿದ್ದು ಶಿಕ್ಷಕರ ನಡುವೆ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಕೊನೆಯಲ್ಲಿ ಬಂದ ಕೇಶವರೆಡ್ಡಿ: ತಮ್ಮ ಜಿಪಂ ಕ್ಷೇತ್ರದಲ್ಲಿಯೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆದರೂ ಮಾಜಿ ಜಿಪಂ ಅಧ್ಯಕ್ಷರು ಆಗಿರುವ ಹಾಲಿ ಸದಸ್ಯ ಪಿ.ಎನ್‌.ಕೇಶವರೆಡ್ಡಿ ಕಾರ್ಯಕ್ರಮ ಮುಗಿಯುವ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು. 

ಕಾಗತಿ ನಾಗರಾಜಪ್ಪ


Trending videos

Back to Top