CONNECT WITH US  

ಮಕ್ಕಳ ಹಕ್ಕುಗಳ ರಕ್ಷಣೆ ಮಾಹಿತಿ ಶಿಬಿರ

ಬಂಟ್ವಾಳ : ಸರಕಾರ ಸಾಮಾಜಿಕ ಪಿಡುಗನ್ನು ನಿವಾರಿಸಲು ಅನೇಕ ಕಾರ್ಯ ಕ್ರಮಗಳನ್ನು ಹಾಕಿಕೊಳ್ಳುತ್ತದೆ. ಮಕ್ಕಳು ಭಿಕ್ಷೆ ಬೇಡುವುದೂ ಇಂತಹ ಒಂದು ಪಿಡುಗು. ಇದಕ್ಕೆ ಹೆತ್ತವರಷ್ಟೇ ಸಮಾಜದ ಪಾತ್ರವೂ ಇರುವುದು. ಇದನ್ನು ತಿಳಿದು ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್. ಪ್ರಕಾಶ ಕಾರಂತ ತಿಳಿಸಿದರು. ಅವರು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಆಶ್ರಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಶ್ರಯದಲ್ಲಿ ನಡೆದ ಮಕ್ಕಳ ಹಕ್ಕುಗಳ ರಕ್ಷಣೆಯ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಘಟಕದ ರಕ್ಷಣಾಧಿಕಾರಿ ಕುಮಾರ್ ಶೆಟ್ಟಿಗಾರ್, ಸಂಯೋಜಕ ಯೊಗೀಶ್, ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಅಡ್ಯಾರ್ ಗ್ರಾ.ಪಂ. ಉಪಾಧ್ಯಕ್ಷ ಆಶಾ ಪ್ರಕಾಶ್ ಆಚಾರ್ಯ, ಪಿಡಿಒ ಪ್ರೇಮಲತಾ, ಗ್ರಾಮಾಭಿವೃದ್ಧಿ ಯೋಜನೆಯ ಶೋಭಾ ಪರ್ಲಕ್ಕೆ, ಸೇವಾಂಜಲಿಯ ವೇದಾವತಿ ಜಯರಾಮ್, ರಜನಿ ಶಿವರಾಜ್, ಸುನೀತಾ ವಿಟ್ಠಲ ಸಾಲ್ಯಾನ್, ಸಂಪನ್ಮೂಲ ವ್ಯಕ್ತಿ ಉಮೇಶ ನಿರ್ಮಾಲ್ ಮಾಹಿತಿ ನೀಡಿದರು. ಕೊಡ್ಮಾಣ್ ದೇವದಾಸ ಶೆಟ್ಟಿ ಸ್ವಾಗತಿ, ನಿರೂಪಿಸಿ, ವಂದಿಸಿದರು.


Trending videos

Back to Top