CONNECT WITH US  

ಜಾತಕ ಫ‌ಲ

 ಭವಾನಿ ಪಿ.ಆರ್‌. ಹೆಗ್ಗಡ ದೇವನಕೋಟೆ
   ನನ್ನ ಮಗನ ಜಾತಕ ಕಳುಹಿಸಿದ್ದೇನೆ. ತುಂಬಾ ಬುದ್ಧಿವಂತ. ಆದರೆ ಮನ ಬಿಚ್ಚಿ ಮಾತನಾಡಲಾರ. ಮಂಕು ಆವರಿಸಿದೆಯೋ ಎಂಬಂತಿರುತ್ತಾನೆ. ಒಳ್ಳೆಯ ಕೆಲಸವಿದೆ. ಆದರೆ ಮದುವೆಯಾಗುತ್ತಿಲ್ಲ. ಇಂಡಿಯಾದ ಹುಡುಗಿಯರ ಬಗೆಗೆ ನನ್ನ ಪ್ರಾಶಸ್ತ್ಯ. ಏನಾದೀತು? ಸಮಸ್ಯೆಗೆ ಪರಿಹಾರಗಳೇನು?
  ಈಗ ನಿಮ್ಮ ಮಗನ ಸಮಸ್ಯೆ ಸಂಸ್ಕೃತಿ, ಸಂಸ್ಕೃತಿಗಳ ನಡುವಣ ಸೂಕ್ಷ್ಮ ಆವರಣಗಳಿಗೇ ಹೊಂದಿ ಕೊಂಡಿದ್ದಾಗಿದೆ. ಜೊತೆಗೆ ಕಳತ್ರ (ಬಾಳ ಸಂಗಾತಿ) ಸ್ಥಾನಕ್ಕೆ ಕೇತು ದೋಷವಿದೆ. ನಿಮ್ಮ ಪತ್ರದಲ್ಲಿ ಈಗ ನೀವಿರುವುದು ಅಮೇರಿಕಾದಲ್ಲಿ, ಮಗ ಹುಟ್ಟಿ ಬೆಳೆದದ್ದು ಅಮೇರಿಕಾದಲ್ಲಿ, ಕೆಲಸದಲ್ಲಿರುವುದೂ ಅಮೇರಿಕಾದಲ್ಲಿ ಎಂದು ಬರೆದಿದ್ದೀರಿ. ಭಾರತಕ್ಕೆ ಬಂದಾಗ ಸಂಬಂಧಿಗಳ ಸಹಾಯದೊಂದಿಗೆ ಭಾರತೀಯ ಹುಡುಗಿಗಾಗಿ ಪ್ರಯತ್ನಿಸಿ. ಆದರೆ ಭಿನ್ನ ಸಂಸ್ಕೃತಿಯ ಜೊತೆಗಾರ್ತಿ ಸಿಗುವ ಸಂಭವ ಜಾಸ್ತಿ. ತುಂಬೆ ಹೂವಿಗೆ ನೀರಲ್ಲಿ ನೆನಸಿದ ಉದ್ದಿನ ಬೇಳೆಯನ್ನು ಜೊತೆಗಿರಿಸಿ ನಾಗರ (ಬೆಳ್ಳಿ ಮೂರ್ತಿ) ಆರಾಧನೆ ಮಾಡಿ. ಪ್ರಸನ್ನ ಗಣಪತಿ ಅಷ್ಟಕ ಓದಿ. ಮನ ಬಿಚ್ಚಿ ಮಾತನಾಡುವ ವಿಚಾರ ತಲೆ ಕೆಡಿಸಿಕೊಳ್ಳಬೇಕಿಲ್ಲ. ಮಗನಿಗೆ ಸಂಹವನ ಶಕ್ತಿ ಚೆನ್ನಾಗಿದೆ. 

 ಪ್ರಕಾಶ ಶೆಟ್ಟಿ, ಯಮ್ಮಿಗನೂರು
  ನಾನು ಮೂಲದಲ್ಲಿ ಉಡುಪಿಯವನು. ಏಳನೇ ವಯಸ್ಸಿಗೇ ಮುಂಬೈಗೆ ಬಂದೆ. ದೆಹಲಿಯಲ್ಲಿಯೂ ಹೋಟೆಲ್‌ ದಂಧೆ ನಡೆಸಿದೆ. ಶುರುವಾದಾಗ ಪರವಾಗಿಲ್ಲ ಎಂದು ಅನಿಸುತ್ತಿದೆ ಯಾದರೂ ಸಾಲದ ಗಿರಾಕಿಗಳು ಉರುಳು ಹಾಕಿಕೊಳ್ಳುವ ಸ್ಥಿತಿಗೆ ತರುತ್ತಾರೆ. ಈಗ ಒಂದು ಹೋಟೆಲ್‌ನಲ್ಲಿ ಕ್ಯಾಶಿಯರ್‌ ಆಗಿದ್ದೇನೆ. ಸದ್ಯ ಸ್ವತಂತ್ರ ಹೋಟೆಲ್‌ ಪ್ರಾರಂಭಿಸಲೇ? ಜಾತಕ ಇರಿಸಿದ್ದೇನೆ. ಒಂದು ದಾಸಿ ತೋರಿಸಿ. 
  ನಿಮ್ಮ ಜಾತಕ ಕುಂಡಲಿಯಲ್ಲಿ ರಾಹು ಶನಿಗಳು ನಡೆಸಿರುವ ದೌರ್ಜನ್ಯದಿಂದಾಗಿ ಸ್ವತಃ ನೀವೇ ಒಂದು ಹೋಟೆಲ್‌ ಮಾಲೀಕರಾಗುವ ಶಕ್ತಿಗೆ ಗೋಡೆಗಳು ಎದ್ದೇಳುತ್ತ ತಡೆ ತರುತ್ತವೆ. ಈಗ ಏನು ಮಾಡುತ್ತಿದ್ದಿರಿ ಇದು ನಿಮಗೆ ಕ್ಷೇಮ. ಶಶಿ ಮಂಗಳ ಯೋಗ ಒಂದು ಸುಸ್ಥಿಗೆ ತಲುಪಿಸುತ್ತದೆ. ನೀವು ಆಯೋಗ್ಯರನ್ನು ಮಾನವೀಯ ದೃಷ್ಟಿಯಿಂದ ನೋಡಬಾರದು. ಅವರು ನಿಮ್ಮ ತೂಕ ಕಳೆಯುತ್ತಾರೆ. ರಾಹು ದೋಷ ಇದೆ. 

 ಸರ್ವ ಮಂಗಳಮ್ಮ, ತುಮಕೂರು
  ಮಗಳ ಜಾತಕ ಕಳುಹಿಸುತ್ತಿದ್ದೇನೆ. ಗಂಡಿನ ಕಡೆಯವರು ಮೋಸ ಮಾಡಿದರು. ನಂಬಿ ಮದುವೆ ಮಾಡಿದೆವು. ಹುಡುಗನಿಗೆ ಹುಟ್ಟಾ ಸಕ್ಕರೆ ಖಾಯಿಲೆ. ಜೊತೆಗೆ ಫಿಟ್‌ ಇದೆ. ಈಗ ಡೈವರ್ಸ್‌ ಆಗಿದೆ. ಮರು ಮದುವೆಯ ಯೋಗವಿದೆಯೇ? ಪರಿಹಾರ ತಿಳಿಸಿ. 
   ಗಂಡಿನ ಕಡೆಯವರು ಮೋಸ ಮಾಡಿದರೆಂಬುದು ಸರಿ. ಹುಡುಗಿಗೆ ಇಂಥ ಯಾತನೆ ಏದುರಾಗಬೇಕಿತ್ತು ಎಂಬುದೂ ನಿಧಿ ಲಿಖೀತ. ಕ್ಷೀಣ ಚಂದ್ರ, ನೀಚ ಸೂರ್ಯ, ಭಾಗ್ಯಾಧಿಪತಿಯು ತನ್ನ ಸ್ವಂತ ಮನೆಯಲ್ಲಿದ್ದರೂ ಅವನ ಶಕ್ತಿಯನ್ನು ಹೀರಿದ್ದಾರೆ. ಸೂರ್ಯ ಬಾಳ ಸಂಗಾತಿಯ ಮನೆಯ ಒಡೆಯ ಮರು ಮದುವೆ ಸಾಧ್ಯವಿದೆ. ಆದರೆ ಸದ್ಯ ತುಸು ವಿಳಂಬಕ್ಕೆ ದಾರಿ ಇದೆ. ಸಾಡೇ ಸಾತಿಯ ಪೀಡೆ ( ಜನವರಿ 2017ರಲ್ಲಿ ಮುಕ್ತಾಯ) ಮುಗಿಯಬೇಕು. ಈಗ ವಿಳಂಬ ನೆರವೇರುತ್ತಿದೆ ಎಂದು ಅವಸರಿಸಬೇಡಿ. ಮದುವೆಯ ಸಂದರ್ಭ ಜಾಗರೂಕತೆಯಿಂದ ನೆರವೇರಬೇಕಾದದ್ದು. ವಿಧಿ ನಾವು ಚಾಪೆ ಕೆಳಗೆ ದೂರಿದರೆ ಅದು ರಂಗೋಲಿಯ ಕೆಳಗೆ ನುಸುಳುತ್ತದೆ. ಒಳ್ಳೆಯ ಸಂತಾನಕ್ಕೆ ಅವಕಾಶವಿದೆ. ಹೀಗಾಗಿ ಮರು ಮದುವೆ ಸಾಧ್ಯ. ಆದರೆ ಹೊಂದಾಣಿಕೆಯ ವಿಚಾರಬೇಕು. ಎಷ್ಟು ಹೊಂದಾಣಿಕೆ ಎಂಬುದನ್ನು ಸೂಕ್ತವಾಗಿ ನಿರ್ಧರಿಸಬೇಕು. ಸ್ವಯಂವರ ಪಾರ್ವತಿಯ ಸ್ತುತಿ, ಹನುಮಾನ್‌ ಚಾಲೀಸ್‌ ಪಠಣವನ್ನು ಮಗಳು ಮಾಡಲಿ. 


Trending videos

Back to Top