CONNECT WITH US  

ಅಧಿಕಾರಕ್ಕೆ ಬಂದರೆ ಸಾಲ ಮನ್ನಾ 

ಬಾದಾಮಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ: ಮಾವಿನಮರದ

ಗುಳೇದಗುಡ್ಡ: ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು.

ಗುಳೇದಗುಡ್ಡ: ರಾಜ್ಯ ಲೂಟಿ ಹೊಡೆದು ದುರಂಹಕಾರದಿಂದ ಮಾತನಾಡುವ ಕಾಂಗ್ರೆಸ್‌, ಬಿಜೆಪಿ ಪಕ್ಷಗಳಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಜೆಡಿಎಸ್‌ ಅಭ್ಯರ್ಥಿ ಹನಮಂತ ಮಾವಿನಮರದ ಪರವಾಗಿ ಮತಯಾಚನೆ ಮಾಡಿ, ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸರಕಾರಗಳು ಭ್ರಷ್ಟಾಚಾರದಲ್ಲಿ ನಡೆಸಿ, ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಈ ಬಾರಿ ರಾಜ್ಯದ ಜನತೆ ಜೆಡಿಎಸ್‌ ಬೆಂಬಲಿಸಿ, ಮತ ಹಾಕಿದರೆ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿನ ರೈತರ ನೇಕಾರರ ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದರು.

ಈ ಬಾರಿ ಜೆಡಿಎಸ್‌ಗೆ ಬೆಂಬಲಿಸಿ, ಸ್ಥಳೀಯರಿಗೆ ಆದ್ಯತೆ ನೀಡಿ, ಅಮಿತ್‌ ಶಾ ಬಂದು ಟಾಟಾ ಮಾಡಿ ಹೋಗ್ತಾರೆ. ಆದರೆ ನಿಮ್ಮ ಸಮಸ್ಯೆ ಆಲಿಸುವುದು ಸ್ಥಳೀಯರು. ಅದಕ್ಕೆ ನಮ್ಮ ಪಕ್ಷದ ಅಭ್ಯರ್ಥಿ ಹನಮಂತ ಮಾವಿನಮರದ ಅವರಿಗೆ ಮತ ಹಾಕಿ ಗೆಲ್ಲಿಸಬೇಕೆಂದುಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಅಭ್ಯರ್ಥಿ ಹನಮಂತ ಮಾವಿನಮರದ ಮಾತನಾಡಿ, ಈ ಬಾರಿ ಜೆಡಿಎಸ್‌ಗೆ ಮತ ಹಾಕಿ ನನನ್ನು ಗೆಲ್ಲಿಸಬೇಕು. ಬಾದಾಮಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.  

ಘನಶ್ಯಾಮ್‌ ಭಾಂಡಗೆ, ಜಿಲ್ಲಾಧ್ಯಕ್ಷ ರವಿ ಹುಣಶ್ಯಾಳ, ಶ್ರೀಕಾಂತ ಹುನಗುಂದ, ಚಂದ್ರಕಾಂತ ಶೇಖಾ, ಲಕ್ಷ್ಮಣ ಹಾಲನ್ನವರ, ಮುತ್ತಣ್ಣ ದೇವರಮನಿ, ಅನ್ವರಖಾನ ಪಠಾಣ, ರಜಾಕ್‌ ಕುದರಿ, ಈಶ್ವರ ಕಂಠಿ, ಭುವನೇಶ್ವರಿ ಹಾದಿಮನಿ, ಮಹೇಶ ಬಿಜಾಪೂರ, ಸಂತೋಷ ನಾಯನೇಗಲಿ, ಟಿ.ಎಸ್‌ .ಬೆನಕಟ್ಟಿ ಸೇರಿದಂತೆ ಇತರರು ಇದ್ದರು.

ಪಟ್ಟಣದ ಬಾದಾಮಿ ನಾಕಾದಿಂದ ಜೆಡಿಎಸ್‌ ಅಭ್ಯರ್ಥಿ ಹನಮಂತ ಮಾವಿನಮರದ ಅವರು ಸಾಲೇಶ್ವರ ದೇವಸ್ಥಾನದ ಎದುರಿನ ರಸ್ತೆವರೆಗೂ ರೋಡ್‌ ಶೋ ಮೂಲಕ ಪಟ್ಟಣದ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದರು. 


Trending videos

Back to Top