ದುರ್ನಾತ ಬೀರುತ್ತಿದೆ ನಾಗರ ಕೆರೆ 

Team Udayavani, Sep 28, 2018, 4:30 PM IST

28-sepctember-17.gif

ನರೇಗಲ್ಲ: ಪಟ್ಟಣದ ಐತಿಹಾಸಿಕ ನಾಗರ ಕೆರೆ ಈಗ ದುರ್ನಾತ ಬೀರುವ ತಾಣವಾಗಿದೆ. ಕಳೆದ 25 ದಿನಗಳಿಂದ ಕೆರೆ ದುರ್ನಾತ ಬೀರುತ್ತಿದ್ದು, ಅದರ ಸುತ್ತಮುತ್ತಲಿನ ರಸ್ತೆಯಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೆರೆಯಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆ ಆಗುತ್ತಿದೆ. ಕೆರೆ ಸ್ವತ್ಛತೆಗೆ ಪಟ್ಟಣ ಪಂಚಾಯತಿ, ಜಿಲ್ಲಾಡಳಿತವಾಗಲಿ ಯಾವುದೇ ರೀತಿ ಗಮನಹರಿಸದಿರುವುದೇ ಇದಕ್ಕೆ ಕಾರಣವಾಗಿದೆ. ಕೆರೆಯಲ್ಲಿ ವಿವಿಧ ವಾರ್ಡ್‌ಗಳಿಂದ ಕಸ, ಕಡ್ಡಿ, ಕಟ್ಟಡ ತ್ಯಾಜ್ಯ ತಂದು ಹಾಕಲಾಗುತ್ತಿದ್ದು, ಐತಿಹಾಸಿಕ ಕೆರೆ ಈಗ ತಿಪ್ಪೆಯಂತೆ ಗೋಚರವಾಗುತ್ತಿದೆ.

ಮಳೆಗಾಲದಲ್ಲಿ ನಾಲ್ಕಾರು ಮಳೆ ಬಿದ್ದ ಬಳಿಕ ಕೆರೆ ಸ್ವಲ್ಪ ಸ್ವತ್ಛಗೊಳ್ಳುತ್ತದೆಯಷ್ಟೇ. ಒಂದೆರಡು ತಿಂಗಳಲ್ಲಿ ಮತ್ತೆ ಕೆರೆ ಕಸದ ತೊಟ್ಟಿಯಾಗುತ್ತದೆ. ಹೀಗೆ ಕಸ ಸುರಿಯುತ್ತ ಬಂದಿರುವುದರಿಂದ 2. 29 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಈಗ ಹೂಳು ತುಂಬಿದೆ. ಪಟ್ಟಣದಲ್ಲಿ ಅನೇಕ ಕೆರೆಗಳು ಈಗ ಕಾಣದಂತಾಗಿದ್ದು, ಈ ಕೆರೆಗೂ ಅದೇ ಸ್ಥಿತಿ ಬರಲಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಾರೆ.

ಕೆರೆ ಪಕ್ಕದಲ್ಲಿರುವ ಉರ್ದು ಶಾಲೆ ಹಾಗೂ ಸರ್ಕಾರಿ ಆಸ್ಪತ್ರೆಗೆ ದಿನ ನಿತ್ಯ ನೂರಾರು ಜನರು ಇದೆ ಮಾರ್ಗವಾಗಿ ಹೋಗುತ್ತಾರೆ ಹಾಗೂ ಕೆರೆ ದಂಡೆ ಮೇಲೆ ನಾಗಪ್ಪನ ಕಟ್ಟೆ ಇದೆ. ಆದರೆ, ಈಗ ಕೆರೆ ದುರ್ನಾತ ಬೀರುತ್ತಿರುವುದರಿಂದ ಶಾಲೆಗೆ ಹೋಗುವ ಮಕ್ಕಳು ಸರ್ಕಾರಿ ಆಸ್ಪತ್ರೆಗೆ ಬರುವ ಜನರು ಮೂಗು ಮುಚ್ಚಿಕೊಂಡೇ ಒಡಾಡಬೇಕಾಗಿದೆ. ಶಾಲೆಗೆ ಹಾಗೂ ಆಸ್ಪತ್ರೆಗೆ ಬರುವ ಜನರು ರೋಗ ತೆಗೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಕೆರೆಯಲ್ಲಿನ ನೀರು ಈಗ ಹಸಿರು ಬಣ್ಣಕ್ಕೆ ತಿರುಗಿದೆ ಎಂದು ರಮೇಶ ಕೋಲಕಾರ, ಪ್ರಕಾಶ, ಮಹೇಶ ಶಿವಶಿಂಪರ ಸಮಸ್ಯೆ ವಿವರಿಸಿದರು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಡೀ ಕೆರೆಯನ್ನೇ ಆಪೋಶನ ತೆಗೆದುಕೊಂಡಂತಾಗಿದೆ. ಚರಂಡಿಯಲ್ಲಿ ತುಂಬಿದ ನೀರು ನೇರ ನಾಗರ ಕೆರೆಗೆ ಸೇರುತ್ತಿದೆ. ಇದರಿಂದ ಇಡೀ ವಾತಾವರಣ ಕಲುಷಿತಗೊಂಡಿದೆ. ಎಷ್ಟೇ ಮಳೆ ಬಂದರೂ ಸಹ ಕರೆ ಶುದ್ಧವಾಗದಂತಹ ಸ್ಥಿತಿಗೆ ತಲುಪಿದೆ. ವರ್ಷಗಟ್ಟಲೆಯಿಂದ ಕಲುಷಿತ ತ್ಯಾಜ್ಯ ನೀರು ಸಂಗ್ರಹಗೊಂಡಿದೆ. ಒಂದು ದೊಡ್ಡ ಕರೆ ಇಂದು ಕಲುಷಿತ ನೀರು ನಿಂತಿರುವ ಒಂದು ಚಿಕ್ಕ ಗುಂಡಿಯಂತಾಗಿದೆ. ಪರಿಣಾಮ ಸೊಳ್ಳೆ, ಕ್ರಿಮಿಕೀಟಗಳ ಕಾಟ ದಿನೇ ದಿನೇ ಹೆಚ್ಚಾಗಿದ್ದು, ಈ ಭಾಗದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಕೆರೆ ಇತಿಹಾಸ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಜೀವನಾಡಿಯಾಗಿದ್ದ ನಾಗರ ಕೆರೆ ನೀರಿನಿಂದ ಇಲ್ಲಿನ ದರ್ಗಾದ ಅಜ್ಜನವರು ಉರುಸು ಸಮಯದಲ್ಲಿ ದೀಪ ಹೆಚ್ಚುತ್ತಿದ್ದರು. ಇಲ್ಲಿನ ಜನರಿಗೆ ಚರ್ಮದ ರೋಗ ವಾಸಿಮಾಡುವಂತಹ ಪವಾಡ, ಶಕ್ತಿ ಕೆರೆ ನೀರಿಗೆ ಇತ್ತು ಎಂಬ ನಂಬಿಕೆ ಜನರಲ್ಲಿದೆ. ಆದರೆ ಈಗ ನಾಗರ ಕೆರೆ ರೋಗ ಹರಡುವಂತಹ ತಾಣವಾಗಿ ನಿರ್ಮಾಣವಾಗಿದೆ. ಜೊಂಡು, ಕಲುಷಿತ ತ್ಯಾಜ್ಯ ಎಲ್ಲವೂ ಕೆರೆಯಲ್ಲಿ ಸೇರಿ ದುರ್ನಾತ ಬೀರುತ್ತಿದೆ. ದಿನ ಕಳೆದಂತೆ ಕೆರೆ ವಿಸ್ತೀರ್ಣ ಕೂಡ ಕಡಿಮೆಯಾಗುತ್ತಿದ್ದು, ಇಡೀ ಕರೆ ಸಾಯುವ ಸ್ಥಿತಿಯಲ್ಲಿದೆ.

ಶಾಸಕರಿಗೆ, ಜಿಲ್ಲಾಡಳಿತಕ್ಕೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆರೆ ದುರ್ನಾತಕ್ಕೆ ವಾರ್ಡ್‌ 7ರ ಜನರು, ವಿದ್ಯಾರ್ಥಿಗಳು ರೋಗ ಭೀತಿಯಿಂದ ಭಯಗೊಂಡಿದ್ದಾರೆ. ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆ ಅಡಿ ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರರೂ. ನೀಡುತ್ತಿದ್ದು, ಎಷ್ಟೋ ಕಡೆ ಕೆಲಸ ಮಾಡದೇ ಬಿಲ್‌ ಆಗಿದೆ. ಆದರೆ ಈ ಇಲಾಖೆ ಅಧಿಕಾರಿಗಳಿಗೆ ನಾಗರ ಕೆರೆ ಕಾಣಲಿಲ್ಲವೇ?
  ಬಸವರಾಜ ವಂಕಲಕುಂಟಿ,
  ವಾರ್ಡ್‌ ನಂ.7ರ ನಿವಾಸಿ

ಸಿಕಂದರ್‌ ಎಂ. ಆರಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.