ಧಾರ್ಮಿಕ ಕ್ಷೇತ್ರಕ್ಕೆ ಸರ್ಕಾರದ ಹಸ್ತಕ್ಷೇಪ ಸಲ್ಲ

Team Udayavani, Feb 8, 2018, 10:00 AM IST

gul-1.jpg

ಕಲಬುರಗಿ: ಅನಾದಿ ಕಾಲದಿಂದಲೂ ಮಠ-ಮಾನ್ಯಗಳು ತನ್ನದೇಯಾದ ಸಂಪ್ರದಾಯಗಳಿಂದ ಮುನ್ನಡೆದುಕೊಂಡು ಬರುತ್ತಿವೆಯಾದರೂ ರಾಜ್ಯ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಧಾರ್ಮಿಕ ಕ್ಷೇತ್ರದಲ್ಲಿ ವಿನಾಕಾರಣ ಆಗಾಗ್ಗೆ ಹಸ್ತಕ್ಷೇಪಕ್ಕೆ ಮುಂದಾಗುತ್ತಿರುವುದು ಜನರು ಒತ್ತಟ್ಟಿಗಿರಲಿ ಅವರದ್ದೇ ಪಕ್ಷದವರು ಒಪ್ಪುವುದಿಲ್ಲ ಎಂದು ಬಾಳೆಹೊನ್ನುರು ರಂಭಾಪುರಿ ಜಗದ್ಗುರು ಪೀಠದ ಡಾ| ಪ್ರಸನ್ನ ರೇಣುಕ ವೀರ ಸೋಮೇಶ್ವರ ಭಗವತ್ಪಾದರು ಹೇಳಿದರು.

ಅಫಜಲಪುರ ತಾಲೂಕು ಸುಕ್ಷೇತ್ರ ಚಿನ್ಮಯಗಿರಿ-ಚೌಡಾಪುರ ಮಹಾಂತೇಶ್ವರ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ ನೆರವೇರಿಸಿ ತದನಂತರ ನಡೆದ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಶತ-ಶತಮಾನಗಳಿಂದ ಮಠ-ಮಾನ್ಯಗಳು ಸಮಾಜಮುಖೀಯಾಗಿ ಕಾರ್ಯನಿರ್ವಹಿಸುತ್ತ ಬಂದಿವೆ. ಆದರೆ ಧರ್ಮದ ವಿಚಾರದಲ್ಲಿ ವಿವಾದ ಹುಟ್ಟು ಹಾಕುತ್ತಿರುವುದಕ್ಕೆ ಅವರ ಪಕ್ಷದವರೇ ಮುಜುಗರಕ್ಕೀಡಾಗುತ್ತಿದ್ದಾರೆ. ಮಠ ಮಾನ್ಯಗಳಲ್ಲಿ ಹಸ್ತಕ್ಷೇಪ ಮಾಡುವಂತಾದರೆ ಈ ನಾಡಿನ ಸಂಸ್ಕೃತಿ ಉಳಿಯಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ನಾಡಿನ ಮಠಾಧೀಶರು, ಪ್ರಜ್ಞಾವಂತ ಭಕ್ತರು ತಮ್ಮತನ ಮೆರೆಯಬೇಕು ಎಂದು ಕರೆ ನೀಡಿದರು.

ವೀರಶೈವ ಧರ್ಮದಲ್ಲಿ ಎಲ್ಲ ಧರ್ಮಗಳ ಸಾರ ಅಡಕವಾಗಿದೆ. ಧರ್ಮ ಕಟ್ಟುವ ನಿಟ್ಟಿನಲ್ಲಿ ಫೆ. 28ರಂದು ಬಾಳೆಹೊನ್ನುರದಲ್ಲಿ ನಾಡಿನ ಗುರು-ವಿರಕ್ತರ ಸಮಾಗಮದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಎಲ್ಲ ಮಠಾಧೀಶರು ಪಾಲ್ಗೊಳ್ಳುವರು. ಎಲ್ಲ ಪಂಚ ಪೀಠಾಧೀಶರೆಲ್ಲರೂ ಸಮಾವ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಡಗಾ-ಮುಗಳಖೋಡದ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಚಿನ್ಮಯಗಿರಿ ಶ್ರೀ ಮಹಾಂತೇಶ್ವರ ಮಠ ಹಾಗೂ ಜಿಡಗಾದ ಶ್ರೀ ಸಿದ್ದರಾಮ ಶಿವಯೋಗಿಗಳ ಮಠ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಮಠದಲ್ಲಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಕೈಲಾಸವೇ ಧರೆಗಿಳಿದಿದೆ. ಮಾನವರಾಗಿ ಹುಟ್ಟಿದ್ದು ನಮ್ಮ ಪುಣ್ಯ. ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಕಿರಿಯ ಶ್ರೀಗಳು ಎಲ್ಲ ಭಕ್ತರೊಂದಿಗೆ ಸೌಹಾರ್ದಯುತವಾಗಿ ಸಾಗುವರು ಎಂಬ ಭರವಸೆ ನನಗಿದೆ ಎಂದು ಹೇಳಿದರು. ಮಾಜಿ ಶಾಸಕ ಎಂ.ವೈ ಪಾಟೀಲ ಮಾತನಾಡಿ, ಮಹಾಂತೇಶ್ವರ ಮಠ ಭವ್ಯ ಪರಂಪರೆ ಒಳಗೊಂಡಿದೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಚಿನ್ಮಯಗಿರಿ ಹಿರಿಯ ಶ್ರೀ ಸಿದ್ದರಾಮ ಶಿವಾಚಾರ್ಯರು, ನಮ್ಮ ಮಠಕ್ಕೆ ಭಕ್ತರೇ ಆಸ್ತಿಯಾಗಿದ್ದಾರೆ ಎಂದು ಹೇಳಿದರು. ಮಠದ ನೂತನ ಪೀಠಾ ಧಿಪತಿ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ನಾನು ಮಠದ ಅಧಿಪತಿಯಲ್ಲ. ಭಕ್ತರ ನಿಷ್ಠಾವಂತ ಸನ್ಯಾಸಿ. ಭಕ್ತರೇ ಮಠದ ಆಸ್ತಿ ಎಂದು ಹೇಳಿದರು. ಮೈಸೂರಿನ ಪಂಡಿತಾರಾಧ್ಯ ಶಿವಾಚಾರ್ಯರು, ಕಡಕೋಳದ ರುದ್ರಮುನಿ ಶಿವಾಚಾರ್ಯರು, ಮಾತನಾಡಿದರು.

ಅಳ್ಳಗಿಯ ಶಾಂತಲಿಂಗ ಶಿವಾಚಾರ್ಯರು, ಮೈಂದರ್ಗಿಯ ನೀಲಕಂಠ ಶಿವಾಚಾರ್ಯರು, ನೀಲೂರಿನ ಮಲ್ಲಿಕಾರ್ಜುನ ಶಿವಾಚಾರ್ಯರು, ನಿಂಬರ್ಗಾದ ನೀಲಕಂಠ ಶಿವಾಚಾರ್ಯರು, ಹುಲ್ಯಾಳದ ಹರ್ಷಾನಂದ ಶಿವಾಚಾರ್ಯರು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಮಸ್ಕಿ ವರರುದ್ರ ಮಹಾಸ್ವಾಮಿಗಳು, ಆಳಂದದ ಸಿದ್ದೇಶಶ್ವರ ಶಿವಾಚಾರ್ಯರು, ಆಲಮಟ್ಟಿಯ ಡಾ| ರುದ್ರಮುನಿ ಮಹಾಸ್ವಾಮಿಗಳು, ಮೈಸೂರಿನ ಕೀರ್ತಿ ಪ್ರಭು ಸ್ವಾಮಿಗಳು, ಮಾಶಾಳದ ಕೇದಾರ ದೇವರು, ಕೊಳ್ಳೂರಿನ ಮೃತ್ಯುಂಜಯ  ದೇವರು ಪಾಲ್ಗೊಂಡಿದ್ದರು.

ಜಿಪಂ ಸದಸ್ಯ ಸುಮೀತ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಮುಖಂಡರಾದ ಬಿ.ವೈ. ಪಾಟೀಲ, ಶಿವಪುತ್ರಪ್ಪ ಕರೂರ, ಶಿವಶರಣಪ್ಪ ಹೀರಾಪುರ, ಶಿವಶರಣಪ್ಪ ಸಿರಿ, ಸಿದ್ದು ಸಿರಸಗಿ, ದೇವೇಂದ್ರ ಜಮಾದಾರ, ಮಹಾಂತಪ್ಪ ಅವರಾದ, ಗೌಡಪ್ಪಗೌಡ ಬಿರಾದಾರ, ಯಲ್ಲಣಗೌಡ ಪಾಟೀಲ, ಚಂದ್ರಶಾ ಜಮಾದಾರ, ಯಲ್ಲಪ್ಪ ಗಂಡೋಳಿ, ಶಿವಶರಣಪ್ಪ ಮಾಸ್ತರ ಇದ್ದರು. ಮಲ್ಲಿನಾಥ ಪಾಟೀಲ ಚಿಣಮಗೇರಾ ಸ್ವಾಗತಿಸಿದರು. ಡಾ| ಎಂ.ಎಸ್‌. ಜೋಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದರಗಿ ಅಮರಸಿದ್ದೇಶ್ವರ ಮಹಾಸ್ವಾಮಿಗಳು ನಿರೂಪಿಸಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.