CONNECT WITH US  

25 ವರ್ಷ ಬಳಿಕ ನಡೆದ ಲಕ್ಷ್ಮೀ ದೇವಿ ಜಾತ್ರೆ

ಅಫಜಲಪುರ: ಅಳ್ಳಗಿ (ಬಿ) ಗ್ರಾಮದ ಎಲ್ಲ ಸಮುದಾಯದವರು ಸೇರಿಕೊಂಡು 25 ವರ್ಷಗಳ ಬಳಿಕ ಗ್ರಾಮದೇವತೆ ಲಕ್ಷ್ಮೀ ದೇವಿ ಜಾತ್ರೆಯನ್ನು ರವಿವಾರ ಅದ್ಧೂರಿಯಾಗಿ ಆಚರಿಸಿದರು.

ಗ್ರಾಪಂ ಅಧ್ಯಕ್ಷ ಬಾಬುಗೌಡ ಪಾಟೀಲ, ಮುಖಂಡರಾದ ಸಾಹೇಬಗೌಡ ಪಾಟೀಲ, ಮಲ್ಲಪ್ಪ ಬಂಕದ ಮಾತನಾಡಿ, 25 ವರ್ಷಗಳ ಹಿಂದೆ ದೇವಿಯ ಜಾತ್ರೆಯಲ್ಲಾದ ಜಗಳ ನಮ್ಮೆಲ್ಲರನ್ನು ದೂರವಾಗಿಸಿತ್ತು. ಆದರೆ ಈ ಬಾರಿ ಯುವಕರೆಲ್ಲ ಸೇರಿಕೊಂಡು ದ್ವೇಷದ ಗೋಡೆ ಒಡೆದು ಹಾಕಿ, ಗ್ರಾಮ ದೇವತೆ ಜಾತ್ರೆಯ ಮೂಲಕ ನಮ್ಮನ್ನು ಒಂದಾಗಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಸಂತೋಷ ರಾಠೊಡ ಸೇರಿದಂತೆ 60 ಪೊಲೀಸರು ಹಾಗೂ ಗೃಹ ರಕ್ಷಕ ದಳದವರು ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸಿದ್ದರು. 


Trending videos

Back to Top