ಕಾಸರಗೋಡು ಅಪರಾಧ ಸುದ್ದಿಗಳು

ಪೋಕ್ಸೋ ಕಾನೂನು ಪ್ರಕಾರ ಮದ್ರಸಾ ಅಧ್ಯಾಪಕನ ಬಂಧನ
ಕಾಸರಗೋಡು: ಹತ್ತು ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಬೇಡಗಂ ಕಾಟ್ಟಿಪ್ಪಾರದ ಮದ್ರಸಾ ಅಧ್ಯಾಪಕ, ಬಂದ್ಯೋಡು ಕಯ್ನಾರು ಬಳಿಯ ಉಬೈದುಲ್ಲಾ ಮುಸ್ಲಿಯಾರ್ (44)ನನ್ನು ಪೋಕೊÕà ಕಾನೂನು ಪ್ರಕಾರ ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಜೂನ್ ತಿಂಗಳಲ್ಲಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಬಗ್ಗೆ ದೂರು ನೀಡಲಾಗಿತ್ತು.
ಯುವಕನಿಗೆ ಹಲ್ಲೆ : ಕೇಸು ದಾಖಲು
ಕುಂಬಳೆ: ಶಾಂತಿಪಳ್ಳ ನಿವಾಸಿ ಅಬ್ದುಲ್ ರಶೀದ್ ಯಾನೆ ಮೂಸಾ ರಶೀದ್ (32) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಗಾಯಾಳು ಮಂಗಳೂರಿನ ಆಸ್ಪತೆಗೆ ದಾಖಲಾಗಿದ್ದಾರೆ.
ಚಿನ್ನದ ವ್ಯಾಪಾರಿ ಕೊಲೆ :
ಅ. 27ರಂದು ವಿಚಾರಣೆ ಆರಂಭ
ಕಾಸರಗೋಡು: ಮೂಲತಃ ಮಧೂರು ಗ್ರಾಮದ ಹಿದಾಯತ್ನಗರದ ಚೆಟ್ಟುಂಗುಳಿ ಕೋಳಿಯಾಡ್ ಹೌಸ್ ನಿವಾಸಿ ಹಾಗೂ ಬಳಿಕ ಬಾಯಾರುಪದವು ಗಂಗಡ್ಕ ಪೆರುವಾಯಿಯಲ್ಲಿ ವಾಸಿಸುತ್ತಿದ್ದ ಹಳೆ ಚಿನ್ನ ಖರೀದಿಸುವ ವ್ಯಾಪಾರಿಯಾಗಿದ್ದ ಮುಹಮ್ಮದ್ ಮನ್ಸೂರ್ ಆಲಿ ಕೆ.ಎಂ. (50) ಅವರನ್ನು ಕೊಲೆ ಮಾಡಿ ಹಣ ದರೋಡೆ ಮಾಡಿದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ)ದಲ್ಲಿ ಅ. 10ರಿಂದ ಆರಂಭಗೊಳ್ಳಲಿದೆ.
2017ರ ಜ. 25ರಂದು ರಾತ್ರಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ತಮಿಳುನಾಡು ಪುದುಕೈ ಅತ್ತಾಣಿ ತಾಲೂಕಿನ ಅಗ್ರಹಾರ ಕುಡಿಯಿರಪ್ಪ್ ಕಾಲನಿಯ ಮಾರಿ ಮುತ್ತು ಆಲಿಯಾಸ್ ಶ್ರೀಧರ ಆಲಿಯಾಸ್ ಮೊಹಮ್ಮದ್ ಅಶ್ರಫ್ (40), ಬಂಟ್ವಾಳ ಕರುವಪ್ಪಾಡಿ ಮೀತಡ್ಕ ಪದ್ಯಾಣ ಹೌಸ್ನ ಅಬ್ದುಲ್ ಸಲಾಂ (30) ಮತ್ತು ಹಾಸನ ಅರಕಲಗೂಡು ದೊಡ್ಡಮಗ್ಗೆ ಬಳಿಯ ಮಗ್ಗ ಕಾವಲ್ ಮಂತ್ರವಾದಿ ರಂಗಣ್ಣ (45) ಆರೋಪಿಗಳಾಗಿದ್ದಾರೆ.
ಬಾಲಕಿಗೆ ಕಿರುಕುಳ :
ಆರೋಪಿ ತಪ್ಪಿತಸ್ಥ
ಕಾಸರಗೋಡು: ಒಂಬತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ನೀಲೇಶ್ವರ ಕರಿಂದಳಂ ಓಮಶೆÏàರಿ ಇಲಾಡತ್ತ್ ಹೌಸ್ನ ಸದಾಶಿವನ್ ಇ.ಆರ್. (45) ತಪ್ಪಿತಸ್ಥನೆಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ) ತೀರ್ಪು ನೀಡಿದೆ. 2015ರ ಫೆ. 22ರಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದರು.
ಮೂರನೇ ಪಾಸ್ಪೋರ್ಟ್ ಪಡೆಯಲು ಯತ್ನಿಸುತ್ತಿದ್ದಾಗ ಬಂಧನ
ಹೊಸದುರ್ಗ: ಎರಡು ಪಾಸ್ಪೋರ್ಟ್ನ್ನು ಇರಿಸಿಕೊಂಡ ಪ್ರಕರಣದ ಆರೋಪಿ ಮೂರನೇ ಪಾಸ್ಪೋರ್ಟ್ ಪಡೆಯಲೆತ್ನಿಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.ಕಾಂಞಂಗಾಡ್ ನೋರ್ತ್ ಕೋಟ್ಟಚ್ಚೇರಿಯ ಶಮೀರ್ ಯಾನೆ ಲಾವಾ ಶಮೀರ್ (30)ನನ್ನು ಸೆ. 6ರಂದು ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಈತ ಹೊಡೆದಾಟ ಸಹಿತ ವಿವಿಧ ಪ್ರಕರಣಗಳಲ್ಲಿ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
ರೈಲಿನ ಕಿಟಕಿ ಬಾಗಿಲು ಬಿದ್ದು ವಿದ್ಯಾರ್ಥಿನಿಗೆ ಗಾಯ
ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅದರ ಕಿಟಕಿ ಕೈ ಮೇಲೆ ಬಿದ್ದು ಕಣ್ಣೂರು ತಾಳೆಚೊವ್ವ ನಿವಾಸಿ ಮಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿರುವ ರಸ್ಲಿàನ್(22) ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಬಾಲಕನ ಸ್ಕೂಟರ್ ಸವಾರಿ:ತಂದೆ ವಿರುದ್ಧ ಕೇಸು
ಬದಿಯಡ್ಕ: ಅಪ್ರಾಪ್ತ ವಯಸ್ಕ ಬಾಲಕ ಸ್ಕೂಟರ್ ಚಲಾಯಿಸಿದ ಆರೋಪದಲ್ಲಿ ಆತನ ತಂದೆ ಚೆಂಗಳ ನಾಲ್ಕನೇ ಮೈಲು ನಿವಾಸಿ ಶರೀಫ್ ಬಿ.ಎಂ. (41) ವಿರುದ್ಧ ಕೇಸು ದಾಖಲಿಸಲಾಗಿದೆ. ಸ್ಕೂಟರನ್ನು ಮಾನ್ಯದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರೈಲು ಢಿಕ್ಕಿ : ಮಹಿಳೆಯ ಸಾವು
ಕಾಸರಗೋಡು: ತೃಕ್ಕರಿಪುರ ತೈಕುಂಬಾಡ್ನಲ್ಲಿ ರೈಲು ಢಿಕ್ಕಿ ಹೊಡೆದು ತೆಕ್ಕುಂಬಾಡಿನ ವಿ.ಕುಂಞಂಬು ಅವರ ಪತ್ನಿ ಕಲ್ಯಾಣಿ ಸಾವಿಗೀಡಾದರು.
ಮಟ್ಕಾ : ಇಬ್ಬರ ಬಂಧನ
ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಬದಿಯಡ್ಕ ಪೇಟೆ ನಿವಾಸಿಗಳಾದ ನಿಶಾಂತ್ (31), ಪ್ರದೀಪ್ (22)ನನ್ನು ಪೊಲೀಸರು ಬಂಧಿಸಿದ್ದು, ಇವರಿಂದ 740 ರೂ. ವಶಪಡಿಸಿಕೊಂಡಿದ್ದಾರೆ.
ಹಲ್ಲೆಯಿಂದ ಗಾಯ
ಕುಂಬಳೆ: ಉಪ್ಪಳ ಮೂಸೋಡಿ ನಿವಾಸಿ ಮೂಸಾ (54) ಹಲ್ಲೆಯಿಂದ ಗಾಯಗೊಂಡಿದ್ದು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರು ಸಹೋದರಿಯರು ಹಲ್ಲೆ ಮಾಡಿದ್ದಾಗಿ ಗಾಯಾಳು ಆರೋಪಿಸಿದ್ದಾರೆ.
ಬೀದಿ ದೀಪಕ್ಕೆ ಹಾನಿ
ಕಾಸರಗೋಡು: ಮೇಲ್ಪರಂಬ ಬಳಿಯ ಕೀಯೂರು ಪಶ್ಚಿಮ ಬೀಚ್ನಲ್ಲಿ ಸ್ಥಾಪಿಸಿದ್ದ ಎಲ್ಇಡಿ ಬೀದಿ ದೀಪವನ್ನು ಸಮಾಜದ್ರೋಹಿಗಳು ನಾಶಪಡಿಸಿದ್ದಾರೆ. ಈ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡಲಾಗಿದೆ.